ಮಂಡ್ಯ ಜಿಪಂ ಸಿಇಒ ರೋಹಿಣಿ ಸಿಂಧೂರಿ ಅಧಿಕಾರ ಸ್ವೀಕಾರ
ಮಂಡ್ಯ: ಮಂಡ್ಯ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಿರ್ಗಮಿತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಸಿ. ಜಯಣ್ಣ ಅವರಿಂದ ಸೋಮವಾರ ಅಧಿಕಾರ ವಹಿಸಿಕೊಂಡರು. 2009ನೇ ಸಾಲಿನ ಐಎಎಸ್ ಅಧಿಕಾರಿಯಾಗಿರುವ ರೋಹಣಿ, ಮೊದಲು ತುಮಕೂರು ಉಪ ವಿಭಾಗದ ಸಹಾಯಕ ಆಯುಕ್ತ (ಉಪ ವಿಭಾಗಾಧಿಕಾರಿ)ರಾಗಿ 2011ರ ಆಗಸ್ಟ್ನಿಂದ 2012ರ ಆಗಸ್ಟ್ವರೆಗೆ ಸೇವೆ ಸಲ್ಲಿಸಿದ್ದಾರೆ. 2012ರ ಆಗಸ್ಟ್ನಿಂದ ಡಿಸೆಂಬರ್ವರೆಗೆ ತುಮಕೂರು ನಗರಸಭೆಯಲ್ಲಿ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪಂಚಾಯತ್ರಾಜ್ ಇಲಾಖೆಯ ಸ್ವಯಂ ಉದ್ಯೋಗ ಕಾರ್ಯಕ್ರಮದ ನಿರ್ದೇಶಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
ಹೆಸರು ದಾಖಲು ಮಾಡಿಕೊಳ್ಳಿ
ಮಂಡ್ಯ: ಮನೆಯಲ್ಲಿ ಶೌಚಾಲಯ ಹೊಂದಿಲ್ಲದವರು ಜೂ.10 ರಂದು ಮಂಗಳವಾರ ಸಂಜೆ 5.30ರ ವರೆಗೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗೆ ತೆರಳಿ ತಪ್ಪದೆ ಹೆಸರು ದಾಖಲಿಸಿಕೊಳ್ಳುವಂತೆ ಜಿಲ್ಲಾ ಪಂಚಾಯ್ತಿ ಸಿಇಒ ರೋಹಣಿ ಸಿಂಧೂರಿ ತಿಳಿಸಿದ್ದಾರೆ. ಬೇಸ್ ಲೈನ್ ಸಮೀಕ್ಷೆ 2012ರ ಪ್ರಕಾರ ಈಗಾಗಲೇ ಶೌಚಾಲಯ ರಹಿತ ಹಾಗೂ ಶೌಚಾಲಯ ಸಹಿತ ಕುಟುಂಬಗಳ ಮಾಹಿತಿಯನ್ನು ಪಂಚತಂತ್ರಾಂಶದಲ್ಲಿ ಅಳವಡಿಸಲು ಪ್ರಕ್ರಿಯೆಯು ನಡೆಯುತ್ತಿದೆ. ಜೂನ್ 10ರಂದು ಸಂಜೆ 5.30ಕ್ಕೆ ಈ ಪ್ರಕ್ರಿಯೆ ಕೊನೆಗೊಳ್ಳುತ್ತದೆ.
ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಭಾರತೀನಗರ: ಮದ್ದೂರು ತಾಲೂಕು ಪತ್ರಿಕಾವರದಿಗಾರರ ಸಂಘ ಹಾಗೂ ಚಿರಪೌಂಡೇಷನ್ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿಹೆಚ್ಚು ಅಂಕಪಡೆದ 10 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಾಲಾ ಮಟ್ಟದಲ್ಲಿ ಪ್ರತಿಶಾಲೆಯಿಂದ ಅತಿಹೆಚ್ಚು ಅಂಕಪಡೆದ ತಲಾ ಒಬ್ಬ ವಿದ್ಯಾರ್ಥಿಗೆ ಪ್ರತಿಭಾಪುರಸ್ಕಾರ ನೀಡಲಾಗುವುದು. ವಿವರಗಳಿಗೆ ತಾಲೂಕು ಪತ್ರಿಕಾವರದಿಗಾರರ ಸಂಘದ ಅಧ್ಯಕ್ಷ ಅಣ್ಣೂರು ಸತೀಶ್, ಅಂಚೆ ವಿಳಾಸ ಸೊಗಸು ಸ್ಟುಡಿಯೊ, ಮಳವಳ್ಳಿ ಮದ್ದೂರು ಮುಖ್ಯರಸ್ತೆ, ಕೆ.ಎಂ.ದೊಡ್ಡಿ. ಮೊ. 924212033, 9742448081 ಹಾಗೂ ಚಿರಪೌಂಡೇಷನ್ನ ಕಾರ್ಯದರ್ಶಿ, ಶಿವಪುರ ಸತೀಶ್, ಅಂಚೆ ವಿಳಾಸ- ಶ್ರೀರಾಮಮಂದಿರ ರಸ್ತೆ, ಶಿವಪುರ, ಮದ್ದೂರು. ಮೊ.ಸಂ. 8553955585, 8884659564 ಹಾಗೂ ಚಿರಪೌಂಡೇಷನ್ನ ಸಂಚಾಲಕ ಹತಗೂರು ನಿಂಗಪ್ಪ ಮೊ.ಸಂ.8105140354 ರವರುಗಳನ್ನು ಸಂಪರ್ಕಿಸಹುದು.
ಪಡಿತರ ವಿತರಿಸದೆ ಅನ್ಯಾಯ: ಆರೋಪ
ಮೇಲುಕೋಟೆ: ವ್ಯವಸಾಯ ಸಹಕಾರ ಸಂಘದಲ್ಲಿ ಗ್ರಾಹಕರಿಗೆ ಜೂನ್ ಮಾಹೆಯ ಪಡಿತರ ವಿತರಿಸದೆ ಅನ್ಯಾಯ ಮಾಡಲಾಗುತ್ತಿದೆ ಎಂದು ರೈತ ಸಂಘದ ಜಿ.ರಮೇಶ್ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವ್ಯವಸಾಯ ಸಹಕಾರ ಸಂಘದಿಂದ ನೀಡುವ ಪಡಿತರ ವಿತರಿಸಲು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

