ಬೆಂಗಳೂರು ಗ್ರಾಮಾಂತರ

ಸಂಭ್ರಮದ ಮಾರಮ್ಮದೇವಿ ಊರಹಬ್ಬ

Published On :

ದೊಡ್ಡಬಳ್ಳಾಪುರ: ಇಲ್ಲಿನ ಕುಚ್ಚಪ್ಪನಪೇಟೆಯಲ್ಲಿರುವ ಪುರಾತನ ಶ್ರೀಮಾರಮ್ಮ ದೇವಿ ದೇವಾಲಯದಲ್ಲಿ 3 ದಿನಗಳಿಂದ ಊರಹಬ್ಬದ ಸಂಭ್ರಮ ಮನೆಮಾಡಿದೆ. ಹಲವು ವರ್ಷಗಳ ನಂತರ ಮತ್ತೆ ಊರಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಬಡಾವಣೆಯಲ್ಲಿ ಭಕ್ತರ ಸಂಭ್ರಮಕ್ಕೆ ಕಾರಣವಾಗಿದೆ.
ಜಾತ್ರಾ ಹಾಗೂ ಊರಹಬ್ಬದ ಅಂಗವಾಗಿ ಶ್ರೀಮಾತೆಯನ್ನು ಪ್ರತಿಷ್ಠಾಪಿಸಲಾಗಿದೆ. ನೂರಾರು ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ವಿಶೇಷವಾಗಿ ಮಹಿಳೆಯರು ಹೊಂಬಾಳೆ ಹೂಗಳು ಸೇರಿದಂತೆ ತಂಬಿಟ್ಟು, ಅಕ್ಕಿಯಾರತಿ ಮಾಡಿ ಶ್ರೀಮಾತೆಗೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಅಂಗವಾಗಿ ಮಾರಮ್ಮ ದೇವಿಗೆ ವಿಶೇಷವಾಗಿ ಕರಗದ ಅಲಂಕಾರ ಮಾಡಲಾಗಿತ್ತು. ಕುಚ್ಚಪ್ಪನಪೇಟೆ, ವೀರಭದ್ರನಪಾಳ್ಯ, ತೇರಿನಬೀದಿ, ತಿಪ್ಪಾಪುರ, ಸಂಜಯನಗರದ ಜನ ಭಾಗವಹಿಸಿದ್ದರು. ಊರಿನಲ್ಲಿ ಸಾಂಕ್ರಾಮಿಕ ರೋಗ ಹರಡದಿರಲಿ. ಮಳೆ-ಬೆಳೆ ಚನ್ನಾಗಿ ಆಗಿ ಜನ ಸಮೃದ್ಧಿಯಿಂದ ಬದುಕುವಂತಾಗಲಿ ಎಂಬ ಲೋಕಕಲ್ಯಾಣದ ಆಶಯದಲ್ಲಿ ಈ ಊರಹಬ್ಬ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
ವಿವಿಧ ದೇವತೆಗಳಿಗೆ ಆರತಿ: ಇದೇ ಸಂದರ್ಭದಲ್ಲಿ ವಿವಿಧ ಪ್ರದೇಶಗಳ ಜನರು ಒಟ್ಟುಗೂಡಿ, ಮಹಿಳೆಯರು ಹೂ ಆರತಿಗಳನ್ನು ಹೊತ್ತು ಊರಿನ ವಿವಿಧ ದೇವಾಲಯಗಳಿಗೆ ತೆರಳಿ ಆರತಿ ಸಲ್ಲಿಸಿದರು.
 ಇಲ್ಲಿನ ಬಯಲು ಬಸವಣ್ಣ ಶ್ರೀ ಆಂಜನೇಯಸ್ವಾಮಿ, ಶ್ರೀಮುತ್ಯಾಲಮ್ಮ ದೇವಿ, ದೊಡ್ಡಮ್ಮ ದೇವಿ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿ ಆರತಿ ಸಲ್ಲಿಸಿ ಪೂಜಾದಿ ಕಾರ್ಯಕ್ರಮಗಳನ್ನು ನೆರವೇರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.