ಬೆಂಗಳೂರು ಗ್ರಾಮಾಂತರ

ಕರಾಟೆ ಕಲಿಯುವುದರಿಂದ ಹೆಣ್ಣು ಮಕ್ಕಳ ವಿಶ್ವಾಸಕ್ಕೆ ಬಲ: ಶಿಹಾನ್ ಸಂದೀಪ್ ಸೆಲ್ವಿ

Published On :

ವಿಜಯಪುರ: ಇಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೆ ಕರಾಟೆಗಳಂತಹ ಆತ್ಮರಕ್ಷಣಾ ಕಲಿಕೆಗೂ ಮಹತ್ವವಿದೆ. ಇದನ್ನು ಪೋಷಕರು  ಅಥೈಸಿಕೊಳ್ಳಬೇಕು ಎಂದು ಮಹಾರಾಷ್ಟ್ರ ಮೂಲದ ಕರಾಟೆ ಫೆಡರೇಷನ್‌ನ ಶಿಹಾನ್ ಸಂದೀಪ್ ಸೆಲ್ವಿ ತಿಳಿಸಿದರು.
ಅವರು ಇಲ್ಲಿನ ಗಿರಿಜಾಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 11 ಶಾಲೆಗಳ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ತೀರ್ಪುಗಾರರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕರಾಟೆ ವಿದ್ಯೆಯನ್ನು ಹೆಣ್ಣು ಮಕ್ಕಳು ಕಲಿಯುವುದರಿಂದ  ಆತ್ಮಸ್ಥೈರ್ಯ ಹೆಚ್ಚುವುದು. ಇದರಿಂದ ಸಮಾಜದಲ್ಲಿ ಒಂದು ದೊಡ್ಡ ರೀತಿಯ ಪಿಡುಗಾದ ದೌರ್ಜನ್ಯ, ಆತ್ಯಾಚಾರ, ದಬ್ಬಾಳಿಕೆಗಳಿಗೆ ಕಡಿವಾಣ ಬೀಳುವುದರಲ್ಲಿ ಸಂಶಯವಿಲ್ಲ ಎಂದರು. ಅಧ್ಯಕ್ಷತೆ ವಹಿಸಿದ್ದ ಎಂ. ಸತೀಶ್ ಕುಮಾರ್ ಮಾತನಾಡಿ ಕರಾಟೆಯಿಂದ ಉತ್ತಮ ಆರೋಗ್ಯ, ಶಿಸ್ತು, ಮತ್ತಿತರ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬಹುದು ಎಂದರು.
ಮತ್ತೊಬ್ಬ ತೀರ್ಪುಗಾರರಾದ ಮೊಹಮ್ಮದ್ ಜಬಿವುಲ್ಲಾ ಮಾತನಾಡಿ ಈ ವಿದ್ಯೆಯಿಂದ ಅನುಕೂಲವಾಗುವ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ನಾರಾಯಣ ಇ ಟೆಕ್ನಿಕೋ ಶಾಲೆಯ ಪ್ರಿನ್ಸಿಪಾಲ್ ಕಿಶೋರ್ ಮಂಡೂರ್ ಜ್ಞಾನ ದೀಪ ಆಕಾಡೆಮಿ ಶಾಲೆಯ ಆಡಾಳಿತಾಧಿಕಾರಿ ಪ್ರಹ್ಲಾದ್, ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಪ್ರಗತಿ ಶಾಲೆಯಿಂದ 15 ವಿದ್ಯಾರ್ಥಿಗಳು ಭಾಗವಹಿಸಿದ್ದು ವೈಷ್ಣವಿ ಪ್ರಥಮ, ಸನೀಯ ಪ್ರಥಮ, ಇನ್ನುಳಿದ ವಿದ್ಯಾರ್ಥಿಗಳು ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ. ಕಾರ್ಯಕ್ರಮದ ಆಯೋಜಕರಾಗಿರುವ ಜಂಗಮಕೋಟೆಯ ಬಿ.ಎಚ್. ಸಾಬುಲಾಲ್, ಕರಾಟೆ ಶಿಕ್ಷಕರಾಗಿರುವ ಎಸ್.ನೂರುಲ್ಲಾ ಹಾಗೂ ಎಸ್.ಮೊಹಮ್ಮದ್ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.