ಕನ್ನಡ ಬೆಳೆಯಲು ಹಲವು ಸಾಹಿತಿಗಳ ಅಪಾರ ಕಾಣಿಕೆ
ನೆಲಮಂಗಲ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಹಲವಾರು ಮಹನೀಯರು ಕನ್ನಡ ಭಾಷೆಯನ್ನು ಬೆಳೆಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅವರೆಲ್ಲ ಚಿರಸ್ಮರಣೀಯರು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನೆ. ವಿಶ್ವನಾಥ್ ತಿಳಿಸಿದರು.
ಅವರು ಪಟ್ಟಣದ ಪವಾಡ ಶ್ರೀ ಬಸವಣ್ಣದೇವರ ಮಠದ ಆವರಣದಲ್ಲಿ ನಡೆದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ ಮೇರು ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ದೇವುಡು, ನಾ.ಕಸ್ತೂರಿ ನಿತ್ಯೋತ್ಸವ ಕವಿ ನಿಸ್ಸಾರ್ ಅಹಮದ್, ದ.ರಾ.ಬೇಂದ್ರೆ ಸೇರಿದಂತೆ ಇನ್ನೂ ಹಲವರು ನಮ್ಮ ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿದ್ದಾರೆ. ಇವರ ಸಾಧನೆ ಕನ್ನಡದ ಯುವ ಶಕ್ತಿಗೆ ಪ್ರೇರಣೆಯಾಗಬೇಕು ಎಂದರು.
ಸಾಹಿತ್ಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕನ್ನಡ ಭಾಷೆಯ ಸಿರಿಯನ್ನು ಬೆಳೆಸಬೇಕು ಎಂದು ಸಾನಿಧ್ಯ ವಹಿಸಿದ್ದ ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಹೇಳಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬೇಗೂರು ರಾಮಲಿಂಗಪ್ಪ ಮಾತನಾಡಿ ಕನ್ನಡ ಭಾಷೆಯೇ ನಮ್ಮ ಉಸಿರಾಗಲಿ, ಭಾಷೆಯ ಉಳಿವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗೋಣ ಎಂದು ಕನ್ನಡ ಧ್ವಜವನ್ನು ಪ್ರಸ್ತುತ ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿದರು.
ಕೈಜೋಡಿಸಿ: ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ವೇದಿಕೆ, ಯುವ ಸಾಹಿತಿ ಕವಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದರೊಂದಿಗೆ ಕನ್ನಡ ಭವನ ನಿರ್ಮಿಸಲು ಅಧಿಕಾರಿಗಳು, ಕನ್ನಡಾಭಿಮಾನಿಗಳು, ಜನಪ್ರತಿನಿಧಿಗಳು ಪ್ರತಿಯೊಬ್ಬರು ಕೈಜೋಡಿಸುವಂತೆ ತಾಲೂಕು ಕ.ಸಾ.ಪ ಅಧ್ಯಕ್ಷ ಎನ್.ರಾಜಶೇಖರ್ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹುಲಿಕಲ್ ನಟರಾಜ್ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ಲಕ್ಷ ರು. ಮೌಲ್ಯದ ಚೆಕ್ ವಿತರಿಸಿದರು. ಶಿವಗಂಗೆಯ ಮೇಲಣಗವಿ ಮಠದ ಶ್ರೀ ಮಲಯಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಸ್ಮರಣ ಸಂಚಿಕೆ ಬಿಡುಗಡೆ: ಜಿ.ಪಂ.ಸದಸ್ಯ ಬಿ.ಎಂ.ಎಲ್.ಕಾಂತರಾಜು ಸ್ಮರಣಸಂಚಿಕೆ ಬಿಡುಗಡೆ ಮಾಡಿದರು. ಶ್ರೀ ಸಿದ್ದಲಿಂಗಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪುಸ್ತಕ ಮಳಿಗೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ ಉದ್ಘಾಟಿಸಿದರು.
ಇತಿಹಾಸ ಸಂಶೋಧಕ ಹೆಚ್.ಎಸ್.ಗೋಪಾಲ್ರಾವ್, ತಾ.ಪಂ. ಅಧ್ಯಕ್ಷೆ ಸರಸ್ವತಿ, ತಾಲೂಕು ಕ.ಸಾ.ಪ ಮಾಜಿ ಅಧ್ಯಕ್ಷರಾದ ಗೋಪಾಲ್, ಪುರಸಭೆ ಮಾಜಿ ಅಧ್ಯಕ್ಷ ಉಮಾಶಂಕರ್, ಗೌರವ ಕಾರ್ಯದರ್ಶಿ ಗೌಹರ್ ಜಾನ್, ಜಿಲ್ಲಾ ಕ.ಸಾ.ಪ ಕಾರ್ಯದರ್ಶಿ ಕೆ.ಬಿ.ಸದಾನಂದ ಆರಾಧ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಾಸುದೇವಮೂರ್ತಿ, ಹೋಬಳಿ ಮುಖ್ಯಸ್ಥರಾದ ಗಂಗಾಧರ್, ರವಿ, ಬಿದಲೂರು ಸೋಮಶೇಖರ್, ಜಾಹಿರಾತು ಸಮಿತಿ ಅಧ್ಯಕ್ಷ ಕೇಶವಮೂರ್ತಿ ಇದ್ದರು.
ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಪ್ರಾಂಶುಪಾಲ ಹೆಚ್.ಬಿ.ಪ್ರಕಾಶ್ ವರ್ತಮಾನದಲ್ಲಿ ಯುವಜನತೆಯ ನಡೆನುಡಿ ಕುರಿತಾದ, ಕಲಾವಿದ ಬಿ.ರಾಮಯ್ಯ ಜಾನಪದ ಕಲೆ ನೆಲೆ ಹಿನ್ನೆಲೆ, ಉಪನ್ಯಾಸಕ ಮಧುಸೂಧನ ಸಾಮಾಜಿಕ ನೆಲೆಗಟ್ಟಿನ ಉಳಿವು ಅಳಿವು ಸೇರಿದಂತೆ ವರದರಾಜಶ್ರೇಷ್ಠಿ, ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯಾಪಾರೀಕರಣ ವಿಚಾರಗಳು ಚರ್ಚೆಯಾದವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚಿ.ಮಾ.ಸುಧಾಕರ್ ಮುಖ್ಯ ಅತಿಥಿಗಳಾಗಿದ್ದರು. ವಿಚಾರ ಗೋಷ್ಠಿಯ ಆಶಯ ನುಡಿಯನ್ನು ವೈದ್ಯ ಜಯಪ್ರಸಾದ್, ಅಧ್ಯಕ್ಷತೆಯನ್ನು ಎಂ.ವಿ.ನೆಗಳೂರ್ ವಹಿಸಿದ್ದರು.
ಕವಿಗೋಷ್ಠಿಯಲ್ಲಿ ಕವಿಯತ್ರಿ ಕಮಲಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಬಿದಲೂರು ಸೋಮಶೇಖರ್, ಜಿ.ಎಂ.ರುದ್ರಾರಾಧ್ಯ, ಜಮೀರ್ ಪಾಷ, ಕಂಡಕ್ಟರ್ ಗಂಗಾಧರ್, ಸ್ನೇಕ್ಲೋಕೇಶ್, ಯಶೋಧ, ಉಪನ್ಯಾಸಕಿ ಅಕ್ಕಮಹಾದೇವಿ, ಶಿವಕುಮಾರಿ, ಉಪನ್ಯಾಸಕಿ ರೇಣುಕಾ, ಸದಾನಂದಾರಾಧ್ಯ, ಶಿಕ್ಷಕಿ ಶೈಲಜಾ ಮತ್ತಿತರರು ಭಾಗವಹಿಸಿ ತಮ್ಮ ಕವನವಾಚನ ಮಾಡಿದರು. ಪಟ್ಟಣದಲ್ಲಿ ನಡೆದ ಅಕ್ಷರ ಜಾತ್ರೆಯ ಪ್ರಾರಂಭದಲ್ಲಿ ಗಂಗರಸರ ವೇದಿಕೆ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ತಹಸೀಲ್ದಾರ್ ಡಾ.ಗೀತಾ ಹಾರಿಸಿದರೆ, ಪರಿಷತ್ತಿನ ಧ್ವಜವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ರಾಜಶೇಖರ್, ಕನ್ನಡದ ಧ್ವಜಾರೋಹಣವನ್ನು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನೆರವೇರಿಸಿದರು.
ಸಮ್ಮೇಳನದ ನಿರ್ಣಯ: ಪಟ್ಟಣದಲ್ಲಿ ನಡೆದ 7ನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಮುಂಬರುವ ದಿನಗಳಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನಲ್ಲಿ ವರ್ಷದೊಳಗಾಗಿ ಕನ್ನಡ ಭವನ ನಿರ್ಮಾಣ ಮಾಡುವುದು, ಸಾಹಿತ್ಯಾಭಿರುಚಿ ಬೆಳೆಸಲು ನಿರಂತರ ಕನ್ನಡದ ಕಾರ್ಯಕ್ರಮಗಳನ್ನು ಪರಿಷತ್ತಿನಿಂದ ಆಯೋಜಿಸುವುದು, ಶಾಶ್ವತ ನೀರಾವರಿ ಯೋಜನೆಗಾಗಿ ಪರಮಶಿವಯ್ಯ ವರದಿ ಜಾರಿಗಾಗಿ ಒತ್ತಾಯಿಸುವುದು, ಕುಮದ್ವತಿ ನದಿ ಜಲಾನಯನ ಪ್ರದೇಶವನ್ನು ರಕ್ಷಿಸಲು ಕಾರ್ಯಕ್ರಮ ರೂಪಿಸುವುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದಂತಹ ಗಣ್ಯರಾದ ನರಸಿಂಹಮೂರ್ತಿ, ಸುಶೀಲಮ್ಮ, ಪೈಲ್ವಾನ್ ನಾಗರಾಜು, ಪೈಲ್ವಾನ್ ಶಿವಣ್ಣ, ಮಂಜುನಾಥ್, ಹುಚ್ಚಪ್ಪ, ಮಂಜುನಾಥ್, ರವಿ, ಲಾತವ್ಯ ಬುಧ್ಯ ಅವರನ್ನು ಗೌರವಿಸಲಾಯಿತು. ವಲಕಲ್ಲು ಮಠದ ಶ್ರೀ ಬಸವರಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು.
ಹರಿದಾಡಲಿ: ಸಮಾರೋಪ ಸಮಾರಂಭದಲ್ಲಿ ದಲಿತ ಸಾಹಿತಿ ಎಲ್.ಹನುಮಂತಯ್ಯ ಮಾತನಾಡಿ, ಕನ್ನಡ ಭಾಷೆ ಬೆಳೆಸುವಲ್ಲಿ ಪ್ರತಿಯೊಬ್ಬರಲ್ಲೂ ಕನ್ನಡ ಹರಿದಾಡಬೇಕು ಎಂದರು.
ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಪ್ರತಿಯೊಬ್ಬರನ್ನು ಸಾಹಿತ್ಯಾಸಕ್ತರನ್ನಾಗಿಸುವ ಕಾರ್ಯವಾಗಬೇಕು ಎಂದರು. ವೇದಿಕೆಯಲ್ಲಿ ತಾ.ಬಿಜೆಪಿ ಜಗದೀಶ್ಪ್ರಸಾದ್, ದೇವನಹಳ್ಳಿ ಕ.ಸಾ.ಪ ಅಧ್ಯಕ್ಷ ರಾಜ್ಗೋಪಾಲ್, ಹೊಸಕೋಟೆ ಕ.ಸಾ.ಪ.ಅಧ್ಯಕ್ಷ ಶ್ರೀಕಾಂತ್, ಖಲೀಮುಲ್ಲಾ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಂಗರಾಜು ಇದ್ದರು.
ಪೆರುಮಾಳ್ ನೃತ್ಯ ಕಲಾ ಕೇಂದ್ರದಿಂದ ಭರತನಾಟ್ಯ, ಶ್ವೇತಪ್ರಭು ತಂಡದವರಿಂದ ಸುಗಮ ಸಂಗೀತ, ಪ್ರತಿಭಾರಂಗದ ವತಿಯಿಂದ ಸಾಮಾಜಿ ನಾಟಕ ಹಾಗೂ ಹುಲಿಕಲ್ ನಟರಾಜುರವರಿಂದ ಪವಾಡಗಳ ಅನಾವರಣ ಕಾರ್ಯಕ್ರಮಗಳು ನಡೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

