ಸುಂಕ ವಸೂಲಿ ಗುತ್ತಿಗೆ ವಿಚಾರ: ಕೊಚ್ಚಿ ಕೊಲೆ
ಕನಕಪುರ: ಹೊರವಲಯದ ಕಲ್ಲಹಳ್ಳಿ ಗ್ರಾಮದ ಪೈಪ್ಲೈನ್ ರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತಪಟ್ಟ ವ್ಯಕ್ತಿ ಕಲ್ಲಹಳ್ಳಿ ಕಾಲೋನಿಯ ಕೆ.ಪಿ.ಚಂದ್ರ ಎಂದು ತಿಳಿದುಬಂದಿದೆ. ಕಳೆದ ತಿಂಗಳು ನಡೆದ ಕಲ್ಲಹಳ್ಳಿ ಶ್ರೀನಿವಾಸ ಸ್ವಾಮಿ ಬ್ರಹ್ಮರಥೋತ್ಸವ ಸಮಯದಲ್ಲಿನ ಸುಂಕ ವಸೂಲಿ ಗುತ್ತಿಗೆ ವಿಚಾರವೇ ಕೊಲೆಗೆ ಕಾರಣವೆಂದು ತಿಳಿದುಬಂದಿದೆ.
ಕಲ್ಲಹಳ್ಳಿ ಜಾತ್ರೆಯ ವಾಹನಗಳ ಸುಂಕ ಹರಾಜು ಸಂದೀಪ್ ಎಂಬುವವರು ಪಡೆದಿದ್ದರು. ಸಂದೀಪ ಅವರು ಉಮೇಶ್ ಹಾಗೂ ಕನಕಪುರದ ಕೆಲವು ಸ್ನೇಹಿತರೊಂದಿಗೆ ಸುಂಕ ವಸೂಲಿ ಮಾಡುತ್ತಿದ್ದರು. ಗ್ರಾಮಸ್ಥರಿಂದಲೂ ಸುಂಕ ವಸೂಲಿಗೆ ಮುಂದಾದಾಗ ಕಲ್ಲಹಳ್ಳಿಯ ಚಂದ್ರ ಮತ್ತು ಕೆಲವು ಯುವಕರೊಂದಿಗೆ ವಿವಾದ ನಡೆದಿತ್ತು.
ಈ ಮಧ್ಯೆ ಬೂದಿಮುಚ್ಚಿದ ಕೆಂಡದಂತಿದ್ದ ವಿವಾದ ವಿಕೋಪಕ್ಕೆ ತಿರುಗಿ ಬುಧವಾರ ಬೆಳಗ್ಗೆ ಚಂದ್ರುವನ್ನು ಟಾಟಾ ಇಂಡಿಕಾ ವಾಹನದಲ್ಲಿ ಆಗಮಿಸಿದ ಆಗಂತುಕರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಚಂದ್ರನನ್ನು ಕಾರಿನಿಂದ ಗುದ್ದಿ ಬೀಳಿಸಿ ಮಚ್ಚು, ಲಾಂಗುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವ ಹಾಗೂ ಗಾಯಗಳಿಂದ ಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ವಿಷಯ ತಿಳಿದ ಚಂದ್ರನ ಸ್ನೇಹಿತರು, ಸಂಬಂಧಿಕರು ಕೊಲೆ ಆರೋಪಿಗಳು ಎಂದು ಭಾವಿಸಲಾದ ಕಲ್ಲಹಳ್ಳಿಯ ಉಮೇಶ್, ಸಂತೋಷ್, ರಘು ಮನೆಗಳ ಮೇಲೆ ದಾಳಿ ನಡೆಸಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠ ಕುಲದೀಪ್ ಜೈನ್, ವೃತ ್ತನಿರೀಕ್ಷಕ ಸಿದ್ಧೇಗೌಡ ಆಗಮಿಸಿ ಪರಿಶೀಲನೆ ನಡೆಸಿದರು. ದಾಳಿ ನಡೆದ ಮನೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದರು. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

