ಮುಕ್ತ, ನಿರ್ಭೀತ ಚುನಾವಣೆಗೆ ಸಜ್ಜು: ಡಾ.ವಿಶ್ವನಾಥ್
ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ 2497 ಮತಗಟ್ಟೆಗಳನ್ನು ತೆರೆಯಲಾಗಿದೆ. ಮುಕ್ತ, ನಿರ್ಭೀತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಜ್ಜುಗೊಳ್ಳಲಾಗಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಡಾ.ಡಿ.ಎಸ್. ವಿಶ್ವನಾಥ್ ಹೇಳಿದರು.
ಕ್ಷೇತ್ರದಲ್ಲಿ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ದೂರುಗಳನ್ನು ಸ್ವೀಕರಿಸಲು ದಿನದ 24 ತಾಸು ಕಾರ್ಯ ನಿರ್ವಹಿಸುವ ಕಂಟ್ರೋಲಲ್ರೂಂ ತೆರೆಯಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಚುನಾವಣೆ ಪ್ರಕ್ರಿಯೆ: ಮಾ.19ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಮಾ.26ರವರೆಗೂ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಾ.27ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ನಾಮಪತ್ರ ಹಿಂಪಡೆಯಲು ಮಾ.29ರ ವರೆಗೆ ಕಾಲಾವಕಾಶವಿರುತ್ತದೆ. ಅಂದು ಮಧ್ಯಾಹ್ನ 3ಕ್ಕೆ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಮಾ.17ಕ್ಕೆ ಮತದಾನ, ಮೇ 16ಕ್ಕೆ ಮತಗಳ ಎಣಿಕೆ ನಡೆಯಲಿದೆ. ಮೇ 28ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.
ಅಫಿಡವಿಟ್ ಕಡ್ಡಾಯ: ಅಭ್ಯರ್ಥಿಗಳು ಚುನಾವಣಾ ಆಯೋಗದ ನಿಗದಿತ ನಮೂನೆ 2ಎ ಜತೆಗೆ ಪರಿಷ್ಕರಿಸಲ್ಪಟ್ಟ ನಮೂನೆ 26ರಲ್ಲಿ ಅಫಿಡವಿಟ್ ಸಲ್ಲಿಸುವುದು ಕಡ್ಡಾಯ. ಅಭ್ಯರ್ಥಿ ಖುದ್ದಾಗಿ ಇಲ್ಲವೇ ಸೂಚಕರ ಮುಖೇನ ನಾಮಪತ್ರ ಸಲ್ಲಿಸಬಹುದು ಎಂದು ಅವರು ಹೇಳಿದರು.
ರಾಮನಗರ ಜಿಲ್ಲಾಡಳಿತ ಕಚೇರಿಯಲ್ಲಿ ಮಾ.19 ರಿಂದ 26ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರೊಳಗೆ ನಾಮಪತ್ರ ಸಲ್ಲಿಸಬಹುದು. ಪ್ರಸಕ್ತ ಚುನಾವಣೆಯ ಎಲ್ಲ ಮತಗಟ್ಟೆಗಳಲ್ಲೂ ವಿದ್ಯುನ್ಮಾನ ಮತ ಯಂತ್ರಗಳನ್ನು ಅಳವಡಿಸಲಿದ್ದು, ಅವನ್ನು ಈಗಾಗಲೇ ಪರಿಶೀಲಿಸಲಾಗಿದೆ ಎಂದರು.
ಗುರುತಿನ ಚೀಟಿ ಅಗತ್ಯ: ಮತ ಚಲಾಯಿಸಲು ಮತದಾರರು ಚುನಾವಣಾ ಆಯೋಗ ನೀಡಿರುವ ಭಾವಚಿತ್ರ ಸಹಿತ ಗುರುತಿನ ಚೀಟಿ ಇಲ್ಲವೇ ಆಯೋಗ ಆಯೋಗ ನಿಗದಿಪಡಿಸಿದ ಪರ್ಯಾಯ ಗುರುತಿನ ಚೀಟಿಗಳ ಪೈಕಿ ಒಂದನ್ನು ಹಾಜರುಪಡಿಸುವುದು ಅಗತ್ಯ ಎಂದು ನುಡಿದರು.
ಚನ್ನಪಟ್ಟಣದಲ್ಲಿ ಬುಧವಾರ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ನೀತಿ ಸಂಹಿತೆ ಉಲ್ಲಂಘನೆ ಮತ್ತು ತಹಸೀಲ್ದಾರ್ ಶಿವರುದ್ರಪ್ಪ ಕರ್ತವ್ಯಲೋಪ ಕುರಿತು ಲಿಖಿತ ದೂರು ಸಲ್ಲಿಕೆಯಾದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಎಂಸಿಸಿ ಮುಖ್ಯಸ್ಥರು
ರಾಮನಗರ ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಪಾಲನೆ ತಂಡದ ಮುಖ್ಯಸ್ಥರನ್ನಾಗಿ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಾಲ್ಯನಾಯಕ್ ಅವರನ್ನು ನೇಮಿಸಿದ್ದು, ಅವರ ಮೊ.9880092391 ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ವಿಶ್ವನಾಥ್ ತಿಳಿಸಿದರು.
* ರಾಮನಗರ ನಗರ ವ್ಯಾಪ್ತಿಗೆ ನಗರಸಭೆ ಆಯುಕ್ತ ಯಶವಂತಕುಮಾರ್, ಮೊ.9448166974, ಗ್ರಾಮಾಂತರಕ್ಕೆ ತಾ.ಪಂ. ಇಒ ವೆಂಕಟೇಶಯ್ಯ, ಮೊ.9880640449, ಚನ್ನಪಟ್ಟಣ ನಗರಕ್ಕೆ ಪೌರಾಯುಕ್ತ ಕೆ.ಜಗದೀಶ್, ಮೊ.9448511231, ಗ್ರಾಮಾಂತರಕ್ಕೆ ತಾ.ಪಂ. ಇಒ ರವಿಕುಮಾರ್, ಮೊ.94808755100 ನೇಮಕವಾಗಿದ್ದಾರೆ ಎಂದರು.
* ಕನಕಪುರ ಪಟ್ಟಣ ವ್ಯಾಪ್ತಿಗೆ ಪುರಸಭೆ ಮುಖ್ಯಾಧಿಕಾರಿ ಮಾಯಣ್ಣಗೌಡ, ಮೊ.9448045397, ಗ್ರಾಮಾಂತರಕ್ಕೆ ತಾಪಂ. ಇಒ ಜೆ.ಜೆ.ನಾಯಕ್, ಮೊ.9242015832, ಮಾಗಡಿ ಪಟ್ಟಣ ವ್ಯಾಪ್ತಿಗೆ ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ, ಮೊ.9902880630, ಗ್ರಾಮಾಂತರಕ್ಕೆ ತಾ.ಪಂ. ಇಒ ಅಕ್ವಾಜಿ, ಮೊ.9352526698 ನಿಯೋಜನೆಗೊಂಡಿದ್ದಾರೆ ಎಂದು ಹೇಳಿದರು.
ಕಂಟ್ರೋಲ್ ರೂಂ
ದೂರು ಸ್ವೀಕರಿಸಲು ದಿನದ 24 ತಾಸು ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂಗಳನ್ನು ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ತೆರೆಯಲಾಗಿದ್ದು, ವಿವರ ಇಂತಿದೆ.
ಜಿಲ್ಲಾಧಿಕಾರಿ ಕಚೇರಿ 080-27276615, ಉಪ ವಿಭಾಗಾಧಿಕಾರಿ ಕಚೇರಿ 080-27271229, ರಾಮನಗರ ತಾಲೂಕು ಕಚೇರಿ 080-27307173, ಚನ್ನಪಟ್ಟಣ ತಾಲೂಕು ಕಚೇರಿ 080-27256136, ಕನಕಪುರ ತಾಲೂಕು ಕಚೇರಿ 080-27522442, ಮಾಗಡಿ ತಾಲೂಕು ಕಚೇರಿ 080-27745651.
ವಿವರಗಳಿಗೆ ಸಂಪರ್ಕಿಸಿ
ನೀತಿ ಸಂಹಿತೆ ಉಲ್ಲಂಘನೆ ದೂರು, ಕಂಟ್ರೋಲ್ ರೂಂ ಕಾರ್ಯನಿರ್ವಹಣೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳಿಗಾಗಿ ತಹಸೀಲ್ದಾರ್ ಅವರನ್ನು ಸಂಪರ್ಕಿಸಬಹುದು. ಅವರ ಮೊ- ರಾಮನಗರ-9739829154, ಚನ್ನಪಟ್ಟಣ-9844495235, ಕನಕಪುರ - 9663859297, ಮಾಗಡಿ-9448734321.
ಕ್ಷೇತ್ರವಾರು ಮತದಾರರು
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ 1076000 ಪುರುಷರು, 1000666 ಮಹಿಳೆಯರು, 219 ಇತರರು ಸೇರಿದಂತೆ 2076885 ಮತದಾರರಿದ್ದಾರೆ. ಮಾಗಡಿಯಲ್ಲಿ 203831, ರಾಮನಗರದಲ್ಲಿ 182926, ಕನಕಪುರದಲ್ಲಿ 212266, ಚನ್ನಪಟ್ಟಣದಲ್ಲಿ 203386, ಕುಣಿಗಲ್ ಕ್ಷೇತ್ರದಲ್ಲಿ 173792, ರಾಜರಾಜೇಶ್ವರಿನಗರದಲ್ಲಿ 349885, ಬೆಂಗಳೂರು ದಕ್ಷಿಣದಲ್ಲಿ 461520, ಆನೇಕಲ್ನಲ್ಲಿ 289279 ಮತದಾರರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

