ಬೆಂಗಳೂರು ಗ್ರಾಮಾಂತರ

ಮೊಯ್ಲಿರನ್ನು ತವರಿಗೆ ವಾಪಸ್ ಕಳಿಸೋಣ ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ

Published On :

ವಿಜಯಪುರ: ತಾಲೂಕಿನಲ್ಲಿಯೇ ದೊಡ್ಡ ಪಂಚಾಯಿತಿಯಾದ ಯಲಿಯೂರು ಗ್ರಾಮದ ಕಡೆ ಖ 5 ವರ್ಷಗಳಲ್ಲಿ ಮೊಯ್ಲಿಯವರು ಒಮ್ಮೆಯೂ ಬಂದಿಲ್ಲ, ಏಕೆಂದರೆ ಅವರಿಗೆ ಪಂಚಾಯಿತಿ ಇದೆ ಎನ್ನುವುದೇ ಗೊತ್ತಿಲ್ಲ.ಬಿಜೆಪಿ ಸರ್ಕಾರದಲ್ಲಿ ಶಾಶ್ವತ ನೀರಾವರಿಗೆ ಸಾಕಷ್ಟು ಹಣವನ್ನು ಬಜೆಟ್‌ನಲ್ಲಿ ಮಂಡಿಸಲಾಗಿತ್ತು. ಆದರೆ ಈಗಿನ ಸರ್ಕಾರ ಅದರಲ್ಲಿಯೂ ವೀರಪ್ಪ ಮೊಯ್ಲಿ ತಾವೇ ಮಾಡಿದ ರೀತಿಯಲ್ಲಿ ಕಟೌಟುಗಳನ್ನು ಹಾಕಿಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇಂತಹ ಸುಳ್ಳು ಹೇಳುವ ವ್ಯಕ್ತಿ ನಮಗೆ ಬೇಕಾ ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಟೀಕಿಸಿದರು.
ಅವರು ಪಟ್ಟಣ ಸಮೀಪದ ಯಲಿಯೂರು ಗ್ರಾಮದಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕೇಂದ್ರದ ಪ್ರಭಾವಿ ರಾಜಕಾರಣಿ ಹಾಗೂ ಉನ್ನತ ಸ್ಥಾನದಲ್ಲಿದ್ದು ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರಿಗೆ ಸುಳ್ಳು ಭರವಸೆಗಳನ್ನು ಹೇಳುತ್ತಾ ತಮ್ಮ ಜವಾಬ್ದಾರಿ ಮರೆತಿರುವ ಇಂತಹ ರಾಜಕಾರಣಿಯನ್ನು ಅವರ ತವರೂರಿಗೆ ವಾಪಸ್ ಕಳಿಸೋಣ ಎಂದರು. ಪ್ರಸ್ತುತ ದಿನಗಳಲ್ಲಿ ರಾಷ್ಟ್ರದ ಅಭಿವೃದ್ಧಿ ಹಾಗೂ ರಾಷ್ಟ್ರ ರಕ್ಷಣೆಗೆ ನರೇಂದ್ರ ಮೋದಿಯಂತಹ ನಾಯಕನ ಅವಶ್ಯಕತೆ ಇದೆ. ಇದನ್ನು ಎಲ್ಲರೂ ಮನಗಂಡು ಈ ಬಾರಿ ಕಮಲ ಚಿಹ್ನೆಗೆ ಮತ ನೀಡಿ ಮೋದಿಯವರ ಕೈ ಬಲಪಡಿಸೋಣ ಎಂದು ತಿಳಿಸಿದರು. ಬೆಂಡಗಾನ ಹಳ್ಳಿಯ ಬಿಜೆಪಿ ಹಿರಿಯ ಮುಖಂಡ ಗೋಪಾಲಗೌಡ ಮಾತನಾಡಿ ಮೊಯ್ಲಿಯವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಶ್ರೀ ಸಾಮಾನ್ಯನ ಮತದಾರರ ನೆನಪು ಬರುತ್ತದೆ. ಆದರೆ ಅಧಿಕಾರ ಗದ್ದುಗೆಯಲ್ಲಿದ್ದಾಗ ಕಿಂಚಿತ್ತೂ ನೆನಪು ಬರುವುದಿಲ್ಲ ಎಂದು ಆರೋಪಿಸಿದರು.
ಮಾಜಿ ಶಾಸಕ ಚಂದ್ರಣ್ಣ, ರೈತ ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ, ಎ.ಸಿ.ಗುರುಸ್ವಾಮಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ನಾಗೇಶ್, ರಾಜ್ಯ ಪರಿಷತ್ ಸದಸ್ಯ ದೇಸಾಯಿ ನಾಗರಾಜ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.