ಬೆಂಗಳೂರು ಗ್ರಾಮಾಂತರ

ದೌರ್ಜನ್ಯ ವಿರುದ್ಧ ಯುವ ಸಮುದಾಯ ಜಾಗೃತರಾಗಲಿ: ನಂದಿನಿ

Published On :

ಚನ್ನಪಟ್ಟಣ: ಸಾಮಾಜಿಕ ದೌರ್ಜನ್ಯ ವಿರುದ್ಧ ಯುವ ಸಮುದಾಯ ಜಾಗೃತ ಗೊಳ್ಳ ಬೇಕೆಂದು ಪ್ರೊಬೇಷನರಿ ಡಿವೈಎಸ್ಪಿ ಸಿ.ಎಸ್.ನಂದಿನಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸೃಜನ ಕನ್ನಡ ಸಂಘ ಮತ್ತು ಐಸಿಪಿಆರ್‌ಡಿ ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಕಷ್ಟು ಕಾಯಿದೆಗಳು ಜಾರಿಯಲ್ಲಿದ್ದರೂ ಮಹಿಳೆಯರ ಮೇಲಿನ ಶೋಷಣೆ ಇನ್ನೂ ನಿಂತಿಲ್ಲ ಎಂದು ವಿಷಾದಿಸಿದರು.
ಬಾಲ್ಯ ವಿವಾಹ, ವರದಕ್ಷಿಣೆ, ಅತ್ಯಾಚಾರ, ಲೈಂಗಿಕ ಕಿರುಕುಳ, ಸ್ತ್ರೀದೌರ್ಜನ್ಯ ಇನ್ನೂ ನಡೆಯುತ್ತಿದ್ದು ಕಾಯಿದೆ ಜತೆಗೆ ವಿದ್ಯಾವಂತ ಯುವ ಜನರು ಇವುಗಳ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
 ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಮಹಿಳೆಯರ ಮೇಲೆ ಶೋಷಣೆ ಹೆಚ್ಚಾಗಿ ನಡೆಸುತ್ತಿದ್ದು, ವಿದ್ಯೆ ಜತೆಗೆ ವಿವೇಕ ಕಲಿಯುತ್ತಿಲ್ಲ.
 ನಾವು ವಿದ್ಯಾವಂತರಾಗುವ ಜತೆಗೆ ನಾಗರೀಕರಾಗುವ ಪ್ರಯತ್ನವನ್ನು ಮಾಡಬೇಕಿದೆ.  ಈ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅಗತ್ಯತೆ ಸಾಕಷ್ಟಿದೆ ಎಂದು ತಿಳಿಸಿದರು. ವಿಚಾರವಾದಿ ಒಕ್ಕೂಟದ ಸಂಚಾಲಕ ಸು.ನಾ.ನಂದಕುಮಾರ್, ಬಳಕೆ ಮತ್ತು ಲಿಪಿಯ ಹಾದಿಯಲ್ಲಿ ಶಿಷ್ಟತೆಯನ್ನು ರೂಪಿಸಿ ಕೊಂಡಿರುವ ಕನ್ನಡ ಕಂಪ್ಯೂಟರ್, ಇಂಟರ್‌ನೆಟ್‌ನಂತಹ ಸಂವಹನ ಕ್ಷೇತ್ರದಲ್ಲಿ ಶಿಷ್ಟತೆಯನ್ನು ರೂಪಿಸಿ ಕೊಳ್ಳುವ ಮೂಲಕ ಹೊಸ ಸವಾಲಿನ ಜತೆಗೆ ಹೋರಾಡಲು ಸಜ್ಜಾಗ ಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಕನ್ನಡವನ್ನು ಕಂಪ್ಯೂಟರೀಕರಣ ಗೊಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಯ ಬೇಕಿದ್ದು, ಸರ್ಕಾರ ಮತ್ತು ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ವಿಭಾಗ ಮುಖ್ಯಸ್ಥ ಡಾ. ಬಿ.ಟಿ.ನೇತ್ರಾವತಿ ಗೌಡ, ಸೃಜನ ಕನ್ನಡ ಸಂಘವನ್ನು ರಚಿಸುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ಅಗತ್ಯವಿರುವ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು ನಮ್ಮ ಸಂಘ ನಿರಂತರ ಕನ್ನಡ ಕೆಲಸವನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು. ಕಾಲೇಜು ಪ್ರಾಂಶುಪಾಲ ಲಿಂಗಣ್ಣಯ್ಯ, ಐಸಿಪಿಆರ್‌ಡಿ ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ನೀಲಂ ಪ್ರಕಾಶ್, ಜಿಲ್ಲಾ ಸಂಚಾಲಕ ಗೋಪಾ ರಾಮನ್, ಕಾಲೇಜಿನ ಸಹಪ್ರಾಧ್ಯಾಪಕ ಮಧುಸೂದನಾಚಾರ್ಯ ಜೋಷಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಕ್ಷಿತಾ ಸ್ವಾಗತಿಸಿದರು. ಅಭಿಷೇಕ್ ವಂದಿಸಿದರು. ಯೋಗೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.