ಬೆಂಗಳೂರು ಗ್ರಾಮಾಂತರ

ಪಡಿತರ ಚೀಟಿ ನೀಡಿ ಇಲ್ಲ ಕಚೇರಿ ಮುಚ್ಚಿ: ಪದ್ಮನಾಭ್

Published On :

ಆನೇಕಲ್: ಪಟ್ಟಣದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಬಹುತೇಕ ಜನರು ಬಡತನ ರೇಖೆಗಿಂತ ಕಡಿಮೆ ಆದಾಯದವರಾಗಿದ್ದಾರೆ. ಅರ್ಹರನ್ನು ಗುರ್ತಿಸಿ ಶೀಘ್ರ ಪಡಿತರ ಕಾರ್ಡ್ ನೀಡಬೇಕೆಂದು  ಪುರಸಭೆಯ ಜೆಡಿಎಸ್ ಸದಸ್ಯ ಪದ್ಮನಾಭ ಆಗ್ರಹಿಸಿದ್ದಾರೆ. ಅವರು ತಾಲೂಕು ಕಚೇರಿ ಪಡಿತರ ಚೀಟಿ ನೀಡುವ ವಿಭಾಗದಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಸದುದ್ದೇಶದಿಂದ ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಅಧಿಕಾರಿಗಳು ಜಾರಿಯಲ್ಲಿ ವಿಳಂಬ ಹಾಗೂ ಪಕ್ಷಪಾತ ಮಾಡುತ್ತಿರುವುದು ಖಂಡನೀಯ ಎಂದು ಪದ್ಮನಾಭ್ ಹೇಳಿದರು.
ಪಟ್ಟಣದಲ್ಲಿ 23 ವಾರ್ಡುಗಳಿದ್ದು ನೇಕಾರರು, ಕಾರ್ಮಿಕರು, ಅಸಂಘಟಿತ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ದಿನದ ಕೂಲಿಯನ್ನೇ ನಂಬಿಕೊಂಡಿರುವ ಇವರು ಜಾತಿ ಪ್ರಮಾಣ ಪತ್ರ, ಆದಾಯ ಪತ್ರ, ಪಡಿತರ ಚೀಟಿ, ಆಧಾರ್‌ಕಾರ್ಡ್ ನೆಪದಲ್ಲಿ ದಿನವಿಡಿ ಕಚೇರಿ ಬಾಗಿಲಲ್ಲಿದ್ದರೆ ಸಂಸಾರ ನಡೆಯುವುದೆಂತು. ಒಂದು ವಾರ್ಡಿಗೆ 50 ರಿಂದ 100 ಬಿಪಿಎಲ್ ಕಾರ್ಡ್ ಗುರ್ತಿಸಿದ್ದು ಕೇವಲ 5 ರಿಂದ 10 ಕಾರ್ಡ್ ನೀಡಿದ್ದಾರೆ. ಉಳಿಕೆ ಕಾರ್ಡುಗಳನ್ನು ಪಲಾನುಭವಿಗೆ ನೀಡುವ ದಿನಾಂಕ ಹಾಗೂ ಸ್ಥಳ ತಿಳಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್, ವಿಶೇಷ ತಹಸೀಲ್ದಾರ್ ಆಗಲಿ ಇಲ್ಲ. ಇರುವ ಒಬ್ಬರೇ ಶಿರಸ್ತೇದಾರ್ ಎಲ್ಲವನ್ನೂ ನಿಭಾಯಿಯಲು ಆಗುತ್ತಿಲ್ಲ. ಜಿಲ್ಲಾಧಿಕಾರಿಗಳು ಈ ಕೂಡಲೇ ಅಧಿಕಾರಿಗಳು ಹಾಗೂ ಆಗತ್ಯ ಸಿಬ್ಬಂದಿ ನೇಮಿಸಬೇಕೆಂತಲೂ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.