ಬೆಂಗಳೂರು ಗ್ರಾಮಾಂತರ

ಹೈನೋದ್ಯಮ ಅಭಿವೃದ್ಧಿಗೆ ತಾಂತ್ರಿಕತೆ ಅನಿವಾರ್ಯ: ಶಾಸಕ ಬಾಲಕೃಷ್ಣ

Published On :

ಮಾಗಡಿ: ಹೈನೋದ್ಯಮ ಅಭಿವೃದ್ಧಿಗೆ ತಾಂತ್ರಿಕತೆ ಅನಿವಾರ್ಯ ಎಂದು ಶಾಸಕ ಬಾಲಕೃಷ್ಣ ಹೇಳಿದರು. ತಾಲೂಕಿನ ವರದೇನಹಳ್ಳಿ ಹ್ಯಾಂಡ್‌ಪೋಸ್ಟ್‌ನಲ್ಲಿ ಬೆಂಗಳೂರು ಹಾಲು ಒಕ್ಕೂಟ ಏರ್ಪಡಿಸಿದ್ದ  ಮಿಲ್ಕ್‌ಕೂಲರ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ರೈತರ ಜೀವನಾಡಿಯಾಗಿರುವ ಹೈನೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ತಾಂತ್ರಿಕತೆ ಅಳವಡಿಸಲಾಗುತ್ತಿದೆ.
 ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಮಿಲ್ಕ್ ಕೂಲರ್ ಕೇಂದ್ರ ಆರಂಭಿಸಲಾಗುತ್ತಿದೆ. ರೈತರು ಉತ್ಪಾದಿಸುವ ಹಾಲನ್ನು ಉತ್ತಮ ರೀತಿಯಲ್ಲಿ ಶೇಖರಿಸಿ, ಗುಣಮಟ್ಟದ ಹಾಲನ್ನು ಶಿಥಲೀಕೇಂದ್ರಕ್ಕೆ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ರೈತರು ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ  ಗುಣಮಟ್ಟದ ಹಾಲು ಪೂರೈಕೆ ಮಾಡಿ, ತಮ್ಮ ಆರ್ಥಿಕವಾಗಿ ಸಬಲೀಕರಣವಾಗಬೇಕಿದೆ ಎಂದು ತಿಳಿಸಿದರು.
ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸಿ. ಮಂಜುನಾಥ್ ಮಾತನಾಡಿ ಬಿ.ಎಂ.ಸಿ. ಕೇಂದ್ರ ಸ್ಥಾಪನೆಯಿಂದ ರೈತರು ಉತ್ಪಾದಿಸುವ ಹಾಲು ಗುಣಮಟ್ಟದಿಂದ ಕೂಡಿರುತ್ತದೆ.ಹಾಲು ಪೂರೈಕೆ ಮಾಡುವ ವಾಹನ ಚಾಲಕರು ಹಾಲು ಕದಿಯುವುದನ್ನು ತಡೆಯಬಹುದು. ಜತೆಗೆ  ಸಮಯವೂ ಉಳಿತಾಯ, ಗುಣಮಟ್ಟದ ಹಾಲು ಪೂರೈಕೆಗೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲರ ವಾತಾವರಣ ನಿರ್ಮಿಸಲು ಒಕ್ಕೂಟ ಸದಾ ಸಹ ಕಂಕಣಬದ್ಧವಾಗಿದೆ ಎಂದರು.
ಬಮೂಲ್ ನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ ರೈತರ ಅನುಕೂಲಕ್ಕಾಗಿ, ಎನ್‌ಡಿಸಿ ಮತ್ತು ಎನ್‌ಸಿಡಿಸಿ ಯೋಜನೆಯಡಿ ಸುಮಾರು 15 ಲಕ್ಷ ರು ವೆಚ್ಚದಲ್ಲಿ 3 ಸಾವಿರ ಲೀಟರ್ ಹಾಲು ಶೇಖರಣೆ ಮಾಡುವ ಸಾಮರ್ಥ್ಯವುಳ್ಳ ಬಿಎಂಸಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ.ಧನಂಜಯ, ಸದಸ್ಯ ಕೆ.ಮುದ್ದುರಾಜ ಯಾದವ್, ವಿಜಯಕುಮಾರ್, ತಾಪಂ ಪ್ರಭಾರಿ ಅಧ್ಯಕ್ಷೆ ಭಾರತಿ ಮಹದೇವಯ್ಯ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ  ಅಧ್ಯಕ್ಷ ಎಸ್. ಕಾಂತರಾಜು, ತೇಜಸ್ವಿನಿ ಮುದ್ದಹನುಮೇಗೌಡ, ಬಿ.ಜೆ. ಶಿವಮೂರ್ತಿ,  ಜಯಣ್ಣ, ಗೊಲ್ಲರಪಾಳ್ಯದ ರಾಮಕೃಷ್ಣ, ಸುಜಾತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.