ಮಹಿಳೆಯರು ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಾನತೆ: ಡಾ. ಜಮುನಾ
ದೊಡ್ಡಬಳಾಪುರ: ಮಹಿಳೆಯರು, ದಲಿತರು ಮತ್ತು ಕೆಳಸ್ತರದವರು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ಬೆಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಡಾ.ಜಮುನಾ ಹೇಳಿದರು.
ಇಲ್ಲಿನ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಸಮಾನತೆ ಸಾಧ್ಯ. ಮನೆಯಿಂದಲೇ ಸಮಾನತೆ ಪ್ರಾರಂಭವಾಗಬೇಕಿದೆ. ಸಮಾನತೆಯ ಗುರಿ ಸಾಧನೆಗೆ ಮಹಿಳೆಯರು ಹೋರಾಟ ಮಾಡಬೇಕಾಗಿರುವ ಅನಿವಾರ್ಯತೆ ಇದ್ದು, ಇದಕ್ಕೆ ಪುರುಷರ ಸಹಕಾರವೂ ಮುಖ್ಯ. ಇತಿಹಾಸದ ಪಠ್ಯಗಳಲ್ಲಿ ಪುರುಷ ಪ್ರಧಾನತೆಯನ್ನು ಈಗಲೂ ಕಾಣಬಹುದಾಗಿದೆ. ರಾಜರ ಕುರಿತೇ ವೈಭವೀಕರಿಸುವ ಇತಿಹಾಸ ರಾಣಿಯರ ಕುರಿತು ಚಿಂತಿಸುವುದೇ ಇಲ್ಲ. ಮಹಿಳೆಯ ಹೋರಾಟ ಆರಂಭವಾದದ್ದು ಅಮೆರಿಕಾ ಮತ್ತು ಇಂಗ್ಲೆಡ್‌ನಲ್ಲಿ. ನೇಯ್ಗೆ ಕಾರ್ಖಾನೆಗಳಲ್ಲಿ ಮಹಿಳೆಯರು ಧ್ವನಿಯೆತ್ತಿದರು. ಯುದ್ಧ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಸಂಘದ ಅಧ್ಯಕ್ಷೆ ಎಸ್.ರಾಜಲಕ್ಷ್ಮಿ ಮಾತನಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಗಂಡು, ಹೆಣ್ಣಿನ ಪಾತ್ರ ಸಮಾನವಾಗಿರುತ್ತದೆ. ಸಾಮರಸ್ಯದ ಬದುಕು ಪುರಾಣಜನ್ಯವಾದ ಸತ್ಯ. ತಾಳ್ಮೆ ಮತ್ತು ವಿವೇಕ ಕಳೆದುಕೊಳ್ಳುತ್ತಿರುವುದೇ ಕೌಟುಂಬಿಕ ಸಮಸ್ಯೆಗಳು ಹೆಚ್ಚಲು ಕಾರಣವಾಗಿದೆ ಎಂದರು. ಸಮಾಜಶಾಸ್ತ್ರ ಉಪನ್ಯಾಸಕಿ ಕೆ.ಎನ್.ನಾಗಮಣಿ ಮಾತನಾಡಿ, ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಮಹಿಳೆಯ ಅನನ್ಯತೆಯನ್ನು ಗುರ್ತಿಸಲಾಗುತ್ತಿದೆ. ಸ್ತ್ರೀಶೋಷಣೆ ನಿಲ್ಲದೆ ಬರಿಯ ಭಾಷಣಗಳಿಂದ ಪ್ರಯೋಜನವಿಲ್ಲ ಎಂದರು.
ಆಡಳಿತ ಮಂಡಲಿಯ ಮಹಿಳಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಶಂಕರಯ್ಯ, ಉಪಾಧ್ಯಕ್ಷ ಬಿ.ಎನ್.ತಿಮ್ಮಣ್ಣ, ಗೌ.ಕಾರ್ಯದರ್ಶಿ ಎಂ.ಅಶ್ವತ್ಥಯ್ಯ, ಎ.ಜಿ.ಶ್ರೀನಿವಾಸಮೂರ್ತಿ, ಖಜಾಂಚಿ ಡಿ.ಪ್ರಭುದೇವಯ್ಯ, ನಿರ್ದೇಶಕ ವಿ.ತಿಮ್ಮಶೆಟ್ಟಪ್ಪ, ಎ.ಆರ್.ರಾಜಶೇಖರ್, ರಾಮಶೆಟ್ಟಿ, ಜಗದೀಶಬಾಬು, ಸುನಂದಮ್ಮ, ಲಲಿತಮ್ಮ, ಪ್ರಾಂಶುಪಾಲ ಪ್ರೊ.ಬಿ.ಟಿ.ಮಹದೇವ್, ಎಸ್.ಮಹಾಬಲೇಶ್ವರ್, ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಉಪನ್ಯಾಸಕರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

