ಮಣ್ಣು, ನೀರಿನ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ: ಶಂಭೂಗೌಡ
ಚನ್ನಪಟ್ಟಣ: ಮಣ್ಣು ಮತ್ತು ನೀರು ಅಮೂಲ್ಯ ಸಂಪತ್ತು. ಅದರ ಸಂರಕ್ಷಣೆ ನಿರ್ವಹಣೆ ನಮ್ಮ ನಿಮ್ಮೆಲ್ಲರ
ಆದ್ಯ ಕರ್ತವ್ಯವಾಗಬೇಕು ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಮತ್ತು ಈಸ್ಟ್ ಟ್ರೈನಿಂಗ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ಶಂಭೂಗೌಡ ತಿಳಿಸಿದರು.
ಇಲಾಖೆಯ ಕಾರ್ಯಯೋಜನೆಗಳನ್ನು ರೈತರಿಗೆ ತಿಳಿವಳಿಕೆ ನೀಡಿ ಅರಿವು ಮೂಡಿಸುವ ಗ್ರಾಮಸಭೆಯನ್ನು ಉದ್ಘಾಟಿಸಿದ ಅವರು, ಈ ನಿಟ್ಟಿನಲ್ಲಿ ಗ್ರಾಮೀಣ ಜನತೆಗೆ ಅರಿವು ಮೂಡಿಸುವಲ್ಲಿ ಸಮಗ್ರ ಜಲಾನಯನ ಯೋಜನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು. ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಹಲವು ಕಾರ್ಯಯೋಜನೆಗಳನ್ನು ರೂಪಿಸಿ ಕ್ಷೇತ್ರದ ಪರಿಣಿತರು, ಎನ್ಜಿಓಗಳ ಮೂಲಕ ಯೋಜನೆಗಳ ಮಾಹಿತಿ ನೀಡಿ ಜೃಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು ಗ್ರಾಮೀಣ ಪ್ರದೇಶದ ಜನರು ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕರೆ ನೀಡಿದರು.ಸಹಾಯಕ ಕೃಷಿ ಅಧಿಕಾರಿ ವರ ದರಾಜು ಮಾತನಾಡಿ, ನಾಗವಾರ ಗ್ರಾಮ ಪಂಚಾಯಿತಿ ಕಾರ್ಯಕಾರಿ ಸಮಿತಿ ವ್ಯಾಪ್ತಿಗೆ ನಾಗವಾರ ಕೆಲಗೆರೆ ಸೇರಿದಂತೆ ಏಳು ಹಳ್ಳಿಗಳು ಒಳಪಟ್ಟಿವೆ. ಇಲಾಖೆಯ ಕಾರ್ಯಯೋಜನೆ ಜತೆಗೆ ಮಣ್ಣು, ನೀರು ಸಂರಕ್ಷಣೆ ನಿರ್ವಹಣೆ ಕೃಷಿ, ಕೃಷಿಯೇತರ ಚಟುವಟಿಕೆ ಅಭಿವೃದ್ಧಿ ಮುಂತಾದ ವಿಚಾರಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಲಾಗುತ್ತಿದೆ ಎಂದರು. ಜಾಥಾ, ಬೀದಿ ನಾಟಕಗಳ ಮೂಲಕ ರೈತರಿಗೆ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿ ನಿವ್ವಳ ಯೋಜನೆ ತಯಾರು ಮಾಡಲು ಕುಟುಂಬ ಸಮೀಕ್ಷೆ ಮಾಡಲು ಬಂದಾಗ ಯಾವುದೇ ಅಪಪ್ರಚಾರ ಒಡಕು ಧ್ವನಿಗಳಿಗೆ ಕಿವಿಗೊಡದೆ ಪೂರ್ಣ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

