ಬ್ರೆಜಿಲ್‌ನ ಭೂರಹಿತ ಕಾರ್ಮಿಕರ ಚಳವಳಿ ಮುಂದಾಳು ಭೇಟಿ
ಚನ್ನಪಟ್ಟಣ: ಕಳೆದ 27 ವಷಗಳ ಹಿಂದೆ ರೈತಸಂಘದ ನೇತೃತ್ವದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿ ಅಮೂಲ್ಯ ಗ್ರಾನೈಟ್ ಸಂಪತ್ತನ್ನು ಉಳಿಸುವ ಮೂಲಕ ತಾಲೂಕಿನ ಚಳವಳಿಗಳ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಆಣಿಗೆರೆ ಬೆಟ್ಟಕ್ಕೆ ಬ್ರೆಜಿಲ್‌ನ ಭೂರಹಿತ ಕಾರ್ಮಿಕರ ಚಳವಳಿ ಮುಂದಾಳು ಅಡಾಲ್ಬರ್ಟೋ ಮಾರ್ಟಿನ್ ನೇತೃತ್ವದ ತಂಡ ಭೇಟಿ ನೀಡಿ ಹೋರಾಟದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದರು.
ಈಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ಮುಖ್ಯಸ್ಥ ಮಾರ್ಟಿನ್ ನಮ್ಮ ದೇಶದಲ್ಲಿ ಕಳೆದ 30 ವರ್ಷಗಳಿಂದ ಭೂರಹಿತರು ಚಳವಳಿ ನಡೆಸುತ್ತಿದ್ದು, ಅಲ್ಲಿನ ಮತ್ತು ಭಾರತದ ಚಳವಳಿಗಳ ಸಾಮ್ಯತೆ ಅರಿಯುವ ಉದ್ದೇಶದಿಂದ ಈ ದೇಶಕ್ಕೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿರುವುದಾಗಿ ಅವರು ಮಾಹಿತಿ ನೀಡಿದರು.
ಈ ಹಿಂದೆ ನಮ್ಮ ದೇಶಕ್ಕೆ ಆಗಮಿಸಿದ್ದ ಪ್ರೊ.ನಂಜುಂಡಸ್ವಾಮಿ ಚಳವಳಿಗಳ ಕುರಿತು ಸಾಕಷ್ಟು ಮಾಹಿತಿ ನೀಡಿದ್ದರು. ನಮ್ಮ ಹೋರಾಟಗಳಿಗೆ ಅವರು ಸಾಕಷ್ಟು ಪ್ರೇರಣೆ ನೀಡಿದ್ದಾರೆ ಎಂದು ತಿಳಿಸಿದರು. ಬ್ರೆಜಿಲ್ ತಂಡದ ಪದಾಧಿಕಾರಿಗಳಾದ ಲಾರಾ ವಲೆನ್ಸಿಯಾ, ಅದಿತಿ ಪಿಂಟೋ ಇನ್ನೂ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

