ಬೆಂಗಳೂರು ಗ್ರಾಮಾಂತರ

ಸುರೇಶ್, ಮುನಿರಾಜುಗೌಡ ಇಬ್ಬರೂ ಕೋಟ್ಯಧಿಪತಿಗಳೇ...

Published On :

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಮುನಿರಾಜುಗೌಡ ಅವರಿಬ್ಬರೂ ಕೋಟ್ಯಾಧಿಪತಿಗಳೇ ಆಗಿದ್ದಾರೆ. ಅವರ ಘೋಷಿತ ಆಸ್ತಿ ಮೌಲ್ಯ ಕ್ರಮವಾಗಿ ರು.85 ಕೋಟಿ ಮತ್ತು ರು.65 ಕೋಟಿಗೂ ಅಧಿಕವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಅವರ ಸ್ಥಿರ ಮತ್ತು ಚರಾಸ್ತಿ ಸೇರಿದಂತೆ ಒಟ್ಟಾರೆ ಆಸ್ತಿಮೌಲ್ಯ ರು.85.73 ಕೋಟಿ ಆಗಿದೆ. ಕೈಯಲ್ಲಿ ರು.11.96 ಲಕ್ಷ ನಗದು, ರು.13.50 ಲಕ್ಷದ ಚಿನ್ನಾಭರಣಗಳನ್ನು ಅವರು ಅಫಿಡವಿಟ್‌ನಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ 8 ಕ್ರಿಮಿನಲ್ ಮೊಕದ್ದಮೆ ಬಾಕಿ ಇವೆ. ಇನ್ನು ಬಿಜೆಪಿ ಅಭ್ಯರ್ಥಿ ಪಿ.ಮುನಿರಾಜುಗೌಡ ತಮ್ಮ ಹಾಗೂ ಪತ್ನಿ ಭವ್ಯ ಕೈಯಲ್ಲಿ ರು.8 ಲಕ್ಷ ನಗದು, 5 ಕಾರು, 4 ದ್ವಿಚಕ್ರ ವಾಹನಗಳು, ಠೇವಣಿ, ಹೂಡಿಕೆ, ಜಮೀನು, ಕಟ್ಟಡ, ನಿವೇಶನ ಸಹಿತ ಒಟ್ಟಾರೆ ರು.65.86 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ.
ಇಬ್ಬರ ವಿದ್ಯಾರ್ಹತೆಯೂ ದ್ವಿತೀಯ ಪಿಯುಸಿ ತೇರ್ಗಡೆಯಷ್ಟೇ. ಇಬ್ಬರೂ ಉದ್ಯಮಿಗಳಾಗಿದ್ದಾರೆ. ಸುರೇಶ್ ಅವರಿಗೆ 47 ವರ್ಷವಾಗಿದ್ದರೆ, ಮುನಿರಾಜುಗೌಡ ಇನ್ನೂ 35 ವಯಸ್ಸಿನವರು. ಮುನಿರಾಜುಗೌಡ ಅವರು ರಾಜ್ಯದಲ್ಲೇ ಬಿಜೆಪಿ ಟಿಕೆಟ್ ಪಡೆದಿರುವ ಅತ್ಯಂತ ಕಿರಿಯ ಎನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.