ಬೆಂಗಳೂರು ಗ್ರಾಮಾಂತರ

ಪಿ ಮತ್ತು ಜಿ ಶಿಕ್ಷಣ ಅಭಿಯಾನ

Published On :

ಆನೇಕಲ್ಲು: ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುವ ಮಕ್ಕಳಿಗೆ ಆಧುನಿಕವಾದ ಮೂಲ ಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರೋಕ್ಟರ್ ಅಂಡ್ ಗ್ಯಾಂಬಲ್ ಸಂಸ್ಥೆ ಪಿ ಮತ್ತು ಜಿ ಶಿಕ್ಷಣ ಅಭಿಯಾನದ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪ್ರಸಕ್ತ ಸಾಲಿನಲ್ಲಿ ಆನೇಕಲ್ ತಾಲೂಕಿನ ಹೆಬ್ಬಗೋಡಿ-ಕಮ್ಮಸಂದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಮ್ಮ ಆಯ್ಕೆಯಾಗಿದೆ ಎಂದು ಅಭಿಯಾನದ ರಾಯಭಾರಿಗಳಾದ ಚಿತ್ರ ನಟಿ ಪ್ರಿಯಾಂಕ ಉಪೇಂದ್ರ, ಬಿಲಿಯರ್ಡ್ಸ್-ಸ್ನೂಕರ್ ಆಟಗಾರ ಪಂಕಜ್ ಅಡ್ವಾನಿ ತಿಳಿಸಿದರು.
 ಪ್ರಿಯಾಂಕ ಉಪೇಂದ್ರ ಮಾತನಾಡಿ ಶಿಕ್ಷಣ ಮಕ್ಕಳ ಜನ್ಮಸಿದ್ಧ ಹಕ್ಕು. ಈ ಹಕ್ಕನ್ನು ಸಾಕಾರಗೊಳಿಸುವ ಕಾರ್ಯದಲ್ಲಿ ಕಾರ್ಪೊರೇಟ್ ಸಂಸ್ಥೆ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಗ್ರಾಮೀಣ ವಿದ್ಯಾರ್ಥಿಗಳು ಯೋಜನೆಯ ಉದ್ದೇಶವನ್ನು ಸಾರ್ಥಕ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
 ಸಿಇಓ ದೇವೇಂದ್ರ ಚಾವ್ಲಾ ಮಾತನಾಡಿ ಪಿ ಮತ್ತು ಜಿ ಶಿಕ್ಷಣ ಅಭಿಯಾನ ಕಾಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿದ್ದು ಪಡೇಗಾ ಇಂಡಿಯಾ ತೋ ಬಡೇಗಾ ಇಂಡಿಯಾ ಘೋಷಣೆಯಡಿ ದೇಶಾದ್ಯಂತ 220 ಕ್ಕೂ ಹೆಚ್ಚು ಶಾಲೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿದೆ.
 ರು. 28 ಕೋಟಿ ವೆಚ್ಚದ ಯೋಜನೆಯಲ್ಲಿ ಕರ್ನಾಟಕದ 25 ಶಾಲೆಗಳ 4200 ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ.
ಶಾಲೆಗಳಲ್ಲಿ ಉತ್ತಮ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಡುವ ಉದ್ದೇಶದಿಂದ ಅಭಿಯಾನ ರೂಪಗೊಂಡಿದೆ ಎಂದರು. ಪಂಕಜ್ ಅದ್ವಾನಿ ಮಾತನಾಡಿ ಕ್ರೀಡೆ, ಚಿತ್ರರಂಗ, ಉದ್ಯಮಿಗಳು ಹಾಗೂ ಶಿಕ್ಷಣ ತಜ್ಞರ ದಂಡೇ ಪಿ ಅಂಡ್ ಟಿ ಅಭಿಯಾನದ ಸಂಚಾಲಕರಾಗಿದ್ದು ಎಲ್ಲರ ಸಹಕಾರದಿಂದ ಸಾಕ್ಷರತಾ ಭಾರತ ಹಾಗೂ ಶ್ರೇಷ್ಠ ಭಾರತ ನಿರ್ಮಾಣ ಕಾರ್ಯಕ್ರಮ ಗ್ರಾಮೀಣ ಭಾರತವನ್ನು ತಲುಪುತ್ತಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.