ಬೆಂಗಳೂರು ಗ್ರಾಮಾಂತರ

ಸೋಂಪುರದ ಅಯ್ಯನತೋಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪ್ರಶಸ್ತಿ

Published On :

ನೆಲಮಂಗಲ: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ವಿವಿಧ ಮಟ್ಟದ ಪರಿಸರ ಮಿತ್ರ ಶಾಲಾ ಪ್ರಶಸ್ತಿಯನ್ನು ತಾಲೂಕಿನ ಸೋಂಪುರದ ಅಯ್ಯನತೋಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡೆದಿದ್ದು  20 ಸಾವಿರ ರು. ನಗದು ಹಾಗೂ ಪ್ರಶಂಸಾ ಪತ್ರ ಪಡೆದುಕೊಂಡಿದೆ.
 ಪ್ರಥಮ ಸ್ಥಾನ ಗಳಿಸಲು ಶಾಲೆಯ ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಸಹಶಿಕ್ಷಕರ ಸಹಕಾರದಿಂದ ಸಾಧ್ಯವಾಯಿತು ಎಂದು ಮುಖ್ಯ ಶಿಕ್ಷಕಿ ಬಿ.ಶೈಲಜಾ ಹೇಳಿದರು.
 ಮಾಚೋನಾಯಕನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಎಲಚಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವನಕಲ್ಲು ಮಲ್ಲೇಶ್ವರ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನಿಡವಂದ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ  ದ್ವಿತೀಯ ಸ್ಥಾನದೊಂದಿಗೆ ಪ್ರಶಸ್ತಿ ಮತ್ತು 2 ಸಾವಿರ ರು.ನಗದು ಬಹುಮಾನ ಪಡೆದುಕೊಂಡಿವೆ. ತೃತೀಯ ಸ್ಥಾನ ಪಡೆದ ಶಾಲೆಗಳು ಹೊನ್ನೇನಹಳ್ಳಿ, ಮೈಲನಹಳ್ಳಿ, ಮಣ್ಣೆ, ಬೆಟ್ಟಹಳ್ಳಿಪಾಳ್ಯ, ಮಲ್ಲಾಪುರ, ಜಕ್ಕನಹಳ್ಳಿ, ಅಪ್ಪಗೊಂಡನಹಳ್ಳಿ, ಮಾಚನಹಳ್ಳಿ ಕಾಲೋನಿ ಮತ್ತು ವಾಜರಹಳ್ಳಿ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ತೃತೀಯ ಸ್ಥಾನ ಗಳಿಸಿದ್ದು, ಹಳದಿ ಶಾಲೆ (ಕಿತ್ತಳೆ ಶಾಲೆ) ಪ್ರಶಸ್ತಿಯೊಂದಿಗೆ ತಲಾ ಒಂದು ಸಾವಿರ ರು.ನಗದು ಬಹುಮಾನ ಮುಡಿಗೇರಿಸಿಕೊಂಡಿವೆ.
ರಾಜ್ಯ ಮಾಲಿನ್ಯ ನಿಯಂತ್ರಣ  ಮಂಡಳಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಸೇರಿದಂತೆ 4 ಶಾಲೆಗಳು ಹಸಿರು ಶಾಲೆ (ದ್ವಿತೀಯ ಸ್ಥಾನ) ಹಾಗೂ 9 ಶಾಲೆಗಳು ಕಿತ್ತಳೆ ಶಾಲೆ (ತೃತೀಯ ಸ್ಥಾನ) ಪಡೆದಿವೆ. ಜಿಲ್ಲೆಗೆ ಮೀಸಲಿಟ್ಟ ಒಟ್ಟು 21 ಪ್ರಶಸ್ತಿಗಳ ಪೈಕಿ 14 ಪ್ರಶಸ್ತಿಗಳು ನೆಲಮಂಗಲ ತಾಲೂಕಿಗೆ ಲಭಿಸಿವೆ. ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಾನಾಯಕ್ ಪ್ರಶಸ್ತಿ ಪಡೆದ ಶಾಲಾ ಶಿಕ್ಷಕರು ಮತ್ತು ಮಕ್ಕಳನ್ನು ಅಭಿನಂದಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.