ಬೆಂಗಳೂರು ಗ್ರಾಮಾಂತರ

ಎನ್‌ಎಸ್‌ಎಸ್ ಶಿಬಿರದಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಬಾಂಧವ್ಯ

Published On :

ಕನಕಪುರಛ ಸಮುದಾಯ ಸೇವೆಯ ಮೂಲಕ ಸಮಾಜದ ಋಣವನ್ನು ತೀರಿಸಲು ರಾಷ್ಟ್ರೀಯ ಸ್ವಯಂಸೇವಾ ಯೋಜನೆ ಅವಕಾಶ ಕಲ್ಪಿಸಿಕೊಡುತ್ತದೆ. ಪರಸ್ಪರ ಸಹಕಾರ, ಸ್ನೇಹ, ಒಡನಾಟಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ತಮ ಬಾಂಧವ್ಯವನ್ನು ರೂಪಿಸುತ್ತದೆ ಎಂದು ಗ್ರಾಮವಿದ್ಯಾ ಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ. ತಿಮ್ಮಪ್ಪ ಹೇಳಿದ್ದಾರೆ.
ಅವರು ಕನಕಪುರ ತಾಲೂಕು ಕುರುಬರಹಳ್ಳಿ ಗ್ರಾಮದಲ್ಲಿ ರೂರಲ್ ಪದವಿ ಕಾಲೇಜು ಎನ್‌ಎಸ್‌ಎಸ್ ಘಟಕ ಆಯೋಜಿಸಿದ್ದ ವಿಶೇಷ ವಾರ್ಷಿಕ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಪ್ರಾಂಶುಪಾಲ ಡಾ. ಶಿವಬಸವೇಗೌಡ ಅಧ್ಯಕ್ಷತೆ ವಹಿಸಿದ್ದರು.
ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಗ್ರಾಮದ ಚರಂಡಿಗಳ ಸ್ವಚ್ಛತೆ, ರಸ್ತೆಗಳ ದುರಸ್ತಿ,ದೇವಾಲಯ ಆವರಣದ ಸ್ವಚ್ಛತೆಗಳನ್ನು ನಡೆಸಿದರು. ಶಿಬಿರಾಧಿಕಾರಿ ಕಬ್ಬಾಳೇಗೌಡ ಮಾತನಾಡಿ
ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುತ್ತವೆ, ಸಮರ್ಪಣಾ ಭಾವದಿಂದ ದುಡಿಯುವುದನ್ನು ಕಲಿಸಿಕೊಡುತ್ತವೆ. ಯಾವುದೇ ಜಾತಿ, ಮತ, ಧರ್ಮ, ಪಂಥಗಳಿಲ್ಲದೆ, ವೈಷಮ್ಯಗಳನ್ನು ಮರೆತು ಸಮಾನತೆಯಿಂದ ಬಾಳುವುದನ್ನು ಪರಿಚಯ ಮಾಡಿಕೊಡುತ್ತದೆ ಎಂದು ಹೇಳಿದರು.  ಮುಖ್ಯಅತಿಥಿಗಳಾಗಿ ಕಾರ್ಯದರ್ಶಿ ಸಿ.ರಮೇಶ್, ಜಂಟಿಕಾರ್ಯದರ್ಶಿ ಮಾನಸ ನಾಗರಾಜ್, ಶಿವಕುಮಾರ್, ಮೇಜರ್ ಮುನಿರಾಜಪ್ಪ ಆಗಮಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಚೈತನ್ಯ ಟ್ರಸ್ಟ್‌ನ ಹೊಳಸಾಲಯ್ಯ ಸಂಗಡಿಗರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಸಹಶಿಬಿರಾಧಿಕಾರಿ ಅರುಣ್‌ಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಪ್ರಸನ್ನ ನಿರೂಪಿಸಿದರು. ವಿಜೇಂದ್ರ ವಂದಿಸಿದರು.0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.