ಜನರ ದಾರಿತಪ್ಪಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ
ರಾಮನಗರ: ಆಕಸ್ಮಿಕವಾಗಿ ಕೇವಲ 20 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳನ್ನೂ ತಾವೇ ಮಾಡಿದ್ದಾಗಿ ಬುರುಡೆ ಬಿಡುವ ಮೂಲಕ ಜನರ ದಾರಿತಪ್ಪಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಟೀಕಿಸಿದರು.
ಯಾವುದೇ ಮುಖ್ಯಮಂತ್ರಿಯ ಆಡಳಿತದ ಸಾಧನೆಯನ್ನು ಜನತೆ ಸ್ಮರಿಸಬೇಕೇ ಹೊರತು ಆಡಳಿತ ನಡೆಸಿದವರಲ್ಲ. ಡಿ.ದೇವರಾಜು ಅರಸು ಅವರಿಗಿಂತ ಹೆಚ್ಚು ಅವಧಿ, ಒಳ್ಳೆಯ ಕಾರ್ಯಕ್ರಮಗಳನ್ನೇನೂ ಕುಮಾರಸ್ವಾಮಿ ನೀಡಿಲ್ಲ. ಸ್ವತಃ ಅರಸು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರಲಿಲ್ಲ ಎಂದು ನಗರದಲ್ಲಿ ಗುರುವಾರ ಜೆಡಿಎಸ್ ಕಾರ್ಯಕರ್ತರ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಹೇಳಿದರು.
ಅಳುವಿಗೆ ಸ್ಪಷ್ಟನೆ ನೀಡಲಿ: ಕುಮಾರಸ್ವಾಮಿ ಅವರು ಪದೇ ಪದೇ ಅಳೋದು ಯಾಕೆ ಅಂತ ಗೊತ್ತಾಗುತ್ತಿಲ್ಲ. ರಾಮನಗರದ ಜನ ಅವರಿಗೆ ಮಾಡಿದ ದ್ರೋಹವಾದರೂ ಏನು. ಕ್ಷೇತ್ರದ ಜನತೆ ಅವರನ್ನು ರಾಜಕೀಯವಾಗಿ ಬೆಳೆಸುವ ಮೂಲಕ ಅಧಿಕಾರ ನೀಡಿದ್ದಾರೆ. ಎಲ್ಲವನ್ನೂ ಅನುಭವಿಸಿರುವ ಕುಮಾರಸ್ವಾಮಿ ಈಗ ಅಳುತ್ತಿರುವುದು ಏಕೆನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು.
ರಾಜಕೀಯ ದೊಂಬರಾಟ: ಕುಮಾರಸ್ವಾಮಿ ಅವರು ಪದೇ ಪದೇ ಉಪ ಚುನಾವಣೆಗಳನ್ನು ಹೇರುವ ಮೂಲಕ ರಾಜಕೀಯ ದೊಂಬರಾಟ ಆಡುತ್ತಿದ್ದಾರೆ. ಚುನಾವಣೆ ಬಂದಾಗ ಅತ್ತು ಕರೆದೂ ಜನರನ್ನು ಮರಳು ಮಾಡಿ ಗೆದ್ದು ಹೋಗುತ್ತಾರೆ. ನಂತರ ರಾಜಿನಾಮೆ ನೀಡುತ್ತಾರೆ ಎಂದರು.
ಭಾಸ್ಕರ್ ಕಾಂಗ್ರೆಸ್ ಸೇರ್ಪಡೆ: ನಗರಸಭೆ ಮಾಜಿ ಅಧ್ಯಕ್ಷ ಎ.ವಿ. ಭಾಸ್ಕರ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಅವರನ್ನು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರು ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು. ನಗರಸಭೆಯ 7ನೇ ವಾರ್ಡಿನ ಬಿಜೆಪಿ ಸದಸ್ಯ ಬಿ. ನಾಗೇಶ್, ಜೆಡಿಎಸ್ ಮಹಿಳಾ ಘಟಕದ ಮುಂದಾಳು ಜಯಮ್ಮ ಕೂಡ ಕಾಂಗ್ರೆಸ್ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

