ಬೆಂಗಳೂರು ಗ್ರಾಮಾಂತರ

ನ್ಯಾಯ ಸಮ್ಮತ ಮತಕ್ಕೆ ಪಥ ಸಂಚಲನ

Published On :

ಸೂಲಿಬೆಲೆ: ಹೊಸಕೋಟೆ ತಾಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಯ ವ್ಯಾಪ್ತಿಯಲ್ಲಿರುವ ಅತಿ ಸೂಕ್ಷ್ಮ ಮತಗಟ್ಟೆಗಳ  ಪ್ರದೇಶದಲ್ಲಿ ಶುಕ್ರವಾರ ಸ್ಥಳೀಯ ಪೊಲೀಸರೊಂದಿಗೆ ಮಿಲಿಟರಿ ಪಡೆಗಳು ಪಥ ಸಂಚಲನದ ಮೂಲಕ ಜನರಲ್ಲಿ ನಿರ್ಭೀತ, ನ್ಯಾಯಸಮ್ಮತ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು.
ನಂದಗುಡಿ ಸರ್ಕಲ್ ಇನ್ಸ್‌ಪೆಕ್ಟರ್ ತಮ್ಮಯ್ಯ ಅವರ ನೇತೃತ್ವದಲ್ಲಿ ಸೂಲಿಬೆಲೆ ಪಟ್ಟಣದ ಜನತಾ ಕಾಲೊನಿ, ಮುಖ್ಯ ನಿಲ್ದಾಣ, ಹಳೇ ಬಸ್ ನಿಲ್ದಾಣ, ಡಿ.ಕ್ರಾಸ್ ಇನ್ನೂ ಮುಂತಾದ ಪ್ರದೇಶಗಳಲ್ಲಿ ಮಿಲಿಟರಿ ಸಮವಸ್ತ್ರದೊಂದಿಗೆ ಹೆಜ್ಜೆ ಹಾಕಿದ  ಪಡೆ ಮುಂಬರುವ ಏ.17 ರಂದು ನಡೆಯಲಿರುವ ಲೋಕ ಸಭಾ ಚುನಾವಣಿಯಲ್ಲಿ ಮತದಾರರು ಯಾವುದೇ ಭೀತಿ, ಹೆದರಿಕೆ ಇಲ್ಲದೇ ಪ್ರತಿಯೊಬ್ಬರು ಮತದಾನ ಮಾಡಿ. ನಿಮ್ಮಂದಿಗೆ ನಾವಿದ್ದೇವೆ ಎಂಬುದನ್ನು ಸಾರಿದರು. ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸ್ ಹಾಗೂ ಮಿಲಿಟರಿ ಬೂಟು ಸದ್ದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಣಿ ಮಾಡಿದರು.
ಅರಸನಹಳ್ಳಿಯಲ್ಲಿ: ಹೋಬಳಿಯ ಅರಸನಹಳ್ಳಿ ಗ್ರಾಮದಲ್ಲಿ ಪ್ರತಿ ಚುನಾವಣಿ ವೇಳೆ ಗಲಭೆಗಳಾಗುತ್ತಿದ್ದು, ಈ ಬಾರಿ ಹೆಚ್ಚಿನ ಪೊಲೀಸ್ ಪಡೆ ಇದೆ. ಮತದಾನದ ವೇಳೆ ಕಿಡಿಗೇಡಿಗಳು ಬಾಲ ಬಿಚ್ಚಿದರೇ ತಕ್ಕ ಪಾಠವಾಗುತ್ತದೆ ಎಂಬುದನ್ನು ಅಲ್ಲಿನ ಗ್ರಾಮಸ್ಥರಿಗೆ ತಿಳಿಸುವ ಉದ್ದೇಶದಿಂದ ಮಿಲಿಟರಿ ಪಡೆ, ಪೊಲೀಸರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲ ಮಾಡಿದರು. ಗ್ರಾಮದ ಮತದಾರರಲ್ಲಿ ನಿರ್ಭೀತ ಮತದಾನಕ್ಕಾಗಿ ಅರಿವು ಮೂಡಿಸಿದರು.
ನಂದಗುಡಿಯಲ್ಲಿ: ಹೋಬಳಿಯ ತಾವರೆಕೆರೆ, ಶಿವನಾಪುರ, ಬೈಲುನರಸಾಪುರ ಗ್ರಾಮಗಳಲ್ಲಿ ಮಿಲಿಟರಿ, ಪೊಲೀಸರು ಶುಕ್ರವಾರ ಪಥ ಸಂಚಲನದ ಮೂಲಕ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಿದರು. ನಂದಗುಡಿ ಪಿಎಸ್‌ಐ ಪ್ರಕಾಶ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.