ಯುಗಾದಿಗೆ ಮಾಗಡಿ ಸಜ್ಜು, ಎಲ್ಲೆಡೆ ಸಂಭ್ರಮ
ಮಾಗಡಿ: ಯುಗಾದಿ ಹಬ್ಬದ ಆಚರಣೆಗೆ ತಾಲೂಕಿನ ಜನತೆ ಸಜ್ಜಾಗುತ್ತಿದ್ದಾರೆ. ಯುಗಾದಿ ಹಬ್ಬವು ಹಿಂದುಗಳ ವರ್ಷಾರಂಭದ ಮೊದಲ ಹಬ್ಬವಾಗಿದೆ.
ಮಾಗಡಿ ತಾಲೂಕಿನ ಐತಿಹಾಸಿಕ ತಿರುಮಲೆ ಶ್ರೀರಂಗನಾಥಸ್ವಾಮಿ ದೇವರ ಜಾತ್ರಾ ಮಹೋತ್ಸವದ ಆರಂಭಕ್ಕೆ ಯುಗಾದಿ ಹಬ್ಬದ ದಿನವೇ ರಥಕ್ಕೆ ಆಯಗೋಲು ನೆಡುವುದು ನಡೆದು ಬಂದಿದೆ. ಅದೇ ರೀತಿ ಈ ಬಾರಿಯೂ ಮಾ.31 ರ ಸೋಮವಾರ ಸಂಜೆ 5 ಗಂಟೆಗೆ ರಥ ನಿರ್ಮಾಣಕ್ಕೆ ಆಗಮಿಕರು ಶಾಸ್ತ್ರೋತ್ತವಾಗಿ ಪೂಜೆ ಸಲ್ಲಿಸುವ ಮೂಲಕ ಆಯಗೋಲು ಸ್ಥಾಪನೆ ಮಾಡಲಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ಶ್ರೀರಂಗನಾಥಸ್ವಾಮಿ ಸನ್ನಿಗೆ ಆಗಮಸಿ ಶ್ರದ್ಧಾಭಕ್ತಿಯಿಂದ ಪೂಜಿಸುವ ಮೂಲಕ ತಮ್ಮ ನೂತನ ವರ್ಷಾರಂಭವನ್ನು ಸಂಭ್ರಮಿಸಲಿದ್ದಾರೆ.
ದನಗಳ ಜಾತ್ರೆ: ತಿರುಮಲೆ ಶ್ರೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ ಇಲ್ಲಿ ದನಗಳ ಜಾತ್ರೆ ನಡೆಯುವುದು ವಿಶೇಷ. ಈ ಬಾರಿಯೂ ಯುಗಾದಿ ಹಬ್ಬದ ಮುನ್ನಾ ದಿನವೇ ದನಗಳೆಲ್ಲ ಸೇರುತ್ತಿವೆ. ನೀರಿನ ಸಮಸ್ಯೆಗಳ ನಡುವೆಯೂ ದನಗಳ ಜಾತ್ರೆ ಸೇರುತ್ತಿವೆ. ಒಂದೆಡೆ ಇಲ್ಲಿ ಚುನಾವಣೆಯ ಕಾವೇರುತ್ತಿದೆ. ಮತ್ತೊಂದೆಡೆ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ನಡೆದಿದೆ. ಮತ್ತೊಂದೆಡೆ ದಿನೇ ದಿನೇ ಬಿಸಿಲಿನ ತಾಪಮಾನವೂ ಹೆಚ್ಚಾಗುತ್ತಿದೆ. ತಾಲೂಕು ಆಡಳಿತ ಜಾತ್ರೆಗೆ ಬರುವ ಜನ, ದನಗಳಿಗೆ ನೀರಿನ ಸಮಸ್ಯೆ ಹೇಗೆ ನಿಭಾಯಿಸುತ್ತಾರೆ ಎಂಬ ಆತಂಕ ನಾಗರಿಕರಲ್ಲಿ ಉಂಡಾಗಿದೆ.
ಪಂಚಾಂಗ ಶ್ರವಣ: ಮಾ.31 ರ ಸಂಜೆ 6ಕ್ಕೆ ತಿರುಮಲೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನೂತನ ವರ್ಷಾರಂಭದ ಪಂಚಾಂಗವನ್ನು ದೇವರ ಮುಂದಿಟ್ಟು ಪೂಜಿಸಿ, ಇಲ್ಲಿನ ಆಗಮಿಕರು ಮಳೆ, ಬೆಳೆ, ರಾಶಿಫಲ ಶ್ರವಣ ಮಾಡಲಿದ್ದಾರೆ.
15 ಕೆ.ಜಿ. ತೂಕದ ಬೆಳ್ಳಿ ಕಿರೀಟ ಸಮರ್ಪಣೆ ಇಂದು
ಮಾಗಡಿ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ತಿರುಮಲೆ ಶ್ರೀರಂಗನಾಥಸ್ವಾಮಿ ಮೂಲ ದೇವರಿಗೆ ಹಾಗೂ ಅಮ್ಮನವರಿಗೆ ಶ್ರೀರಂಗ ಸೇವಾ ಟ್ರಸ್ಟ್ ವತಿಯಿಂದ ಸುಮಾರು 10 ಲಕ್ಷ ರು. ಮೌಲ್ಯದ 15 ಕೆ.ಜಿ. ತೂಕದ ಬೆಳ್ಳಿ ಕಿರೀಟ, ವಜ್ರಾಂಗಿ ಅಭರಣಗಳನ್ನು ಯುಗಾದಿ ಹಬ್ಬ ಪ್ರಯುಕ್ತ ಮಾ.31 ರಂದು ಬೆ. 8 ಗಂಟೆಗೆ ದೇವರಿಗೆ ಸಮರ್ಪಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಟಿ.ಎಸ್. ಸತೀಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

