ಶಿಕ್ಷಣ ಸಂಸ್ಥೆಗಳು ದುರ್ಬಲರ ಮಕ್ಕಳಿಗೆ ಆದ್ಯತೆ ನೀಡಲಿ
ಬೆಂಗಳೂರು: ರೈತರು, ಆರ್ಥಿಕ ದುರ್ಬಲರು ಹಾಗೂ ಹಿಂದುಳಿದ ವರ್ಗಗಳ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥ್ಥೆಗಳು ಹೆಚ್ಚು ಗಮನಹರಿಸಬೇಕು ಎಂದು ಸುಪ್ರೀಂ ಕೋರ್ಟ್ನ ನ್ಯಾಯಾಧೀಶ ವಿ. ಗೋಪಾಲಗೌಡ ಹೇಳಿದರು.
ಎಂಡಿಎನ್ ಎಡಿಫೈ ಎಜುಕೇಷನ್ ಪ್ರೈ.ಲಿ.ನ ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಎಡಿಫೈ ಎಂಬ ನೂತನ ಶಾಲೆ ಉದ್ಘಾಟನೆ ಮಾಡಿ ಮಾತನಾಡಿದರು. ಇಂದು ಹಿಂದುಳಿದ ಮಕ್ಕಳಿಗೆ ವಿದ್ಯೆ ಸುಲಭವಾಗಿ ಸಿಗುತ್ತಿಲ್ಲ. ಖಾಸಗೀಕರಣವೇ ಇದಕ್ಕೆ ಕಾರಣವಾಗಿದ್ದು, ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಆ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಆರ್ಥಿಕ ದುರ್ಬಲರಿಗೆ ವಿದ್ಯೆ ನೀಡುವುದು ಮೊದಲ ಆದ್ಯತೆ ಆಗಬೇಕು ಎಂದರು.
ಪದವಿ ಸಂಪಾದನೆ, ಹಣ ಹಾಗೂ ಆರ್ಥಿಕ ಗುಣಮಟ್ಟಕ್ಕೆ ಮಹತ್ವ ನೀಡುವುದಕ್ಕಿಂತ ಸಾರ್ಥಕ ಬದುಕು ಕಾಣುವ ನಾಗರಿಕನನ್ನು ಬೆಳೆಸಬೇಕು. ಶಿಕ್ಷಣದ ಮೂಲಕ ಜೀವನದ ಕಲೆ ಕಲಿಸಬೇಕು.ಅದೇ ರೀತಿ ಕ್ರೀಡೆ ಹಾಗೂ ಕಲೆಯತ್ತ ಒತ್ತು ನೀಡಬೇಕು ಎಂದು ಹೇಳಿದರು.
ಕಮಲ ಮುನಿಯಪ್ಪ ವಿದ್ಯಾಸಂಸ್ಥೆಯ(ಕೆಎಂಇಟಿ) ಟ್ರಸ್ಟಿ ಮುನಿಯಪ್ಪ, ಕಾರ್ಯದರ್ಶಿ ಅಶೋಕ್ ಕುಮಾರ್, ಎಡಿಫೈ ಶಾಲೆಯ ಪ್ರಾಂಶುಪಾಲರಾದ ವಂದನಾ ಸಂಜಯ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

