ದೇವನಹಳ್ಳಿ: ಸತ್ಯಶ್ರೀ ಪ್ರಥಮ
ದೇವನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಸ್ಟರ್ಲಿಂಗ್ ಪ್ರೌಢಶಾಲೆಯ ಆರ್.ವಿ. ಸತ್ಯಶ್ರೀ ಶೇ.97.5 ಅಂಕಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ವಿಜಯಪುರ ಎವರ್ಗ್ರೀನ್ ಶಾಲೆಯ ಎಚ್.ಸಿ.ನಂದೀಶಗೌಡ-ಶೇ. 97, ದೇವನಹಳ್ಳಿ ಆಕ್ಸ್ಫರ್ಡ್ ಶಾಲೆಯ ಎಸ್.ಎಚ್.ಮೇಘನಾ- ಶೇ.96.96, ಕಾರ್ಮೆಲ್ ಶಾಲೆಯ ಎಸ್.ಪಲ್ಲವಿ ಶೇ.96 ಹಾಗೂ ಬೂದಿಗೆರೆ ಸ್ಟರ್ಲಿಂಗ್ ಶಾಲೆಯ ಎ.ರಂಜಿತ- ಶೇ.95 ಅಂಕ ಗಳಿಸಿ ಪ್ರಥಮ ಐದು ಸ್ಥಾನ ಗಳಿಸಿದ್ದಾರೆ ಎಂದು ಬಿಇಒ ಮುನಿರಾಜು ತಿಳಿಸಿದ್ದಾರೆ.
ದೇವನಹಳ್ಳಿ ತಾಲೂಕಿನಲ್ಲಿ 2974 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು, ಅವರಲ್ಲಿ 2403 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ತಾಲೂಕಿನ ಫಲಿತಾಂಶ ಶೇ.81 ಆಗಿದೆ. ದೇವನಹಳ್ಳಿ ತಾಲೂಕಿನಲ್ಲಿ 18 ಸರ್ಕಾರಿ, 8 ಅನುದಾನಿತ ಹಾಗೂ 27 ಖಾಸಗಿ ಸೇರಿ ಒಟ್ಟು 53 ಪ್ರೌಢಶಾಲೆಗಳಲ್ಲಿ ಗಂಗವಾರ ಸನ್ರೈಸ್ಶಾಲೆ, ವಿಜಯಪುರದ ಪ್ರಗತಿಶಾಲೆ, ಎವರ್ಗ್ರೀನ್ ಶಾಲೆ, ಜೇಸಿಸ್ ಶಾಲೆ, ನಂದಿನಿ ಶಾಲೆ, ರೋಟರಿ ಶಾಲೆ, ದೇವನಹಳ್ಳಿಯ ಕಾರ್ಮೆಲ್ಶಾಲೆ, ಆಕ್ಸ್ಫರ್ಡ್ ಶಾಲೆ, ಎಸ್ಎಲ್ಎಸ್ ಶಾಲೆ, ಜ್ಞಾನದೀಪ ಶಾಲೆ, ಕನ್ನಮಂಗಲ ಎಂವಿಎಂ ಶಾಲೆ, ದುದ್ದನಹಳ್ಳಿ ಎಂವಿಎಂ ಶಾಲೆ,ಕುಂದಾಣದ ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿವೆ.
ಶಾಸಕರ ಅಭಿನಂದನೆ: ದೇವನಹಳ್ಳಿ ತಾಲೂಕು ಎರಡನೇ ಸ್ಥಾನ ಗಳಿಸಿರುವುದು, ತಾಲೂಕಿನಲ್ಲಿ ಪ್ರಥಮ ಸ್ಥಾನಗಳಿಸಿದ ಸತ್ಯಶ್ರೀಗೆ ಶಾಸಕ ಪಿಳ್ಳಮುನಿಶಾಮಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

