ಬೆಂಗಳೂರು ಗ್ರಾಮಾಂತರ

ಅಮಾನತ್ ಆಗಿದ್ದ ಅಧಿಕಾರಿ ನೇಮಕಕ್ಕೆ ತೀವ್ರ ವಿರೋಧ

Published On :

ರಾಮನಗರ: ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಅಮಾನತ್ತಾಗಿದ್ದ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಚಂದ್ರರನ್ನು ಕನಕಪುರಕ್ಕೆ ಮರು ನೇಮಕ ಮಾಡಿರುವುದನ್ನು ವಿರೋಧಿಸಿ ಛಲವಾದಿ ಮಹಾಸಭಾದ ಪದಾಧಿಕಾರಿಗಳು ಪ್ರಭಾರ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ತಮ್ಮ ವಯಕ್ತಿಕ ಖಾತೆಗೆ ಜಮಾ ಮಾಡಿಕೊಂಡು ಅವ್ಯವಹಾರ ಎಸಗಿರುವ ಆರೋಪವನ್ನು ಬಾಲಚಂದ್ರ ಎದುರಿಸುತ್ತಿದ್ದಾರೆ. ಈ ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿರುವಾಗಲೇ ಅವರನ್ನು ಮತ್ತೆ ಅದೇ ಜಾಗಕ್ಕೆ ನೇಮಿಸಿರುವುದು ಮತ್ತಷ್ಟು ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ. ಆದ್ದರಿಂದ ಬಾಲಚಂದ್ರನನ್ನು ಆ ಸ್ಥಾನದಿಂದ ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಹಿಂದೆ ಕನಕಪುರ ತಾಲೂಕು ಸಮಾಜ ಕಲ್ಯಾಣಾಧಿಕಾರಿಯಾಗಿದ್ದ ಬಾಲಚಂದ್ರರವರು 2008ರಿಂದಲೂ ದಲಿತ ಮಕ್ಕಳ ಸುಮಾರು ರು. 30 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿ ವೇತನದ ಹಣವನ್ನು ತಮ್ಮ ವಯಕ್ತಿಕ ಖಾತೆಗೆ ಜಮೆ ಮಾಡಿಕೊಂಡು 20 ಲಕ್ಷ ಗುಳುಂ ಮಾಡಿರುವುದು ಜಿಪಂ ಲೆಕ್ಕಪತ್ರ ವಿಭಾಗ ನಡೆಸಿದ ತನಿಖೆಯಿಂದ ಹೊರಬಂದಿದೆ ಎಂದರು.
ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಯಾವುದೇ ದುರಸ್ತಿ ಕಾರ್ಯ ಮಾಡದೇ ಕೇವಲ ಬಣ್ಣ ಬಳಿದು ಲಕ್ಷಾಂತರ ರುಪಾಯಿ ಲೂಟಿ ಮಾಡಿರುವ ಆರೋಪವೂ ಇವರ ಮೇಲಿದೆ ಎಂದು ದೂರಿದರು.ಮಿತಿ ಮೀರಿದ ಭ್ರಷ್ಟಾಚಾರ ನಡೆಸಿರುವ ಹಿನ್ನೆಲೆಯಲ್ಲಿ 2013ರ ನವೆಂಬರ್ನಲ್ಲಿ ಕಚೇರಿ ಅಧೀಕ್ಷಕರು ಸೇರಿದಂತೆ ಬಾಲಚಂದ್ರ ಅವರನ್ನೂ ಸೇವೆಯಿಂದ ಅಮಾನತು ಮಾಡಲಾಗಿತ್ತು. ಆದರೆ, ಭ್ರಷ್ಟ ಅಧಿಕಾರಿ ಬಾಲಚಂದ್ರ ಅವರು ಮತ್ತೆ ಅದೇ ಸ್ಥಾನಕ್ಕೆ ಮರುನೇಮಕಗೊಂಡಿರುವ ಹಿಂದೆ ಕೆಲ ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕೈವಾಡವಿದೆ ಎಂದು ನಿಯೋಗದ ಸದಸ್ಯರು ಆರೋಪಿಸಿದರು. ಬಾಲಚಂದ್ರ ಅವರನ್ನು ಕನಕಪುರ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸ್ಥಾನದಿಂದ ತೆರವುಗೊಳಿಸುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರಿಗೆ ಮನವಿ ನೀಡಲಾಗುವುದು. ಅವರನ್ನು ತೆರವುಗೊಳಿಸುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಅವರು ಎಚ್ಚರಿಸಿದರು.  
ನಿಯೋಗದಲ್ಲಿ ಛಲವಾಧಿ ಮಹಾಸಭಾದ ಜಿಲ್ಲಾ ಮುಖಂಡ ಕೆ. ರಮೇಶ್, ಕೋಡಿಹಳ್ಳಿ ಹೋಬಳಿ ಅಧ್ಯಕ್ಷೆ ಗುಂಡಲಕ್ಷ್ಮಮ್ಮ, ಉಯ್ಯಂಬಳ್ಳಿ ಹೋಬಳಿ ಅಧ್ಯಕ್ಷ ಶಿವಣ್ಣ, ಯುವ ಮುಖಂಡ ಕೊಳ್ಳಗೊಂಡನಹಳ್ಳಿ ಮುತ್ತುರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.