ಮೋದಿ ಪ್ರಮಾಣ ವಚನಕ್ಕೆ ದೊಡ್ಡ ಪರದೆಗಳ ವ್ಯವಸ್ಥೆ
ಸೂಲಿಬೆಲೆ: ಭಾರತದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ಪ್ರಸಾರವನ್ನು ದೊಡ್ಡ ಟಿವಿ ಪರದೆಗಳನ್ನಿಟ್ಟು ವೀಕ್ಷಣೆ ಮಾಡಿದ ಸೂಲಿಬೆಲೆಯ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣಿ ಮಾಡಿದರು.
ಸೂಲಿಬೆಲೆಯ ಮುಖ್ಯ ನಿಲ್ದಾಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ದೊಡ್ಡ ಟಿವಿ ಪರದೆಗಳನ್ನು ವ್ಯವಸ್ಥೆ ಮಾಡಿದ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ನೇರವಾಗಿ ವೀಕ್ಷಣೆ ಮಾಡುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಿದ್ದರು. ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮುಗಿಲು ಮುಟ್ಟಿದ್ದ ಜಯಕಾರಗಳೊಂದಿಗೆ ಕಾರ್ಯಕರ್ತರು ಹಳೇ ಬಸ್ ನಿಲ್ದಾಣ, ದೇವನಹಳ್ಳಿ ಕ್ರಾಸ್, ಜನತಾ ಕಾಲೊನಿ ಮೊದಲಾದ ಕಡೆ ಬಿಜೆಪಿಯ ಬಾವಟಗಳನ್ನು ಹಿಡಿದು ಹೊರಟ ನೂರಾರು ಕಾರ್ಯಕರ್ತರು ನರೇಂದ್ರ ಮೋದಿ ಪರವಾಗಿ ಘೋಷಣಿಗಳನ್ನು ಕೂಗಿದರು.
ಅಪಾರ ಜನ: ಸಾರ್ವಜನಿಕ ಸ್ಥಳದಲ್ಲಿ ವ್ಯವಸ್ಥೆ ಮಾಡಿದ್ದ ನೇರ ಪ್ರಸಾರವನ್ನು ಅಪಾರ ಸಂಖ್ಯೆಯ ಕಾರ್ಯಕರ್ತಸಾರ್ವಜನಿಕರು ವೀಕ್ಷಣೆ ಮಾಡಿದರು. ನರೇಂದ್ರ ಮೋದಿ ಮತ್ತು ಮಂತ್ರಿಗಳು ಪ್ರತಿಜ್ಞಾ ವಿಧಿ ಓದುತ್ತಿದ್ದಂತೆ ಶಿಳ್ಳೆ, ಪಟಾಕಿ, ಜಯಕಾರದ ಸದ್ದು ಜೋರಾಗಿತ್ತು. ತಂಡೋಪ ತಂಡವಾಗಿ ಮೆರವಣಿಗೆ ಹೋಗಿದ್ದು ಗಮನ ಸೆಳೆಯಿತು. ನಂತರ ಸಿಹಿ ವಿತರಣೆ ಮಾಡಿದರು. ಬಹು ಹೊತ್ತಿನವರಿಗೂ ಪಟಾಕಿಗಳ ಸದ್ದು ಕೇಳುತ್ತಲೇ ಇತ್ತು.ಬಿಜೆಪಿ ಹಿರಿಯ ಮುಖಂಡ ಎ. ಜನಾರ್ದನ್ ರೆಡ್ಡಿ, ತಾಪಂ ಸದಸ್ಯೆ ಮಂಜುಳಾ ಡಿ.ಟಿ ವೆಂಕಟೇಶ್, ಬಾಜಿ, ತಾಪಂ ಮಾಜಿ ಸದಸ್ಯ ಚನ್ನಪ್ಪ, ಗ್ರಾಪಂ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷ ನಾರಾಯಣಪ್ಪ, ಎಸ್.ಕೆ. ಅಮ್ಜಾದ್, ಮುನಿರಾಜ್, ನಾಸಿರ್ಖಾನ್, ಶ್ರೀನಿವಾಸ್, ಎಸ್.ವೈ ನಾಗರಾಜ್, ಸೋಮು, ಕಾರ್ಮೂರ್ತಿ, ಟೈಲರ್ ಶ್ರೀನಿವಾಸ್, ಸಿದ್ದರಾಮು ಸೇರಿದಂತೆ ಇತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

