ಬೆಂಗಳೂರು ನಗರ

ಎಸ್. ಪವಿತ್ರಗೆ ಪಿಎಚ್‌ಡಿ

Published On :

ಬೆಂಗಳೂರು: ಎಸ್. ಪವಿತ್ರ ಅವರು 'ಮಲ್ಟಿ- ಕ್ರೈಟೀರಿಯಾ ಇವಾಲ್ಯುವೇಷನ್ ಇನ್ ಅಸ್ಸೆಸಿಂಗ್ ದಿ ಇಂ ಪ್ಯಾಕ್ಟ್ಸ್ ಆಫ್ ವೇಸ್ಟ್ ಡಂಪಿಂಗ್ ಸೈಟ್ಸ್ ಆಫ್ ಬೆಂಗಳೂರು ಸಿಟಿ ಆನ್ ಎನ್ವಿರೊನ್‌ಮೆಟ್ ಹೆಲ್ತ್‌' ಎಂಬ ವಿಷಯ ಕುರಿತು ಮಂಡಿಸಿದ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ಇವರು ಬೆಂಗಳೂರು ವಿವಿ ಪರಿಸರ ವಿಭಾಗದ ಮುಖ್ಯಸ್ಥರಾದ ಡಾ.ಎನ್. ನಂದಿನಿ ಅವರ ಮಾರ್ಗದರ್ಶನ ಪಡೆದಿದ್ದರು.
ಮಲ್ಲಿಕಾರ್ಜುನ್ ರಾಜಿನಾಮೆ
ಬೆಂಗಳೂರು: ಬಿಜೆಪಿ ರಾಜಾಜಿನಗರ ಮಂಡಲದ ಅಧ್ಯಕ್ಷ ಮಲ್ಲಿಕಾರ್ಜುನ್ ಅವರು ಅಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಬೆಂಗಳೂರು ನಗರ ಘಟಕದ ಅಧ್ಯಕ್ಷರಿಗೆ ಗುರುವಾರ ತಮ್ಮ ರಾಜಿನಾಮೆ ಸಲ್ಲಿಸಿರುವ ಮಲ್ಲಿಕಾರ್ಜುನ್ ಅವರು, ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಅವರ ನಡವಳಿಕೆಯಿಂದ ಬೇಸತ್ತು ತಾವು ಪಕ್ಷದಿಂದ ದೂರ ಸರಿಯುತ್ತಿರುವುದಾಗಿ ಹೇಳಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಅರ್ಜಿ
ಬೆಂಗಳೂರು: ಕೃಷಿಕ್ ಸರ್ವೋದಯ ಪ್ರತಿಷ್ಠಾನವು ಕೇಂದ್ರ ಲೋಕಸೇವಾ ಆಯೋಗ ಹಾಗೂ ರಾಜ್ಯ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಫೆ.21ರಿಂದ ಕೆಎಎಸ್ ಪೂರ್ವಭಾವಿ- 2013 ಪರೀಕ್ಷೆಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲಿದ್ದು, ಆಸಕ್ತ ಅಭ್ಯರ್ಥಿಗಳು ಫೆ.11ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಲು ಸೂಚಿಸಿದೆ. ಫೆ.15ರಂದು ಸಂಸ್ಥೆಯಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಅನುಭವವುಳ್ಳ ವಿಷಯ ತಜ್ಞರಿಂದ ಬೋಧನೆ, ವಿಶ್ಲೇಷಣೆ, ಗುಣಮಟ್ಟದ ಮರುಮಾಹಿತಿ ಬಗ್ಗೆ ಚರ್ಚೆ, ಗ್ರಹಿಸಬಲ್ಲ ಮಾಸಪರೀಕ್ಷೆ, ಆಧುನಿಕ ಪುಸ್ತಕ ಭಂಡಾರ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ದಿನಪತ್ರಿಕೆ, ಕಂಪ್ಯೂಟರ್ ನೆಟ್‌ವರ್ಕ್ ಸೌಲಭ್ಯ, ಗ್ರಾಮೀಣ ಅಭ್ಯರ್ಥಿಗಳಿಗೆ ವಸತಿ ಸೌಲಭ್ಯವಿದೆ.
ಉಪನ್ಯಾಸಕರ ಹುದ್ದೆಗೆ ಅರ್ಜಿ
ಸರ್ಕಾರಿ ವಿಜ್ಞಾನ ಕಾಲೇಜು ಜೈವಿಕ ತಂತ್ರಜ್ಞಾನ ವಿಭಾಗದಲ್ಲಿ ಯು.ಜಿ.ಸಿ.ಯ ಸ್ಟಾಫ್-ಗ್ಯಾಪ್ ಅಡಿ ಪೂರ್ಣಕಾಲಿಕ ಉಪನ್ಯಾಸಕರ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಂ.ಎಸ್ಸಿಯಲ್ಲಿ ಕನಿಷ್ಠ ಶೇ.55ರಷ್ಟು ಅಂಕ ಗಳಿಸಿರುವ ಯುಜಿಸಿ-ನೆಟ್ ಅಥವಾ ಪಿಎಚ್‌ಡಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆ ತಾತ್ಕಾಲಿಕವಾಗಿದ್ದು, 2ವರ್ಷಗಳ ಅವಧಿಗೆ ಮಾತ್ರ ಅನ್ವಯಿಸಲಿದೆ. ಅರ್ಹ ಅಭ್ಯರ್ಥಿಗಳು ಫೆ.10ರೊಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಮಾಹಿತಿಗೆ- 22212924.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.