ಡಿವಿಜಿ ಜ್ಞಾನವಾಹಿನಿಗೆ ಸೆಂಟ್ರಲ್ ಕಾಲೇಜು
ಕೈ ತಪ್ಪಿಹೋಗುತ್ತಿರುವ ಮುಖ್ಯ ಪಿಜಿ ಕೋರ್ಸ್‌ಗಳು ವಿವಿ ಅಧ್ಯಾಪಕರ ಒಕ್ಕೂಟದ ತೀವ್ರ ವಿರೋಧ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಇಬ್ಭಾಗಗೊಳಿಸಿ ನೂತನವಾಗಿ ಸ್ಥಾಪಿಸಲಿರುವ 'ಡಿ.ವಿ.ಜಿ. ಜ್ಞಾನವಾಹಿನಿ' ಆರಂಭದಲ್ಲೇ ಅಪಸ್ವರ ಕೇಳಿಬಂದಿದೆ.
ವಿವಿ ಇಬ್ಭಾಗದಿಂದ ಸೆಂಟ್ರಲ್ ಕಾಲೇಜಿನಲ್ಲಿರುವ ಆರು ಸ್ನಾತಕೋತ್ತರ ಕೋರ್ಸ್‌ಗಳು ಡಿವಿಜಿ ಜ್ಞಾನವಾಹಿನಿಗೆ ಸೇರಿಕೊಳ್ಳಲಿವೆ. ಹೆಚ್ಚಿನ ಆದಾಯ ತಂದುಕೊಡುತ್ತಿರುವ ಆರು ಪಿ.ಜಿ.ಕೋರ್ಸ್‌ಗಳು ಜ್ಞಾನಭಾರತಿಯಿಂದ ಕೈ ತಪ್ಪಿ ಹೋಗುವುದು ಅಧ್ಯಾಪಕರಿಗೆ ನಿರಾಸೆ ಮೂಡಿಸಿದೆ.
ಬೆಂವಿವಿ ಹುಟ್ಟಿದ್ದೇ ಸೆಂಟ್ರಲ್ ಕಾಲೇಜಿನಿಂದ. ಇದೀಗ ಡಿವಿಜಿ ಜ್ಞಾನವಾಹಿನಿಗೆ ಸೆಂಟ್ರಲ್ ಕಾಲೇಜು ಸೇರಿಸಲು ನಾವು ಬಿಡುವುದಿಲ್ಲ ಎಂದು ಬೆಂವಿವಿ ಅಧ್ಯಾಪಕರ ಒಕ್ಕೂಟ ತೀರ್ಮಾನಿಸಿದೆ. ಡಿವಿಜಿ ಜ್ಞಾನವಾಹಿನಿ ವಿವಿ ಸ್ಥಾಪನೆಯಿಂದ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಆರು ಕೋರ್ಸ್‌ಗಳು ನೂತನ ವಿವಿಗೆ ಸೇರಿಕೊಳ್ಳಲಿವೆ ಎಂದು ಉನ್ನತ ಶಿಕ್ಷಣ ಪರಿಷತ್ತಿನ ಮೂಲಗಳು ತಿಳಿಸಿವೆ.
ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಹಾನಗರ ಪಟ್ಟಿಯಲ್ಲಿರುವ ನವದೆಹಲಿ, ಮುಂಬೈ, ಚೆನ್ನೈ, ವಿಶ್ವವಿದ್ಯಾಲಯಗಳೇ ಇಬ್ಭಾಗವಾಗಿಲ್ಲ. ನವದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಅಲ್ಲಿನ ಆಡಳಿತ ಸುಧಾರಣೆ ಹಿನ್ನಲೆಯಲ್ಲಿ ಉತ್ತರ ಮತ್ತು ದಕ್ಷಿಣ ಎಂದು ಇಬ್ಭಾಗಗೊಳಿಸಿ ಒಬ್ಬ ಕುಲಪತಿಯೇ ಇಡೀ ವಿವಿ ಜವಾಬ್ದಾರಿ ಹೊಂದಿದ್ದಾರೆ. ಹೀಗಿರುವಾಗ ವಿವಿ ಇಬ್ಭಾಗಗೊಳಿಸುವ ಅಗತ್ಯ ಇರಲಿಲ್ಲ ಎಂದು ಬೆಂಗಳೂರು ವಿವಿ ಅಧ್ಯಾಪಕರ ಒಕ್ಕೂಟದ ಕಾರ್ಯದರ್ಶಿ ಮುನಿರಾಜಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕಾಲೇಜುಗಳ ಸಂಖ್ಯೆ ಹೆಚ್ಚು?: ಬೆಂಗಳೂರು ವಿಶ್ವವಿದ್ಯಾಲಯ ಹೊಂದಿರುವ ಕಾಲೇಜುಗಳ ಪಟ್ಟಿಯಲ್ಲಿ ದೊಡ್ಡದು ಅಷ್ಟೆ. ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅಲ್ಲ. ು ವಿವಿಯಿಂದ ಸಂಯೋಜನೆಗೊಂಡಿರುವ ಸುಮಾರು 600 ಕಾಲೇಜುಗಳ ಪೈಕಿ 300 ಕಾಲೇಜುಗಳಲ್ಲಿ ಸಂಪೂರ್ಣ ವಿದ್ಯಾರ್ಥಿಗಳೇ ಇಲ್ಲ.
ಒಂದು ಕಾಲೇಜಿನ ಆಡಳಿತ ಮಂಡಳಿ ಒಂದೇ ಸೂರಿನಡಿ ಆನೇಕ ಕಾಲೇಜುಗಳು ನಡೆಸಲು ಸಂಯೋಜನೆ ಕೋರಿರುತ್ತಾರೆ. ಇದಕ್ಕೆ ವಿವಿ ಮಾನ್ಯತೆ ನೀಡುತ್ತದೆ. ಹೀಗಾಗಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮುನಿರಾಜಪ್ಪ ಹೇಳಿದರು.
ವಾಣಿಜ್ಯ ವಿಭಾಗದ ಆದಾಯ: ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ವಾಣಿಜ್ಯ ವಿಭಾಗದಿಂದ 86.66ಲಕ್ಷ ಸಂಗ್ರಹವಾಗುತ್ತಿದೆ. ನೂತನ ಡಿವಿಜಿ ಜ್ಞಾನವಾಹಿನಿಗೆ ಸೇರಿಕೊಳ್ಳುವುದರಿಂದ ವಿವಿಗೆ ಹೆಚ್ಚಿನ ಆದಾಯ ತಂದುಕೊಡುವ ಸಾಕಷ್ಟು ಕೋರ್ಸ್‌ಗಳು ಬೆಂಗಳೂರು ವಿವಿಯಿಂದ ಕೈತಪ್ಪಿ ಹೋಗಲಿವೆ.
-ದೇವರಾಜ್ ಎಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

