ಬೆಂಗಳೂರು ನಗರ

ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ ಭೂಪ

Published On :

ಹುಬ್ಬಳ್ಳಿ: ನ್ಯಾಯಾಂಗ ಇಲಾಖೆ ಮತ್ತು ಖಾಸಗಿ ಟಿವಿ ಚಾನೆಲ್‌ಗಳಲ್ಲಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಯುವಕರಿಂದ ಹಣ ಕೀಳುತ್ತಿದ್ದ ಯುವಕನೊಬ್ಬನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಕುಂದಗೋಳ ತಾಲೂಕಿನ ತೀರ್ಥ ಗ್ರಾಮದ ಶಂಕರ ಪಾಟೀಲ್ ಎಂಬ ಯುವಕ, ಧಾರವಾಡ ಹೈಕೋರ್ಟ್ ಸಂಚಾರಿ ಪೀಠದ ಮುಖ್ಯ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬಾಗಲಕೋಟೆ ಜಿಲ್ಲೆಯಲ್ಲಿ ಹಲವಾರು ವ್ಯಕ್ತಿಗಳನ್ನು ವಂಚಿಸಿದ್ದಾನೆ.
ಹಿನ್ನೆಲೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕೊಣ್ಣುರ ಗ್ರಾಮದ ಯುವಕ ರಾಮಪ್ಪ ಹೊರಟ್ಟಿ ಮತ್ತು ಕಳ್ಯಪ್ಪ ಮಧೆಪ್ಪನವರ ಎಂಬುವವರಿಂದ ಧಾರವಾಡ ಹೈಕೋರ್ಟ್ ಸಂಚಾರಿ ಪೀಠದಲ್ಲಿ ಮೇಲ್ದರ್ಜೆ ಸಹಾಯಕನ ಹುದ್ದೆ ಕೊಡಿಸುತ್ತೇನೆ ಎಂದು ಈತ ಒಟ್ಟು 1.14 ಲಕ್ಷ ಪಡೆದಿದ್ದ. ಹಣ ಪಡೆದ ಶಂಕರ ಪಾಟೀಲ್ ಮುಖ್ಯ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಪತ್ರ ಸೃಷ್ಟಿಸಿ ಸಹಿ ಮಾಡಿದ್ದ. ಆದೇಶ ಪತ್ರದಲ್ಲಿ ಕೇವಲ ಸಹಿ ಇದ್ದು ಮುದ್ರೆ ಇಲ್ಲದ್ದು ನೋಡಿ ಸಂಶಯಗೊಂಡ ಯುವಕರಿಬ್ಬರು ಹುಬ್ಬಳ್ಳಿಯ ಶ್ರೀರಾಮ ಸೇನೆ ಸಂಪರ್ಕಿಸಿದ್ದಾರೆ. ಶ್ರೀರಾಮ ಸೇನೆಯ ಉತ್ತರ ಪ್ರಾಂತ ಪ್ರಚಾರಕ ಬಸವರಾಜ ಬೂದಿಹಾಳ ಮತ್ತವರ ಸಂಗಡಿಗರು ಉಣಕಲ್‌ನ ಗಾಣಿಗೇರ ಓಣಿಯಲ್ಲಿದ್ದ ಶಂಕರ ಪಾಟೀಲನ ಮನೆ ಹುಡುಕಿಕೊಂಡು ಹೋಗಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.