ಬಜೆಟ್ನಲ್ಲಿ ಕಲಾವಿದರಿಗೆ ಹೆಚ್ಚಿನ ಅನುದಾನ: ಕಾರಜೋಳ
ಬೆಂಗಳೂರು: ಈ ವರ್ಷದ ಬಜೆಟ್ನಲ್ಲಿ ಕಲಾವಿದರಿಗೆ ಹೆಚ್ಚಿನ ಅನುದಾನ ದೊರೆಯುವಂತೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಾಯಕಲ್ಪ ಯೋಜನೆ ಅನ್ವಯ ನಗರದ ನಯನ ಸಭಾಂಗಣದಲ್ಲಿ 22 ನಾಟಕ ಕಂಪನಿ ಒಡೆಯರಿಗೆ ಚೆಕ್ ವಿತರಣೆ ಮಾಡಿ ಅವರು ಮಾತನಾಡಿದರು. ಇಲ್ಲಿ ಆಯ್ಕೆ ಆದ 22 ಕಂಪನಿಗಳ ಪರಿಸ್ಥಿತಿಗೆ ಅನ್ವಯವಾಗಿ ಚೆಕ್ ವಿತರಣೆ ಮಾಡಲಾಗಿದ್ದು, ಇದರಿಂದ ನಾಟಕ ಕಂಪನಿ ಮಾಲೀಕರ ಪರಿಸ್ಥಿತಿ ಉತ್ತಮಗೊಳ್ಳಲು ಸಹಕರಿಸಲಾಗುವುದು. ಮುಂದಿನ ವರ್ಷವೂ ಅಧಿಕಾರದಲ್ಲಿದ್ದರೆ ಕಲಾವಿದರಿಗೆ ಪೂರಕವಾಗಿ ಇನ್ನಷ್ಟು ಕೆಲಸ ಮಾಡುವ ಯೋಚನೆ ಇದೆ ಎಂದು ಹೇಳಿದರು.
ನಾನು ಚಿಕ್ಕವನಿದ್ದಾಗ ನಾಟಕ ಕಂಪನಿ ಮಾಲೀಕರು ಚೀಲಗಳಲ್ಲಿ ದುಡ್ಡು ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈಗ ಅವರ ಪರಿಸ್ಥಿತಿ ತೀರಾ ತೊಂದರೆಯಲ್ಲಿದೆ. ಯಾವುದೇ ಕಲಾವಿದರು ಸಂಕಷ್ಟದಲ್ಲಿದ್ದರೂ ನನ್ನಲ್ಲಿ ಬಂದು ಹೇಳಬಹುದು. ನಾನು ಸಹಾಯ ಮಾಡುತ್ತೇನೆ ಎಂದರು. ಮುಂಬರುವ ದಿನಗಳಲ್ಲಿ ಮತ್ತೆ ಅಧಿಕಾರ ದೊರೆತರೆ ಗಡಿನಾಡು ಭಾಗದ ನಾಟಕ ಕಂಪನಿಗಳಿಗೆ ಧನ ಸಹಾಯ ಮಾಡಲಿದ್ದೇನೆ. ಅಲ್ಲಿ ಕನ್ನಡಕ್ಕೆ ಇವರಿಂದ ಹೆಚ್ಚಿನ ಉತ್ತೇಜನ ಸಿಗಲಿದೆ. ಪರಿಶಿಷ್ಟ ಜಾತಿ ಜನಾಂಗದವರಿಗೆ ಪ್ರೋತ್ಸಾಹಿಸಬೇಕು. ಇಂದಿನ ಯುವಕರು ನಾಟಕಗಳಿಗೆ ಆಕರ್ಷಿತರಾಗಲು ಅವರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಆರ್.ರಾಮಕೃಷ್ಣ ಮಾತನಾಡಿ, ನಾಟಕ ಕಂಪನಿಗಳು ಕಷ್ಟದ ಪರಿಸ್ಥಿತಿ ಎದುರಿಸುತ್ತಿವೆ. ಇವುಗಳಿಗೆ ಪ್ರೋತ್ಸಾಹ ದೊರೆಯುವ ಅವಶ್ಯಕತೆ ಇದೆ. ಆದರೆ ನಾಟಕಗಳಲ್ಲಿ ಅಶ್ಲೀಲತೆ ಕಡಿಮೆಯಾಗಬೇಕು. ಲಂಚಾವತಾರದಂತಹ ನಾಟಕಗಳಲ್ಲಿ ಹಾಸ್ಯವಿದ್ದರೂ ಅವುಗಳಲಿ ಅಶ್ಲೀಲತೆ ಇಲ್ಲ, ಸಂಗ್ಯಾಬಾಳ್ಯ ನಾಟಕದಲ್ಲಿ ಅಶ್ಲೀಲಗಳನ್ನು ಸೂಚ್ಯವಾಗಿ ತಿಳಿಸುತ್ತಾರೆ. ಇಂತಹ ನಾಟಕಗಳಲ್ಲಿ ಸಾಮಾಜಿಕ ಕಳಕಳಿ ಮುಖ್ಯವಾಗಿರುತ್ತದೆ. ಇಂದಿನ ನಾಟಕ ಕಂಪನಿಗಳು ಸಾಮಾಜಿಕ ಕಳಕಳಿ ಮರೆಯಬಾರದು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

