ಭಾರತೀಯ ಉತ್ಪನ್ನಗಳಿಗೆ ಅಮೆರಿಕದಲ್ಲಿ ಮಾರುಕಟ್ಟೆ
ಬೆಂಗಳೂರು: ಭಾರತದಲ್ಲಿರುವ ಉತ್ಪನ್ನಗಳಿಗೆ ಅಮೆರಿಕದಲ್ಲಿ ಮಾರುಕಟ್ಟೆ ಒದಗಿಸುವ ಕುರಿತು ಅಮೆರಿಕ ಉದ್ಯೋಗಿಗಳು ಶುಕ್ರವಾರ ಖಾಸಗಿ ಹೊಟೇಲ್‌ನಲ್ಲಿ 'ಬಿಸ್‌ನೆಸ್ ಇನ್ ಅಮೆರಿಕ' ಕಾರ್ಯಾಗಾರ ನಡೆಸಿದರು.
ಈ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಇ- ವಾಣಿಜ್ಯ ಹೂಡಿಕೆದಾರ ವೆಂಕಟ್ ರಾಮಿನೇನಿ, ಭಾರತದಲ್ಲಿರುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಅಮೆರಿಕದಲ್ಲಿ ವ್ಯವಹಾರ ನಡೆಸಬಹುದು
ಎಂದರು. ಭಾರತ ಮತ್ತು ಅಮೆರಿಕಾ ನಡುವಿನ ವ್ಯಾಪಾರ- ವಹಿವಾಟು ಸಂಬಂಧ ಉತ್ತಮಪಡಿಸಬಹುದು. ಅಲ್ಲದೆ, ಭಾರತ ಹಾಗೂ ಅಮೆರಿಕಾದ ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯ. ಈ ಕಾರ್ಯಾಗಾರ ಕೇವಲ
ಬೆಂಗಳೂರಿನಲ್ಲಿ ಮಾತ್ರವಲ್ಲದೆ, ಹೈದರಾಬಾದ್, ಚೆನೈ, ಬೆಂಗಳೂರು, ಪೂನೆ, ಮುಂಬೈ, ನವದೆಹಲಿಯಲ್ಲಿಯೂ ನಡೆಯಲಿದೆ.
ನಿಮ್ಮ ವಸ್ತುಗಳು ಗುಣಮಟ್ಟದಿಂದ ಕೂಡಿದ್ದರೆ, ಅಮೆರಿಕದಲ್ಲಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯಲಿದೆ. ವಹಿವಾಟು ನಡೆಸುವ ಮೊದಲು ನೀವು ನಿಮ್ಮ ಕಂಪನಿ ಹೆಸರನ್ನು ಅಮೆರಿಕ ಸರ್ಕಾರಕ್ಕೆ ಸಲ್ಲಿಸಬೇಕು. ಅವರು ನೀಡುವ ಸಂಖ್ಯೆಯಿಂದ ನಿಮಗೆ ತೆರಿಗೆಯಲ್ಲಿ ರಿಯಾಯಿತಿ ದೊರೆಯಲಿದೆ.
ಭಾರತದಲ್ಲೇ ಕುಳಿತು ನೀವು ಇಂಟರ್‌ನೆಟ್ ಮೂಲಕವು ಅಮೆರಿಕದಲ್ಲಿ ವ್ಯವಹಾರ ನಡೆಸಬಹುದು. ಸಣ್ಣ ಕೈಗಾರಿಕೆಗೆ ಅಮೆರಿಕ ಸರ್ಕಾರ ಹಣಕಾಸು ಸೌಲಭ್ಯ ಒದಗಿಸಲಿದೆ ಎಂದರು. ಈ ಕಾರ್ಯಾಗಾರದಲ್ಲಿ ಸುಮಾರು 100ಕ್ಕೂ ಹೆಚ್ಚು ಉದ್ಯೋಗಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

