ಬೆಂಗಳೂರು ನಗರ

'ಆರೋಗ್ಯದೆಡೆ ಗಮನ ಅಗತ್ಯ'

Published On :

ಹೆಬ್ಬಗೋಡಿ: ಇಂದಿನ ದಿನಗಳಲ್ಲಿ ಆರೋಗ್ಯ ಹದಗೆಡುವುದು ಮಾಮೂಲಿ ವಿಚಾರವಾದರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.
ಜಿಗಣಿಯ ನಿತ್ಯಾನಂದ ಶಾಲೆಯಲ್ಲಿ ಬಮೂಲ್ ಟ್ರಸ್ಟ್ ಮತ್ತು ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ನಗರದಲ್ಲಿ ಹವಾಮಾನ ಸ್ಥಿಮಿತದಲ್ಲಿರುತ್ತದೆ. ಆದ ಕಾರಣ ಬೆವರು ಬರುವುದು ಅಸಾಧ್ಯ. ಬೆವರು ಬಾರದ ಕಾರಣ ದೇಹದಲ್ಲಿನ ಅನಗತ್ಯ ವಸ್ತುಗಳು ಹೊರಹೋಗದೆ ಕಾಯಿಲೆಗಳ ಉದ್ಭವಕ್ಕೆ ಕಾರಣ ಎಂದರು.
  ಈ ವೇಳೆ ಮಾತನಾಡಿದ ಬಮೂಲ್ನ ಆರ್.ಕೆ. ರಮೇಶ್, ಬಹುತೇಕ ಕೈಗಾರಿಕಾ ಪ್ರದೇಶಗಳೇ ಇರುವ ಜಿಗಣಿಯ ಸುತ್ತಮುತ್ತ ಸಾಕಷ್ಟು ಜನ ದುಡಿಮೆಗಾಗಿ ಬಂದು ನೆಲೆಸಿರುತ್ತಾರೆ. ಅವರಿಗೆ ಆರೋಗ್ಯ ತಪಾಸಣೆ ವೆಚ್ಚಗಳು ಭಾರಿ ಹೊರೆಯಾಗಿರುತ್ತವಾದ್ದರಿಂದ ಅವರು ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಎಲ್ಲಾ ರೀತಿಯ ರೋಗಗಳನ್ನು ಪರೀಕ್ಷಿಸಲು ಬೇರೆ ಬೇರೆ ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು. ಹೆನ್ನಾಗರ ಗ್ರಾಪಂ ಅಧ್ಯಕ್ಷ ಕೇಶವಮೂರ್ತಿ, ಬಸವರಾಜು ಹಾಗೂ ಕಾಂಗ್ರೆಸ್ನ ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.