ಬೆಂಗಳೂರು ನಗರ

ಅಡಿಗರ ಕಾವ್ಯ ಚಿಂತನೆ ವೈವಿಧ್ಯಮಯ: ವಿದ್ಯಾಶಂಕರ

Published On :

ಬೆಂಗಳೂರು: ಗೋಪಾಲಕೃಷ್ಣ ಅಡಿಗ ಅವರ ಕಾವ್ಯಗಳು ಸಾಮಾಜಿಕ, ರಾಜಕೀಯ, ಎಡಪಂಥೀಯ, ಬಲಪಂಥೀಯ ಹೀಗೆ ಎಲ್ಲ ತರಹದ ವೈವಿಧ್ಯಮಯ ಚಿಂತನೆಗಳನ್ನೂ ಪ್ರಸ್ತುತಪಡಿಸುತ್ತವೆ ಎಂದು ದೃಶ್ಯಮಾಧ್ಯಮ ವಿಮರ್ಶಕ ಎನ್. ವಿದ್ಯಾಶಂಕರ ಅಭಿಪ್ರಾಯ ಪಟ್ಟಿದ್ದಾರೆ.
ಗೋಪಾಲಕೃಷ್ಣ ಅಡಿಗ ಸ್ಮಾರಕ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 'ಅಡಿಗ- 95 ಸ್ಮರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಡಿಗರ ಕಾವ್ಯಗಳು ಏಕಕಾಲಕ್ಕೆ ಹಲವು ಚಿಂತನೆಗಳನ್ನು ಪ್ರಸ್ತುತಪಡಿಸುತ್ತವೆ. ಸಮಾಜ ಬೆಳೆಯಬೇಕಾದರೆ ಏನೆಲ್ಲಾ ಯೋಚನೆಗಳು, ಸಾಧ್ಯತೆಗಳು ಅಗತ್ಯವೋ ಅದನ್ನು  ನೇರವಾಗಿ ತಮ್ಮ ಕಾವ್ಯದಲ್ಲಿ ಪ್ರಸ್ತುತಪಡಿಸುತ್ತಿದ್ದರು ಎಂದರು.
ಆಧುನಿಕತೆ ಎಲ್ಲಾ ಲಕ್ಷಣಗಳೂ ಕನ್ನಡ ಸಾಹಿತ್ಯದಲ್ಲಿ ಬಂದು ಹೋಗಿವೆ. ಆದರೆ, ಆಧುನಿಕತೆಯ ಪ್ರಜ್ಞೆ ಅಡಿಗರ ಕಾವ್ಯಗಳ ಮೂಲಕ ಬಂದಿತ್ತು. ಆಧುನಿಕತೆಯನ್ನು ಕೇವಲ ಬರವಣಿಗೆ ಮೂಲಕ ಸಮಾಜಕ್ಕೆ ಹೇಳದೆ ತಮ್ಮೊಳಗೆ ತಾವೇ ಪ್ರಶ್ನಿಸಿಕೊಳ್ಳುತ್ತಿದ್ದರು. ಅಡಿಗರ ಸಾಹಿತ್ಯಕ್ಕೆ ಬಂದಷ್ಟು ವಿಮರ್ಶೆಗಳು ಬೇರೆ ಯಾವ ಸಾಹಿತ್ಯಕ್ಕೂ ಬಂದಿಲ್ಲ ಎಂದರು.
ಇದೇ ವೇಳೆ ಭಾರತೀಯ ವಿದ್ಯಾಭವನ ನಿರ್ದೇಶಕ ಎಚ್.ಎನ್.ಸುರೇಶ್ ಅಡಿಗರ ವೆಬ್ಸೈಟ್ಗೆ ಚಾಲನೆ ನೀಡಿ ನಂತರ ಮಾತನಾಡಿ, ಅಡಿಗರ ಶತಮಾನೋತ್ಸವ ಹತ್ತಿರದಲ್ಲಿದೆ. ಅವರ ಕುರಿತು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ವಿದ್ಯಾಭವನದಿಂದ ನೆರವು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಅಡಿಗರ ಕಾವ್ಯವಾಚನ ಮಾಡಿದರು. ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್.ನರಸಿಂಹಮೂರ್ತಿ, ಕನ್ನಡ ಪ್ರಾಧ್ಯಾಪಕ ಟಿ.ಎಲ್ಲಪ್ಪ, ಎಂ.ಜಯರಾಮ ಅಡಿಗ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.