ಬೆಂಗಳೂರು ನಗರ

ಕಾವೇರಿ; ವಕೀಲರಿಗೆ ಕೊಟ್ಟದ್ದು ರು. 30.21

Published On :

ಬೆಂಗಳೂರು: ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ನಿರೀಕ್ಷಿತ ನ್ಯಾಯ ದೊರಕದಿದ್ದರೂ ನಮ್ಮ ಪರ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ವಹಿಸಿದ ನ್ಯಾಯವಾದಿಗಳಿಗೆ ಸರ್ಕಾರ ಇಲ್ಲಿಯವರೆಗೆ ಖರ್ಚು ಮಾಡಿರುವ ಫೀಸು ಬರೋಬ್ಬರಿ ರು. 30.21 ಕೋಟಿ.
ಈ ವಿಚಾರವನ್ನು ರಾಜ್ಯ ಸರ್ಕಾರವೇ ಇತ್ತೀಚೆಗೆ ಬಹಿರಂಗಗೊಳಿಸಿದೆ. ರಾಜ್ಯದ ಪರ 19 ವಕೀಲರು, ಅಡ್ವೊಕೇಟ್ ಜನರಲ್‌ಗಳು ಹಾಗೂ ಅವರ ಸಹಾಯಕರು ಸೇರಿ 11 ಮಂದಿ ಶ್ರಮಿಸಿದ್ದಾರೆ. ಆದರೆ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ನ್ಯಾಯ ಸಿಕ್ಕಿದೆಯೇ?
ಸರ್ಕಾರಿ ಮಾಹಿತಿ ಪ್ರಕಾರ ನ್ಯಾಯವಾದಿ ಅನಿಲ್ ಬಿ. ದಿವಾನ್ ಅತಿ ಹೆಚ್ಚು ಶುಲ್ಕ ಪಡೆದಿದ್ದಾರೆ. ಅಶೋಕ್ ಮಾಥೂರ್ ಅತಿ ಕಡಿಮೆ ಶುಲ್ಕ ಪಡೆದವರು.
ವಿವರ ಹೀಗಿದೆ... ಎಫ್.ಎಸ್. ನಾರಿಮನ್- 30818383, ಅನಿಲ್ ಬಿ. ದಿವಾನ್- 11,76,96,226, ಎಸ್.ಎಸ್. ಜವಳಿ- 4,49,05,182, ಮೋಹನ್ ವಿ.ಕಾತರಕಿ- 4,08,76,110, ಎಸ್.ಸಿ.ಶರ್ಮಾ-26,35,450, ರಣವೀರ್ ಸಿಂಗ್ - 32,56,603, ಬ್ರಿಜೇಶ್ ಕಾಳಪ್ಪ- 75,67,855, ಇ.ಎನ್.ರಘುಪತಿ- 3,88,721, ವೈ.ಎಸ್.ಚಿತಾಲೆ- 18,93,100, ಎ.ವೈ.ಚಿತಾಲೆ- 2,61,600, ಟಿ.ಆರ್.ಅಂಧ್ಯಾರ್ಜುನ- 12,06,000, ಡಿ.ಎಂ.ನರಗೋಲ್ಕರ್- 2,27,000, ಸೈಯದ್ ನಕ್ವಿ - 19,51,250, ಎಂ.ವೀರಪ್ಪ- 1,16,000, ಎಸ್.ಪಿ.ಸಿಂಗ್-2,53,58,550, ಅಶೋಕ್ ಮಾಥೂರ್- 3,000, ಪದ್ಮನಾಭ ಮಹಾಲೆ- 58,700, ಮಂಜಪ್ಪ ಗಣಪತಿ- 65,000, ಸಂಜಯ್ ಆರ್.ಹೆಗಡೆ-21,85,000.
ಅಡ್ವೊಕೇಟ್ ಜನರಲ್‌ಗಳಿಗೆ ನೀಡಿದ ಶುಲ್ಕ: ಅದೇ ರೀತಿ ರಾಜ್ಯದ ಅಡ್ವೊಕೇಟ್ ಜನರಲ್‌ಗಳು ಅವರ ಸಹಾಯಕರಿಗಾಗಿ ಶುಲ್ಕ ರೂಪದಲ್ಲಿ ಹಣ ನೀಡಲಾಗಿದೆ. ಅವುಗಳ ವಿವರ ಹೀಗಿದೆ...
ಬಿ.ವಿ. ಆಚಾರ್ಯ- 8,88,000, ಶಿವಪ್ಪ- 2,66,000, ಎಂ.ಆರ್.ಜನಾರ್ದನ - 3,08,000, ಎಸ್. ವಿಜಯಶಂಕರ್-5,82,000, ಎ.ಎನ್.ಜಯರಾಂ- 30,93,500, ಟಿ.ಆರ್.ಸುಬ್ಬಣ್ಣ (ಎಜಿ ಸಹಾಯಕ )- 76,05,000, ಎಚ್.ಜಿ.ರಮೇಶ್ (ಎಜಿ ಸಹಾಯಕ ) -5,275, ಬಿ.ಟಿ.ಪಾರ್ಥಸಾರಥಿ- 76,000, ಉದಯ ಹೊಳ್ಳ- 8,55,000, ಅಶೋಕ್ ಹಾರನಹಳ್ಳಿ- 4,35,000.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.