ಬಳ್ಳಾರಿ

ದೂರು ಸಲ್ಲಿಸಲು ಎಂಸಿಸಿ ತಂಡ ರಚನೆ

Published On :

ಬಳ್ಳಾರಿ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಮಾದರಿ ನೀತಿ ಸಂಹಿತೆ (ಎಂಸಿಸಿ) ತಂಡ ರಚಿಸಿ ಮೇಲುಸ್ತುವಾರಿಗಾಗಿ ಅಧಿಕಾರಿಗಳನ್ನು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಎಂಸಿಸಿ ತಂಡ, ಫ್ಲೈಯಿಂಗ್ ಸ್ಕ್ವಾಡ್, ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್- 1, ಫ್ಲೈಯಿಂಗ್ ಸ್ಕ್ವಾಡ್ - 2 ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿತ ದೂರುಗಳನ್ನು ಈ ತಂಡದ ಅಧಿಕಾರಿಗಳಿಗೆ ಸಲ್ಲಿಸಬಹುದು. ತಂಡದಲ್ಲಿ ಅಧಿಕಾರಿಗಳ ಹಾಗೂ ಮೊಬೈಲ್ ಸಂಖ್ಯೆ ವಿವರ ಇಂತಿದೆ.
ತಂಡದ ಮುಖ್ಯಸ್ಥರನ್ನಾಗಿ ಬುಡಾ ಆಯುಕ್ತೆ ಖಾಜಿ ನಫೀಸಾ (9741759475) ನೇಮಿಸಲಾಗಿದ್ದು, ಉಳಿದಂತೆ ಬಳ್ಳಾರಿ ನಗರ ಡಿವೈಎಸ್ಪಿ ಮುರುಗಣ್ಣನವರ್ (9480803020), ಕೆಎಸ್‌ಎಫ್‌ಸಿ ಸಹಾಯಕ ನಿರ್ದೇಶಕ ಬಸವರಾಜ್ (9449172102), ಕಾರ್ಮಿಕ ಅಧಿಕಾರಿ ಎ.ಎಂ. ಕೃಷ್ಣಮೂರ್ತಿ (8277094753), ಮೋಟಾರ್ ವಾಹನ ಪರಿವೀಕ್ಷಕ ಶರಣಪ್ಪ (9482330307), ಅಬಕಾರಿ ಪರಿವೀಕ್ಷಕ ಚಿಕ್ಕರೆಡ್ಡಿ (98862 96936), ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ವೆಂಕಟೇಶ್ ಮೂರ್ತಿ (8277150143) ಅವರನ್ನು ನಗರ ಕ್ಷೇತ್ರದ ಎಂಸಿಸಿ ತಂಡಕ್ಕೆ ನಿಯೋಜಿಸಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ ತಂಡದಲ್ಲಿ ವಾರ್ಡ್‌ವಾರು ಅಧಿಕಾರಿಗಳನ್ನು ನೇಮಿಸಲಾಗಿದ್ದು, ವಾರ್ಡ್‌ವಾರು ದೂರುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬಹುದು. ಉದ್ಯೋಗ ವಿನಿಮಯ ಅಧಿಕಾರಿ ಹಟ್ಟೆಪ್ಪ-9945602881 ವಾರ್ಡ್ ಸಂಖ್ಯೆ 31, 32,33,34 ಕೆಯುಡಬ್ಲ್ಯೂಎಸ್ ಅಂಡ್ ಡಿಬಿ ಎಇ ಯೂನಿಸ್ ಪಾಶ-9480813141 (ವಾ.ಸಂ-1,21,22,25), ಬುಡಾ ಎಇಇ ರವಿಶಂಕರ್ - 9448634799(ವಾ.ಸಂಖ್ಯೆ- 17,18,19, 20), ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ (ವಾ.ಸಂ. 9, 13, 14, 15,16,17), ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ - 8105031176 (ವಾ.ಸಂ-7,8,10,11, 12), ಪಾಲಿಕೆ ಎಇಇ ದೇವರಾಜ್- 9972096720 (ವಾ.ಸಂ-5,6), ಪಾಲಿಕೆ ಎಇಇ ಎಂಜಿನಿಯರ್ ಅಶೋಕ್- 9845124205 (ವಾ.ಸಂ-2,3,4).
ಇತರೆ ವಾರ್ಡ್‌ಗಳಿಗೆ ಸಂಬಂಧಿಸಿದ ದೂರುಗಳನ್ನು ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್-1 ತಂಡದಲ್ಲಿರುವ ಪಾಲಿಕೆಯ ಕಂದಾಯ ಉಪ ಆಯುಕ್ತ ಆರಿಫುದ್ದೀನ್ (9448632234), ಎಆರ್‌ಓ ವಿರೂಪಾಕ್ಷಪ್ಪ (9448377655), ಆರ್‌ಐ ಕೃಷ್ಣಮೂರ್ತಿ (9448003870) ಹಾಗೂ ಡೆಡಿಕೇಟೆಡ್ ಫ್ಲೈಯಿಂಗ್ ಸ್ಕ್ವಾಡ್- 2 ತಂಡದಲ್ಲಿರುವ ಪಾಲಿಕೆಯ ಎಇಇ ಜಿ. ಮನೋಜ್ (9845589606), ಕೆಯುಐಡಿಎಫ್‌ಸಿಯ ಎಇ ನಾಗರಾಜ್ (9449075490) ಅವರಿಗೆ ಸಲ್ಲಿಸಬಹುದು. ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರುಗಳನ್ನು ಸಲ್ಲಿಸಲು ಮೇಲ್ಕಂಡ ತಂಡದ ಅಧಿಕಾರಿಗಳ ದೂರವಾಣಿ ಸಂಖ್ಯೆ ಇಲ್ಲವೇ ಖುದ್ದಾಗಿ ಅಥವಾ ಜಿಲ್ಲಾ ಮಟ್ಟದ ಸಹಾಯವಾಣಿ ಸಂಖ್ಯೆ 08392-273229 ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಸಹಾಯವಾಣಿ ಸಂ. 08392-272356ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.