ಕೆಜೆಪಿ ಅಭ್ಯರ್ಥಿ ಹರೀಶ್ ಕಾರು ವಶ
ಕ.ಪ್ರ ವಾರ್ತೆ, ಕೂಡ್ಲಿಗಿ, ಏ. 12
ಹರಿಹರ ಕ್ಷೇತ್ರದ ಕೆಜೆಪಿ ಅಭ್ಯರ್ಥಿ, ಯಡಿಯೂರಪ್ಪ ಅವರ ಆಪ್ತ ಬಿ.ಪಿ. ಹರೀಶ್ ಅವರಿಗೆ ಸೇರಿದ ಇನ್ನೋವಾ ಕಾರನ್ನು ಎಂಸಿಸಿ ತಂಡದವರು ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಶುಕ್ರವಾರ ಸಂಜೆ ಕೂಡ್ಲಿಗಿ ಪಟ್ಟಣದಲ್ಲಿ ವಶಪಡಿಸಿಕೊಂಡಿದ್ದಾರೆ.
ಶುಕ್ರವಾರ ಹರಿಹರದಲ್ಲಿ ನಾಮಪತ್ರ ಸಲ್ಲಿಸಿ ಹೊಸಪೇಟೆ ಸಮೀಪವಿರುವ ಜಂಭುನಾಥೇಶ್ವರ ದೇವಸ್ಥಾನಕ್ಕೆ (ಮನೆ ದೇವರು) ಪೂಜೆ ಸಲ್ಲಿಸಿ ವಾಪಾಸ್ಸಾಗುತ್ತಿದ್ದರು. ಆಗ ಕೂಡ್ಲಿಗಿಯಲ್ಲಿ ಕಾರನ್ನು ತಹಸೀಲ್ದಾರ್ ಜವರೇಗೌಡ ನೇತೃತ್ವದ ಎಂಸಿಸಿ ತಂಡ ಹಾಗೂ ಲೈವ್ ತಪಾಸಣಾ ತಂಡ ಪರಿಶೀಲಿಸಿತು. ಪರವಾನಗಿ ಇಲ್ಲದೆ ಕಾರಿಗೆ ಬಾವುಟ ಕಟ್ಟಿದ್ದರಿಂದ ನೀತಿ ಸಂಹಿತೆ ಉಲ್ಲಂಘನೆಯಡಿ ಕಾರು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ ಕಾರಿಗೆ ಕೆಜೆಪಿ ಬಾವುಟ ಹಾಗೂ ಪೋಸ್ಟರ್ ಅಳವಡಿಸಲಾಗಿತ್ತು. ಅಲ್ಲದೆ, ಹರೀಶ್ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರ್ (ಕೆಎ-52 ಎನ್-18)ಗೆ ಯಾವುದೇ ದಾಖಲೆಗಳಿರಲಿಲ್ಲ. ಇದಲ್ಲದೆ ಕಾರು ಚಾಲಕನ ಡ್ರೈವಿಂಗ್ ಲೈಸೆನ್ಸ್ ಸಹ ಇಲ್ಲದಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಜವರೇಗೌಡ ತಿಳಿಸಿದ್ದಾರೆ.
ರಿವಾಲ್ವಾರ್ ವಾಪಸ್: ಹರೀಶ್ ಅವರ ಗನ್‌ಮ್ಯಾನ್ ಬಳಿ ದಾವಣಗೆರೆ ಡಿಎಆರ್ ಪೊಲೀಸ್ ಗುರುತಿನ ಚೀಟಿ ಮೂಲ ದಾಖಲೆ ಇಲ್ಲದ್ದರಿಂದ ಎಂಸಿಸಿ ತಂಡ ಅವರನ್ನೂ ಪರಿಶೀಲಿಸಿತು. ಹರೀಶ್ ಅವರ ಅಂಗರಕ್ಷಕ ಸುಭಾಷ್ ಬಳಿಯಿದ್ದ 38 ರಿವಾಲ್ವಾರ್ ಹಾಗೂ 12 ಸುತ್ತಿನ ಜೀವಂತ ಗುಂಡುಗಳನ್ನು ಪರೀಕ್ಷಿಸಿತು.
ನಂತರ ಪೊಲೀಸ್ ಇಲಾಖೆ ನೌಕರ ಮತ್ತು ಸರ್ಕಾರದಿಂದ ನೀಡಿದ ಪಿಸ್ತೂಲ್ ಎನ್ನುವ ಮಾಹಿತಿಯನ್ನಾಧರಿಸಿ ಹರೀಶ್ ಅವರ ಭದ್ರತಾ ದೃಷ್ಟಿಯಿಂದ ರಿವಾಲ್ವಾರ್ ಅನ್ನು ವಾಪಸ್ ನೀಡಲಾಯಿತು.
ಹರೀಶ್ ಅವರ ಕಾರಿನಲ್ಲಿದ್ದ ಸೂಟ್‌ಕೇಸ್‌ನ್ನು ಪರಿಶೀಲಿಸಿದಾಗ ಕೇವಲ ಬಟ್ಟೆಗಳು ಮಾತ್ರ ಪತ್ತೆಯಾಗಿವೆ. ಕಾರಿನಲ್ಲಿದ್ದ ಕೆಜೆಪಿ ಬಾವುಟಗಳನ್ನು ವಶಪಡಿಸಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

