ಬಸವ ವಸತಿ ಫಲಾನುಭವಿಗಳಿಗೆ ಬಿಜೆಪಿ ಶಾಸಕರಿಂದ ಬೆದರಿಕೆ?
ಹೂವಿನಹಡಗಲಿ: ಕ್ಷೇತ್ರದಲ್ಲಿ ಕಳೆದೊಂದು ವಾರದಿಂದ ಕೆಜೆಪಿ ಪಕ್ಷದ ಪರ ಪ್ರಚಾರ ಮಾಡುತ್ತಾ ಮತಯಾಚನೆ ಮಾಡುವ ಸಂದರ್ಭದಲ್ಲಿ ಮತದಾರರೇ ಬಿಜೆಪಿ ಶಾಸಕರು ಈ ಹಿಂದೆ ವಿತರಣೆ ಮಾಡಿರುವ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು, ಒಂದು ವೇಳೆ ತಪ್ಪಿದ್ದರೇ ಪಟ್ಟಿಯಿಂದ ನಿಮ್ಮ ಹೆಸರು ತೆಗೆದುಹಾಕಲಾಗುವುದು ಎಂಬ ಬೆದರಿಕೆ ಹಾಕಿದ್ದಾರೆಂದು ಕೆಜೆಪಿ ಅಭ್ಯರ್ಥಿ ಎಲ್. ಮಧುನಾಯ್ಕ ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣದ ಅವರ ನಿವಾಸದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡುತ್ತಾ, ಬಸವ ವಸತಿ ಮನೆಗಳ ವಿತರಣೆಯ ಸಂದರ್ಭದಲ್ಲಿ ಫಲಾನುಭವಿಗಳು ಹಣ ನೀಡಬೇಕೆಂದು ಕೇಳಿದ್ದಾರೆಂದು ಮತದಾರರೇ ದೂರುತ್ತಿದ್ದಾರೆ, ಹಣ ನೀಡದೇ ಇರುವವರಿಗೆ ಮನೆಗಳನ್ನು ವಿತರಣೆ ಮಾಡುವುದಿಲ್ಲವೆಂಬ ದೂರುಗಳು ಕೇಳಿ ಬರುತ್ತಿವೆಂದು ಹೇಳಿದರು. ತಾಲೂಕಿನ ಗ್ರಾಪಂ ಮಟ್ಟದಲ್ಲಿ ಸಾಕಷ್ಟು ಖಾತ್ರಿ ಯೋಜನೆಯಲ್ಲಿ ಅವ್ಯವಹಾರವಾಗಿದೆ, ಅನುದಾನವಿದ್ದರೂ ಸರಿಯಾಗಿ ಬಳಕೆಯಾಗದೇ ಅಭಿವೃದ್ಧಿಯಿಂದ ಅನೇಕ ಗ್ರಾಮಗಳು ಹಿಂದುಳಿದಿವೆ ಎಂದು ಆರೋಪಿಸುತ್ತಾ, ವಸತಿ ಯೋಜನೆಯಲ್ಲಿ ಅವ್ಯವಹಾರ, ಅಭಿವೃದ್ದಿಗೆ ಅನುದಾನ ತರುವಲ್ಲಿ ಶಾಸಕರು ವಿಫಲರಾಗಿದ್ದಾರೆಂದು ದೂರಿದರು. ರಾಜ್ಯದಲ್ಲಿ ಯಡಿಯೂರಪ್ಪನವರ ಪರ ಗಾಳಿ ಬೀಸುತ್ತಿದೆ, ಕ್ಷೇತ್ರದಲ್ಲಿ ಕೆಜೆಪಿ ಬೆಂಬಲಿಸಿದ್ದಾರೆ. ಆದರಿಂದ ಕೆಜೆಪಿಯನ್ನು ಮತದಾರರು ಕೈ ಹಿಡಿಯುತ್ತಾರೆ ಆದರಿಂದ ಜಯಶಾಲಿಯಾಗುತ್ತೆವೆಂಬ ಆತ್ಮವಿಶ್ವಾಸವಿದೆ ಎಂದರು. ಚುನಾವಣೆ ಆಯೋಗ ಕೈಗೊಂಡಿರುವ ಕಠಿಣ ಕ್ರಮಗಳು ಹಾಗೂ ನೀತಿ ಸಂಹಿತೆಗೆ ಹೆಚ್ಚಿನ ಗೌರವ ಕೊಟ್ಟು ಪಾಲಿಸುತ್ತಾ ಈ ಕ್ರಮವನ್ನು ಸ್ವಾಗತಿಸುತ್ತೇನೆಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

