ಫಲಾನುಭವಿಗಳ ಮನೆಗೆ ಅಧಿಕಾರಿಗಳ ಭೇಟಿ
ಕೂಡ್ಲಿಗಿ: ತಾಲೂಕಿನ ಕಂದಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಜಾಪುರ, ಅಕ್ಕಾಪುರ, ಬತ್ತನಹಳ್ಳಿ, ಕಂದಗಲ್ಲು ಮುಂತಾದ ಗ್ರಾಮಗಳಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿ ಬಸವ ವಸತಿ ಯೋಜನೆಯ ಮನೆಗಳನ್ನು ಪರಿಶೀಲನೆ ನಡೆಸಿದರು. ಜಿಪಂ ಹಾಗೂ ತಾಪಂ ಅಧಿಕಾರಿಗಳ ಆದೇಶದ ಮೇರೆಗೆ ಕಂದಗಲ್ಲು ಗ್ರಾಪಂ ನೋಡಲ್ ಅಧಿಕಾರಿ ಜಿ. ವಾಮದೇವ, ಗ್ರಾಪಂ ಅಧ್ಯಕ್ಷ ಕೆ. ಪರುಸಪ್ಪ, ತಾಲೂಕು ವಸತಿ ನೋಡಲ್ ಅಧಿಕಾರಿ ಜಿ. ನಾಗರಾಜ, ಪಿಡಿಓ ನಂಜಪ್ಪ ಮುಂತಾದ ಅಧಿಕಾರಿಗಳು ಕಂದಗಲ್ಲು ಗ್ರಾಪಂನ ಕಂದಗಲ್ಲು, ಗಜಾಪುರ, ಅಕ್ಕಾಪುರ, ಬತ್ತನಹಳ್ಳಿ ಗ್ರಾಮಗಳ ಫಲಾನುಭವಿಗಳ ಮನೆ ಮನೆಗೆ ತೆರಳಿ ಮನೆ ಕಟ್ಟಿರುವ ಬಗ್ಗೆ ಖಚಿತ ಪಡಿಸಿಕೊಂಡರು. ಭೂಸೇನಾ ನಿಗಮದ ವತಿಯಿಂದ ನಿರ್ಮಿಸಿದ ಬಸವ ವಸತಿ ಯೋಜನೆ ಫಲಾನುಭವಿಗಳ ಮನೆಗಳನ್ನು ಪರಿಶೀಲನೆ ನಡೆಸಿದಲ್ಲದೇ ಫಲಾನುಭವಿಗಳೇ ಕಟ್ಟಿಸಿಕೊಂಡಿರುವ ಮನೆಗಳನ್ನೂ ಪರಿಶೀಲನೆ ನಡೆಸಿದರು. ಕಂದಗಲ್ಲು ಗ್ರಾಪಂ ಕೂಡ್ಲಿಗಿ ತಾಲೂಕಿಗೆ ಸೇರಿದ್ದರೂ ನೂತನ ಹಗರಿಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಈಗಾಗಲೇ ಬಸವ ವಸತಿ ಯೋಜನೆ ಮನೆಗಳು ನಿರ್ಮಿಸಲಾಗಿದೆ. ಫಲಾನುಭವಿಗಳೇ ಕಟ್ಟಿಸಿಕೊಂಡಿದ್ದ ಮನೆಗಳಿಗೆ ಇದುವರೆಗೆ ಹಣ ಮುಂಜೂರಾಗದೆ ಇದ್ದುದರಿಂದ ಈ ಭಾಗದ ಹಲವಾರು ಫಲಾನುಭವಿಗಳು ಆತಂಕಕ್ಕೀಡಾಗಿದ್ದರು. ಈಗ ಅಧಿಕಾರಿಗಳು ಬಂದು ಫಲಾನುಭವಿಗಳೇ ಸ್ವಂತ ಖರ್ಚಿನಲ್ಲಿ ಕಟ್ಟಿಸಿಕೊಂಡ ಮನೆಗಳನ್ನು ಪರಿಶೀಲನೆ ಮಾಡಿ ವರದಿ ಕಳುಹಿಸುತ್ತಿರುವುದರಿಂದ ಫಲಾನುಭವಿಗಳಲ್ಲಿ ಆಶಾಭಾವನೆ ಮೂಡಿದೆ. ಗ್ರಾಪಂ ಮಾಜಿ ಅಧ್ಯಕ್ಷ ಟಿ. ಮೂಗಪ್ಪ, ಸದಸ್ಯರಾದ ಬಾರಿಕರ ಜ್ಯೋತಿ, ಲಕ್ಷ್ಮಿ ಗುರುವಪ್ಪ, ಎಚ್. ಹುಲುಗಪ್ಪ, ಕಾರ್ಯದರ್ಶಿ ರುದ್ರಗೌಡ, ಬಿಲ್ಕಲೆಕ್ಟರ್ ಕೊಟ್ರೇಶ್, ಕಂಪ್ಯೂಟರ್ ಆಪರೇಟರ್ ಕೊಟ್ರೇಶ್ ಮುಂತಾದ ಸಿಬ್ಬಂದಿ ಹಾಜರಿದ್ದರು.
ಟಿಬಿ ನದಿಗೆ 1.27 ಲಕ್ಷ ಕ್ಯುಸೆಕ್ ನೀರು ಬಿಡುಗಡೆ
ಮುನಿರಾಬಾದ್: ತುಂಗಭದ್ರಾ ಜಲಾಶಯದಿಂದ ನದಿಗೆ ಗುರುವಾರ 1,27,822 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ 1,27,244 ಕ್ಯುಸೆಕ್ ನೀರು ಹರಿದು ಬಂದಿದೆ. ಐದನೇ ದಿನವೂ ಕಂಪ್ಲಿ ಸೇತುವೆ ಜಲಾವೃತವಾಗಿಯೇ ಇದೆ. ನಡುಗಡ್ಡೆ ಮಠ 12 ದಿನಗಳಿಂದ ನೀರಿನಿಂದ ಸುತ್ತುವರಿದಿದ್ದು, ಅಲ್ಲಿನ ಮಠಾಧೀಶರು, ಇಬ್ಬರು ಶಿಷ್ಯರು ಮಠದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

