ಗಾಳಿ ಇಲ್ಲದ ತ್ರಿಚಕ್ರ ವಾಹನ ವಿತರಣೆ
ಹಗರಿಬೊಮ್ಮನಹಳ್ಳಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದಾಗಿ ಅಂಗವಿಕಲ ಫಲಾನುಭವಿಗಳಿಗೆ ವಿತರಿಸಲು ಸರ್ಕಾರದಿಂದ ಮಂಜೂರಾಗಿದ್ದ ತ್ರಿಚಕ್ರ ವಾಹನಗಳ ಚಕ್ರಕ್ಕೆ ಗಾಳಿ ತುಂಬಿಸದೇ ಗಾಳಿ ಇಲ್ಲದ ತ್ರಿಚಕ್ರ ವಾಹನಗಳನ್ನು ವಿತರಿಸಿದ ಘಟನೆ ಸೋಮವಾರ ಪಟ್ಟಣದಲ್ಲಿ ಜರುಗಿತು. ಪಟ್ಟಣದ ರಾಮನಗರದ ಶ್ರೀರೇಣುಕಾ ಕಾಲೇಜು ಆವರಣದಲ್ಲಿ ಸೋಮವಾರ ಮಧ್ಯಾಹ್ನ ತಾಲೂಕಿನ 16 ಅಂಗವಿಕಲ ಫಲಾನುಭವಿಗಳಿಗೆ ತ್ರಿಚಕ್ರ ವಾಹನಗಳ ವಿತರಣೆಯನ್ನು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿತ್ತು. ತಮ್ಮ ಕನಸಿನ ತ್ರಿಚಕ್ರ ವಾಹನ ಪಡೆಯಲು ಪಾಲಕರ ಜತೆ ಕಾಲೇಜು ಆವರಣಕ್ಕೆ ಬಂದಿದ್ದ ಅಂಗವಿಕಲ ಫಲಾನುಭವಿಗಳು ತಮಗೆ ನೀಡಿದ ತ್ರಿಚಕ್ರ ವಾಹನಗಳಲ್ಲಿ ಕುಳಿತು ಅದನ್ನು ಮುಂದೆ ಹೋಗಲು ಪ್ರಯತ್ನಿಸಿದಾಗ ತಾವು ಕುಳಿತಿರುವ ವಾಹನದ ಚಕ್ರಗಳಲ್ಲಿ ಗಾಳಿಯೇ ಇಲ್ಲ ಎಂಬುದು ಗಮನಕ್ಕೆ ಬರುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು. ಅಂಗವಿಕಲರ ಜತೆಗೆ ಬಂದಿದ್ದ ಪಾಲಕರು ಪಟ್ಟಣದ ಸೈಕಲ್ ಶಾಪ್ಗಳಿಗೆ ತ್ರಿಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗಿ ಗಾಳಿ ತುಂಬಿಸಿಕೊಂಡು ಹೋದರು.
ಶಿವಪ್ರಸಾದ್ಗೌಡಗೆ ರಾಘವ ಪ್ರಶಸ್ತಿ
ಕೂಡ್ಲಿಗಿ: ಕೂಡ್ಲಿಗಿ ರಂಗನಟ ಬ್ಯಾಳಿ ಶಿವಪ್ರಸಾದಗೌಡಗೆ ಬಳ್ಳಾರಿ ರಾಘವ ಮೆಮೋರಿಯಲ್ ಅಸೋಸಿಯೇಷನ್ದಿಂದ ಬಳ್ಳಾರಿ ರಾಘವರ 133 ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ರಾಘವ ಪ್ರಶಸ್ತಿಯನ್ನು ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು. ರಂಗನಟ ಬ್ಯಾಳಿ ಶಿವಪ್ರಸಾದಗೌಡರಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಕೂಡ್ಲಿಗಿ ತಾಲೂಕಿನ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಂಗಲ್ಯ ಸರ ಕಳವು: ಪ್ರಕರಣ ದಾಖಲು
ಬಳ್ಳಾರಿ: ನಗರದ ಅಗಡಿ ಮಾರೆಪ್ಪ ಕಾಂಪೌಂಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೃಹಿಣಿ ಕೊರಳಲ್ಲಿದ್ದ ಮಾಂಗಲ್ಯ ಸರ ಸೇರಿ 5 ತೊಲೆ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋದ ಘಟನೆ ಸೋಮವಾರ ಸಂಜೆ 7.30ಕ್ಕೆ ನಡೆದಿದೆ. ಅಗಡಿ ಮಾರೆಪ್ಪ ಕಾಂಪೌಂಡಿನ ನಿವಾಸಿ ಸಂಗೀತಾ ಎನ್ನುವವರು ಹಿಟ್ಟಿನ ಗಿರಣಿಗೆ ಹೋಗಿ ಬರುತ್ತಿರುವಾಗ ಬೈಕ್ನಲ್ಲಿ ಬಂದ ಕಳ್ಳನೋರ್ವ ಸಂಗೀತಾ ಕೊರಳಲ್ಲಿದ್ದ 3.5 ತೊಲೆ ಮಾಂಗಲ್ಯದ ಸರ, 1.5 ತೊಲೆ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

