ಗಡಿ ಗ್ರಾಮಗಳಿಗೆ ವಿಶೇಷ ಪ್ಯಾಕೇಜ್
ಕ.ಪ್ರ. ವಾರ್ತೆ , ಚಿಂಚೋಳಿ , ಆ.7
ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶದ ಕುಂಚಾವರಂ ಗಡಿಭಾಗದಲ್ಲಿರುವ ಸುತ್ತಲಿನ ತಾಂಡಾ ಮತ್ತು ಗ್ರಾಮಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಪ್ಯಾಕೇಜ್‌ನಿಂದ ಹಣವನ್ನು ಮಂಜೂರಿಗೊಳಿಸುವುದಾಗಿ ಶಾಸಕ ಡಾ. ಉಮೇಶ ಜಾಧವ ಭರವಸೆ ನೀಡಿದರು.
ತಾಲೂಕಿನ ಕುಂಚಾವರಂ ಅರಣ್ಯಪ್ರದೇಶದ ವೆಂಕಟಾಪುರ ಗ್ರಾಮದಲ್ಲಿ ಸಾರ್ವಜನಿಕ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜ್ಯದ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ರಾಷ್ಟೀಯ ಸ್ವಾಸ್ಥ ವಿಮಾ ಯೋಜನೆ ಅಡಿಯಲ್ಲಿ ಅವರ ಕುಟುಂಬದ ಸದಸ್ಯರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲಾಗುವುದು ಎಂದರು.
ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು ಈಗಾಗಲೇ ಜಾರಿಗೆ ಬಂದಿದ್ದು, ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲು ಶ್ರಮಿಸುತ್ತಿದೆ. ಕುಂಚಾವರಂ ಗಡಿಭಾಗದಲ್ಲಿ ಇಲ್ಲಿನ ಮಹಿಳೆಯರಿಗೆ ಉದ್ಯೋಗಕ್ಕಾಗಿ ಗಾರ್ಮೆಂಟ್ಸ್ ಇಂಡಸ್ಟ್ರೀಜ್ ಮತ್ತು ನರ್ಸಿಂಗ್ ಕೋರ್ಸ್ ಹಾಗೂ ಲ್ಯಾಬ್ ಟೆಕ್ನಿಶಿಯನ್ ತರಬೇತಿ ಕಾಲೇಜು ಮಂಜೂರಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ತಾಪಂ ಸದಸ್ಯ ವಿಠ್ಠಲ್ ಕಾರಭಾರಿ, ಡಾ. ಅಂಜನಯ್ಯ, ಕೆ. ಗೋಪಾಲರೆಡ್ಡಿ, ಸುರೇಶ ಬಂಟಾ, ಅಬ್ದುಲ್ ಬಾಸೀತ್, ಕೆ.ಎಂ. ಬಾರಿ, ವಿಜಯಕುಮಾರ್ ಗಂಗನಪಳ್ಳಿ, ಶಿವಕುಮಾರ್ ಕೊಳ್ಳೂರ್, ಮಧುಸೂಧನರೆಡ್ಡಿ ಕಲ್ಲೂರ, ಬಸವರಾಜ ಮಲಿ, ತುಳಸೀರಾಮ ರಾಠೋಡ, ರಾಮಶೆಟ್ಟಿ ಪವಾರ, ಜಗದೀಶಸಿಂಗ್ ಠಾಕೂರ್, ರಾಜೂ, ನರಸಿಂಹಲು ಸವಾರಿ, ತಾಪಂ ಸದಸ್ಯ ನರಸಿಂಹ ಕುಂಬಾರ ಇತರರು ಉಪಸ್ಥಿತರಿದ್ದರು.
ಶಾಸಕರಾಗಿ ಆಯ್ಕೆಗೊಂಡ ಡಾ. ಉಮೇಶ ಜಾಧವ್ ಅವರನ್ನು ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ದೇಶ, ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿ: ಜಾಧವ
ಚಿಂಚೋಳಿ: ದೇಶದ ಮತ್ತು ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಶಿಕ್ಷಕರು ತಮ್ಮ ಕರ್ತವ್ಯವನ್ನು ಜವಾಬ್ದಾರಿ, ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಹಿಂದುಳಿದ ಪ್ರದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಸಾಧ್ಯ ಎಂದು ಶಾಸಕ ಡಾ. ಉಮೇಶ ಜಾಧವ ಶಿಕ್ಷಕರಿಗೆ ಸಲಹೆ ನೀಡಿದರು.
ತಾಲೂಕು ಲೋಕ ಶಿಕ್ಷಣ ಸಮಿತಿ, ತಾಪಂ ಚಿಂಚೋಳಿ ಆಶ್ರಯದಲ್ಲಿ ಚಂದಾಪುರ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಏರ್ಪಡಿಸಿದ 2013-14ನೇ ಸಾಲಿನ 2ನೇ ಹಂತದ ತಾಲೂಕು ಮಟ್ಟದ ಮುಖ್ಯ ತರಬೇತುದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಯೋಜನೆಗಳು ಕೇವಲ ಕಾಗದದಲ್ಲಿ ಪ್ರಗತಿಯಾಗಬಾರದು ಎಂದು ಎಚ್ಚರಿಕೆ ನೀಡಿದ ಶಾಸಕರು, ಶಿಕ್ಷಕರು ಯಾವುದೇ ಭಯದ ವಾತಾವರಣದಲ್ಲಿ ಕೆಲಸ ಮಾಡಬೇಡಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಜಗದೇವ ಬೈಗೊಂಡ, ಶ್ರೀನಿವಾಸ ಪಾಟೀಲ್, ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೂರ್ ಇತರರು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹ್ಮದ್ ರಫಿ ಎಂ. ಶಕಾಳೆ, ಜಗನ್ನಾಥರೆಡ್ಡಿ ರಂಜೋಳ್ ಇದ್ದರು. ತಾಪಂ ಅಧ್ಯಕ್ಷೆ ಮಲ್ಲಮ್ಮ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರೇವಣಸಿದ್ದಯ್ಯ ಸ್ವಾಮಿ ಸ್ವಾಗತಿಸಿ ಜಯಪ್ಪ ಚಾಪಲ್ ನಿರೂಪಿಸಿ ವೈಜನಾಥ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

