ಕೂರಿಗೆ ಬತ್ತ ಬಿತ್ತನೆ ಪದ್ಧತಿ ಅನುಸರಿಸಿ: ಡಾ. ಎಂ.ಆರ್. ಉಮೇಶ್
ಬಳ್ಳಾರಿ: ರೈತರು ಕೂರಿಗೆ ಬತ್ತ ಬಿತ್ತನೆ ಪದ್ಧತಿಯನ್ನು ಅನುಸರಿಸುವುದರಿಂದ ಅಧಿಕ ಲಾಭ ಗಳಿಸಬಹುದೆಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಬೇಸಾಯ ತಜ್ಞ ಡಾ.ಎಂ.ಆರ್. ಉಮೇಶ್ ತಿಳಿಸಿದರು.
ತಾಲೂಕಿನ ಮಂಗಮ್ಮ ಕ್ಯಾಂಪಿನಲ್ಲಿ 2013-14ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಹಮ್ಮಿಕೊಂಡಿದ್ದ ಕೂರಿಗೆ ಬತ್ತ ಬಿತ್ತನೆ ಪದ್ಧತಿ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೂರಿಗೆ ಬತ್ತದ ಬೇಸಾಯದ ತಾಂತ್ರಿಕತೆ ಕುರಿತು ಮಾಹಿತಿ ನೀಡಿದ ಅವರು, ಈ ಪದ್ಧತಿಯಿಂದ ಸಸಿಮಡಿ-ಕೆಸರುಗದ್ದೆ ನಾಟಿ ಮಾಡುವ ವೆಚ್ಚ ಬಿತ್ತನೆ, ಬೀಜದಲ್ಲಿ ಉಳಿತಾಯ (ಪ್ರತಿ ಎಕರೆಗೆ 10 ಕೆ.ಜಿ.), ಶೇ. 35-40 ರಷ್ಟು ನೀರು ಹಾಗೂ ರಸಗೊಬ್ಬರದ ಉಳಿತಾಯವಾಗಲಿದೆ. ಈಗಾಗಲೇ ರಾಯಚೂರಿನ ಎಲ್ಲೆಡೆ ಕೂರಿಗೆ ಬತ್ತದ ಪದ್ಧತಿ ಚಾಲ್ತಿಯಲ್ಲಿದ್ದು, ಎಲ್ಲ ರೈತರೂ ಈ ಪದ್ಧತಿಯ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕೇಂದ್ರ ಸ್ಥಾನಿಕ ಸಹಾಯಕ ಕೃಷಿ ನಿರ್ದೇಶಕ ಮಹಾಬಲೇಶ್ವರಪ್ಪ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸದ್ಯದ ಬದಲಾಗುತ್ತಿರುವ ಪರಿಸ್ಥಿತಿಗೆ ನೂತನ ಕೃಷಿ ತಾಂತ್ರಿಕತೆ ಅಳವಡಿಸಿಕೊಳ್ಳುವಂತೆ ರೈತರಿಗೆ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎನ್. ಕೆಂಗೇಗೌಡ ಸ್ವಾಗತಿಸಿ, ಕೂರಿಗೆ ಬಿತ್ತನೆ ಉತ್ತೇಜನಕ್ಕೆ ಕೃಷಿ ಇಲಾಖೆಯಿಂದ ಬಿತ್ತನೆ ಕೂರಿಗೆ, ಲಘು ಪೋಷಕಾಂಶಗಳಾದ ಜಿಂಕ್ ಸಲ್ಫೇಟ್, ಬೋರಾನ್, ಜಿಪ್ಸಂಗಳನ್ನು ಸಹಾಯಧನದಲ್ಲಿ ಪಡೆಯಬಹುದಲ್ಲದೆ ಪ್ರಾತ್ಯಕ್ಷಿಕೆ ಕೈಗೊಳ್ಳಲು ಅವಕಾಶವಿದ್ದು, ರೈತ ಬಾಂಧವರು ಇಲಾಖೆಗೆ ಸಂಪರ್ಕಿಸಿ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಗುರುಸಿದ್ದಮೂರ್ತಿ, ಇಲಾಖಾ ಸಿಬ್ಬಂದಿ, ರೈತ ಅನುವುಗಾರರು ಹಾಗೂ ರೈತರು ಇದ್ದರು. ಖಾಜಾ ರುಬೀನಾ ಪ್ರಾರ್ಥಿಸಿದರು. ಗವಿಸಿದ್ದಪ್ಪ ಗಡ್ಡದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

