ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಇಮಡಾಪುರ: ವಲಯ ಮಟ್ಟದ ಕ್ರೀಡಾಕೂಟ
ಕೂಡ್ಲಿಗಿ: ಕ್ರೀಡೆಗಳಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ, ಮಾನಸಿಕ ನೆಮ್ಮದಿ ಲಭಿಸುತ್ತಿದ್ದು, ಕ್ರೀಡೆಗಳಿಗೆ ಸರ್ಕಾರ ಮತ್ತು ಸಮುದಾಯದಿಂದ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಶಾಸಕ ಬಿ. ನಾಗೇಂದ್ರ ತಿಳಿಸಿದರು. ಅವರು ತಾಲೂಕಿನ ಇಮಡಾಪುರದಲ್ಲಿ ಸೋಮವಾರ ನಡೆದ ಹೊಸಹಳ್ಳಿ ವಲಯ ಮಟ್ಟದ ಸಹಿಪ್ರಾ ಶಾಲೆಗಳ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆ ಕ್ರೀಡೆಗಳಿಗೂ ಸಿಗುವಂತಾಗಬೇಕು. ಕ್ರೀಡಾ ಸಾಮಾಗ್ರಿಗಳನ್ನು ಎಲ್ಲ ಶಾಲೆಗಳಿಗೆ ಕಲ್ಪಿಸುವ ಮೂಲಕ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕ್ರೀಡಾಸಕ್ತಿ ಮೂಡಿಸಬೇಕಿದೆ. ತಾಲೂಕು ಕೇಂದ್ರದಲ್ಲಿರುವ ಕ್ರೀಡಾಂಗಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲು ಮುಂದಾಗುತ್ತೇನೆ. ಪ್ರತಿಯೊಂದು ಶಾಲೆಯಲ್ಲಿ ಪಠ್ಯದ ಜತೆ ಪಠ್ಯೇತರ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಂತೆ ಶಿಕ್ಷಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಆರ್.ಜೆ. ಚಿತ್ತಪ್ಪ, ಉಪಾಧ್ಯಕ್ಷೆ ಭಾಗ್ಯಮ್ಮ, ಮುಖ್ಯಶಿಕ್ಷಕ ಎಸ್.ಪ್ರಭಾಕರ್, ಸಂಚಾಲಕ ಜಿ.ಬಿ. ಪ್ರಕಾಶ್, ಗ್ರಾಪಂ ಉಪಾಧ್ಯಕ್ಷ ಎಂ. ನಾಗೇಂದ್ರಪ್ಪ, ಸದಸ್ಯರಾದ ಜಿ. ತಿಮ್ಮಣ್ಣ, ಸಂಗಣ್ಣ, ನಿಂಗಮ್ಮ ನಿಂಗಣ್ಣ, ಶಿಕ್ಷಕರಾದ ಎನ್.ಡಿ. ಮಹಾದೇವ್, ಬಿ. ಮಲ್ಲಾಚಾರಿ, ಕೆ.ಟಿ. ಮಹಾಂತೇಶ, ಸರಸ್ವತಮ್ಮ, ನಾಗರತ್ನಮ್ಮ, ವಾಣಿ, ಶರಣಮ್ಮ, ಫರಿದಾಬೇಗಂ, ಮಂಜುನಾಥ, ಎಂ. ನಾಗರಾಜ, ಬಿ. ಚೌಡಪ್ಪ, ವಕೀಲ ಕೆ. ಚನ್ನಪ್ಪ ಸೇರಿದಂತೆ ಇತರರಿದ್ದರು. ಇಮಡಾಪುರ ಹಳೇ ವಿದ್ಯಾರ್ಥಿಗಳಿಂದ ಕ್ರೀಡಾಜ್ಯೋತಿ ತಂದು ಬೆಳಗಿಸಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿ
ಕೂಡ್ಲಿಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಣವಿಕಲ್ಲು ವಲಯದ ಎಂ.ಬಿ. ಅಯ್ಯನಹಳ್ಳಿಯಲ್ಲಿ ನಡೆದ ಪ್ರಗತಿಬಂಧು ಸಂಘದ ಉದ್ಘಾಟನೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಓ. ತಿಪ್ಪೇರುದ್ರಪ್ಪ ಸಸಿ ನೆಡುವ ಮೂಲಕ ಉದ್ಘಾಟಿಸಿದರು. ರೈತರು ಇಂದಿನ ದಿನದಲ್ಲಿ ಸರಿಯಾದ ಕೂಲಿಯಾಳುಗಳ ಸಮಸ್ಯೆಯಿಂದ ಭೂಮಿಯನ್ನು ಬರಡಾಗಿ ಮಾಡುತ್ತಿದ್ದಾರೆ. ಈ ಸಮಸ್ಯೆಯನ್ನು ನೀಗಿಸಲು ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿ ಬಂಧು ಸಂಘದ ಮೂಲಕ ಶ್ರಮ ವಿನಿಮಯ ಮಾಡಿ ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ದುಡಿದರೆ ರೈತರ ಪ್ರಗತಿ ಸಾಧ್ಯ ಎಂದು ಯೋಜನೆಯ ಹೈನುಗಾರಿಕಾ ಮೇಲ್ವಿಚಾರಕ ನಾಗೇಶ ಬೆಣ್ಣಿ ತಿಳಿಸಿದರು. ಕಾರ್ಯಕ್ರಮದಲ್ಲಿ ವಿನಾಯಕ ಪ್ರಗತಿ ಬಂಧು ಸಂಘದ ಸದಸ್ಯರು ಹಾಗೂ ಸೇವಾ ಪ್ರತಿನಿಧಿ ಎ. ವಿಶಾಲಾಕ್ಷಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.