ಸಾಲ ಮರುಪಾವತಿ: ಬ್ಯಾಂಕ್ ಅಭಿವೃದ್ಧಿ
ಸಿರುಗುಪ್ಪ: ಗ್ರಾಹಕರು ಸಕಾಲಕ್ಕೆ ಸಾಲ ಮಾರುಪಾವತಿ ಮಾಡುತ್ತಿರುವುದೇ ಸಹಕಾರ ಬ್ಯಾಂಕ್ಗಳ ಅಭಿವೃದ್ಧಿಗೆ ಕಾರಣ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ. ಭೀಮರೆಡ್ಡಿ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ 52ನೇ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆಯಲ್ಲಿ ಅವರು ಮಾತನಾಡಿ, ಪ್ರಸಕ್ತ ವರ್ಷ ಬ್ಯಾಂಕಿನ ಸದಸ್ಯರ ಸಂಖ್ಯೆ 3,412 ಇದ್ದು, ರೈತರಿಗೆ ರು. 3 ಕೋಟಿ ಕೃಷಿ ಸಾಲ ನೀಡಲಾಗಿದೆ. ಬ್ಯಾಂಕಿಂಗ್ ಸದಸ್ಯರಿಗೆ ರು. 7 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ ಎಂದರು.
ಬ್ಯಾಂಕಿನ ಕೃಷಿ ವಿಭಾಗದಿಂದ ಶೇ. 91.19ರಷ್ಟು ವಸೂಲಾತಿ ಮಾಡಿದ್ದರೆ. ಬ್ಯಾಂಕಿಂಗ್ ವಿಭಾಗದಿಂದ ಶೇ. 90.04ರಷ್ಟು ವಸೂಲಾತಿ ಮಾಡುವ ಮೂಲಕ ರಾಜ್ಯದಲ್ಲಿಯೇ ಸಾಲ ವಸೂಲಾತಿಯಲ್ಲಿ ಮೊದಲ ಸ್ಥಾನಗಳಿಸಿದ ಕೀರ್ತಿ ಶಾಖೆಗೆ ಇದೆ. ರೈತರಿಗೆ ಕೃಷಿ ಹಾಗೂ ಕೃಷಿ ಯಂತ್ರೋಪಕರಣ ಪಡೆಯುವಲ್ಲಿ ಆರ್ಥಿಕ ಸಹಾಯ ಮಾಡುವ ಮೂಲಕ, ಸಾವಿರಾರು ಎಕರೆ ಪ್ರದೇಶದಲ್ಲಿ ನೀರಾವರಿ ಯೋಜನೆ ಸೇರಿದಂತೆ ಸಾಲ ಸೌಲಭ್ಯಗಳ ಮೂಲಕ ರೈತರಿಗೆ ಆರ್ಥಿಕ ನೆರವು ನೀಡಿದೆ, ಕಾರಣ ಪ್ರತಿಯೊಬ್ಬ ಗ್ರಾಹಕರು ತಾವು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ರಾಜ್ಯ ಪಿಕಾರ್ಡ್ ಬ್ಯಾಂಕ್ ಸದಸ್ಯ ಚೊಕ್ಕಬಸವನಗೌಡ ಮಾತನಾಡಿ, ಬ್ಯಾಂಕ್ ಸದಸ್ಯರಿಗೆ ಯಶಸ್ವಿನಿ ಯೋಜನೆ, ಇಫ್ಕೋ ರಸಗೊಬ್ಬರ ಮಾರಾಟವನ್ನು ನ್ಯಾಯಯುತ ಬೆಲೆಗೆ ರೈತರಿಗೆ ಒದಗಿಸುವುದು ಸೇರಿದಂತೆ ಇತರೆ ನಾನಾ ಯೋಜನೆಗಳ ಸಹಕಾರಕ್ಕೆ ಗ್ರಾಹಕರ ಸಹಾಕರ ಅಗತ್ಯವಿದೆ ಎಂದರು.
ಬ್ಯಾಂಕ್ ವ್ಯವಸ್ಥಾಪಕ ಷಣ್ಮುಖಗೌಡ ವಾರ್ಷಿಕ ಲೆಕ್ಕಪತ್ರಗಳನ್ನು ಓದಿದರು.
ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದು ಸಮಯಕ್ಕೆ ಸರಿಯಾಗಿ, ಯಾವುದೇ ನೋಟಿಸ್ ನೀಡದೇ ಸಾಲ ಮರುಪಾವತಿ ಮಾಡಿದ ಸಿರುಗುಪ್ಪ, ತೆಕ್ಕಲಕೋಟೆ, ಹಚ್ಚೊಳ್ಳಿ, ಕರೂರು ವಲಯಗಳ ಒಟ್ಟು 20 ರೈತರಿಗೆ ಸೇರಿದಂತೆ ವಾಣಿಜ್ಯ ಉದ್ದೇಶದ ಬ್ಯಾಂಕ್ ಮರುಪಾವತಿಯಲ್ಲಿ ಉತ್ತಮ ಗ್ರಾಹಕರೆನಿಸಿದ ಒಟ್ಟು 10 ಗ್ರಾಹಕರನ್ನು ಗೌರವಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

