ದಾಸೋಹ ಟ್ರಸ್ಟ್ಗೆ ಅಡುಗೆ ಪರಿಕರ ದಾನ
ಕೊಟ್ಟೂರು: ಇಲ್ಲಿನ ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದಿನನಿತ್ಯ ದಾಸೋಹ ಸೇವೆ ಸಲ್ಲಿಸುತ್ತಿರುವ ದಾಸೋಹ ಟ್ರಸ್ಟ್ಗೆ ತಮಿಳುನಾಡಿನ ಹೊಸೂರು ತಾಲೂಕಿನ ಮಿಡುಗರನಹಳ್ಳಿಯ ಉಮಾಪತಿ ಅವರು ಪ್ರಸಾದ ವಿನಿಯೋಗಕ್ಕೆ ಬೇಕಾಗುವ ರು. 75 ಸಾವಿರ ಮೌಲ್ಯದ ಅಡುಗೆ ತಯಾರಿಸುವ ಮತ್ತು ಬಡಿಸುವ ಪರಿಕರಗಳನ್ನು ಸೋಮವಾರದ ಅರ್ಪಿಸಿದರು.
ದೊಡ್ಡ ಗಾತ್ರದ ಮೂರು ಅನ್ನದ ಪಾತ್ರೆಗಳು, 2 ಊಟ ಬಡಿಸುವ ವೀಲ್ ಪಾತ್ರೆಗಳು, 1 ಹೆವಿ ಮಿಕ್ಸಿ, 2 ತಾಟು ತೊಳೆಯುವ ಪಾತ್ರೆಗಳು, 1 ಅನ್ನ ಬಳಸುವ ಪಾತ್ರೆ, 160 ಊಟದ ತಟ್ಟೆ ಮತ್ತಿತರ ಪರಿಕರಗಳು ಇದರಲ್ಲಿ ಸೇರಿದ್ದು ಇವುಗಳೆಲ್ಲವನ್ನು ಸೂಕ್ತ ರೀತಿಯಲ್ಲಿಯೇ ಬಳಸಿಕೊಂಡು ದಾಸೋಹ ಸೇವೆಯನ್ನು ಇನ್ನು ಹೆಚ್ಚು ಅರ್ಥಪೂರ್ಣವಾಗಿ ಮುನ್ನಡೆಸಿಕೊಂಡು ಹೋಗುವಂತೆ ದಾನಿ ಉಮಾಪತಿ ಟ್ರಸ್ಟ್ನವರಿಗೆ ಮನವಿ ಮಾಡಿದರು.
ಕೊಟ್ಟೂರು ಬಸವೇಶ್ವರ ಸ್ವಾಮಿಯ ವಂಶಸ್ಥರಾದ ತಾವು ಶ್ರೀ ಸ್ವಾಮಿಗೆ ಏನಾದರೊಂದು ಕಾಣಿಕೆ ಸಲ್ಲಿಸಬೇಕೆಂಬ ಕಾರಣಕ್ಕಾಗಿ ಈ ದೇಣಿಗೆಯನ್ನು ನಿತ್ಯ ದಾಸೋಹ ಟ್ರಸ್ಟ್ಗೆ ಅರ್ಪಿಸಿರುವೆ, ಇದೊಂದು ಅಲ್ಪ ಕಾಣಿಕೆ. ಕೊಟ್ಟೂರು ಬಸವೇಶ್ವರ ಸ್ವಾಮಿಯ ಮೂಲ ಮಠ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲೂಕಿನ ಮಿಡಗರಹಳ್ಳಿಯಲ್ಲಿದೆ. ಈ ದೇವಸ್ಥಾನದಲ್ಲಿ ಕೊಟ್ಟೂರಿನಲ್ಲಿ ನಡೆಯುವ ಪದ್ಧತಿಯಂತೆ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಈ ಎಲ್ಲ ಸೇವೆಗಳಲ್ಲಿ ತಮ್ಮ ಕುಟುಂಬ ಮತ್ತು ಸ್ನೇಹಿತರ ಬಳಗ ಸದಾ ತೊಡಗಿಸಿಕೊಳ್ಳುತ್ತೇವೆ ಎಂದರು.
ದಾನಿ ಉಮಾಪತಿ ಅವರನ್ನು ಈ ಸಂದರ್ಭದಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿ ನಿತ್ಯ ದಾಸೋಹ ಟ್ರಸ್ಟ್ ಅಧ್ಯಕ್ಷ ಎಂ.ಎಂ.ಜೆ. ಸತ್ಯಪ್ರಕಾಶ್, ಕಾರ್ಯದರ್ಶಿ ಕೆ.ಎಂ. ನಾಗರಾಜ ಸನ್ಮಾನಿಸಿ ಅಭಿನಂದಿಸಿದರು. ಓಂಕಾರ ಶಾಸ್ತ್ರಿ, ಹರಾಳು ಸುರೇಶ್, ರಾಜು, ರೇವಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

