ಬಳ್ಳಾರಿ

ಕಂಪ್ಲಿ ಸೋಮಪ್ಪ ದೇವಸ್ಥಾನದ ಬಳಿ ಗುಡಿಸಲು, ಮನೆಗೆ ಬೆಂಕಿ

Published On :

ಕಂಪ್ಲಿ: ಕಂಪ್ಲಿಯ ಐತಿಹಾಸಿಕ ಸೋಮಪ್ಪ ದೇವಸ್ಥಾನ ಸಮೀಪದ ಕೆರೆ ಏರಿ ಮೇಲಿನ ಗುಡಿಸಲು ಹಾಗೂ ಮನೆಗಳಲ್ಲಿ ಹೊತ್ತಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ಮನೆ ಹಾಗೂ ಗುಡಿಸಲುಗಳಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.
ಸೋಮವಾರ ರಾತ್ರಿ ವಲಿಸಾಬ್ ಎನ್ನುವವರ ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗುಡಿಸಲಿನಲ್ಲಿದ್ದ ಟಿವಿ, ಫ್ಯಾನ್, ಕುರ್ಚಿ ಸೇರಿದಂತೆ ವಿವಧ ವಸ್ತುಗಳು ಸುಟ್ಟು ಕರಕಲಾಗಿದ್ದು, ಸುಮಾರು ರು. 20 ಸಾವಿರ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮಂಗಳವಾರ ಬೆಳಗ್ಗೆ ಮಾಬುಸಾಬ್ ಹಾಗೂ ಮೊಹಿದ್ದೀನ್ ಮನೆಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಮನೆಯಲ್ಲಿನ ಟಿವಿ, ಫ್ಯಾನ್, ಕುರ್ಚಿ, ಬಟ್ಟೆ, ಹಾಸಿಗೆ, ಚಾಪೆ, ಪ್ಲಾಸ್ಟಿಕ್ ಸಾಮಾನು, ಪಠ್ಯ ಪುಸ್ತಕಗಳು ಹಾಗೂ ವಿವಿಧ ವಸ್ತುಗಳು ಸುಟ್ಟಿವೆ. ಮಾಬುಸಾಬ್ ಮನೆಯಲ್ಲಿ ರು. 25 ಸಾವಿರ ನಷ್ಟವಾಗಿದ್ದರೆ, ಮೊಹಿದ್ದೀನ್ ಮನೆಯಲ್ಲಿ ರು. 30 ಸಾವಿರ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪಿಎಸ್‌ಐ ಡಿ. ಹುಲುಗಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಯಾರೋ ಕಿಡಿಗೇಡಿಗಳು ಗುಡಿಸಲು ಮತ್ತು ಮನೆಗಳಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಬೆಂಕಿ ಹಚ್ಚುತ್ತಿರಬೇಕು ಎಂದು ಹೇಳಿದರು. ಪುರಸಭೆ ಮಾಜಿ ಸದಸ್ಯರಾದ ಯು. ರಾಮದಾಸ್ ಮತ್ತು ಅಬ್ದುಲ್‌ವಾಹಿದ್, ಬಿ. ಜಾಫರ್ ಸಾದಿಕ್, ಎಂ. ಮಹಮೂದ್ ಇವರು ಬೆಂಕಿ ಅವಘಡ ನಡೆದಿರುವ ಗುಡಿಸಲು ಹಾಗೂ ಮನೆಗಳಿಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.