ಬಳ್ಳಾರಿ

ಕೆಲವರ ಸ್ವಹಿತಾಸಕ್ತಿಗೆ ಉಭಯ ಪೀಠಗಳ ಒಗ್ಗೂಡುವಿಕೆ ಬಲಿ: ಶ್ರೀ

Published On :

ಕೊಟ್ಟೂರು: ಪಂಚಮಸಾಲಿ ಜನಾಂಗದವರ ಆಶಯದಂತೆ ಒಂದೇ ಸೂರಿನಡಿ ಕೂಡಿಕೊಳ್ಳಲು ತಾವು ಮುಕ್ತಮನಸ್ಸು ಹೊಂದಿದ್ದೇವೆ. ಹರಿಹರ ಪೀಠದ ಸ್ವಾಮೀಜಿ ಸಹ ಪೂರಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೆ ಸಂಘಟನೆಯ ಕೆಲ ಮುಖಂಡರ ಸ್ವಹಿತಾಸಕ್ತಿ ಪಂಚಮಸಾಲಿ ಉಭಯ ಪೀಠಗಳ ಒಗ್ಗೂಡಿಕೆಗೆ ಅಡ್ಡಿಯಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸೋಮವಾರ ರಾತ್ರಿ ಪಟ್ಟಣದ ಪಂಪಾಪತಿ ಅಂಗಡಿಯವರ ನಿವಾಸದಲ್ಲಿ ಆಯೋಜಿಸಿದ್ದ ಮನೆ ಮನದಲ್ಲಿ ಕೂಡಲಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠ ಒಂದೇ ಇರಬೇಕೆಂಬ ಕಾರಣಕ್ಕಾಗಿ ಈ ಹಿಂದೆ ಅಕ್ಟೋಬರ್‌ನಲ್ಲಿ ತಾವೆ ಮುಂದಾಗಿ ಹರಿಹರ ಸ್ವಾಮೀಜಿಗಳೊಂದಿಗೆ ಕೂಡಿ ಮಾತನಾಡಲು ಮುಂದಾಗುವುದಾಗಿ ಪ್ರಕಟಿಸಿದ್ದೆ. ಇದಕ್ಕೆ ಈಗಲೂ ಸಹ ತಾವು ಬದ್ಧ. ಸಮಗ್ರ ಪಂಚಮಸಾಲಿ ಜನಾಂಗ ಅಭಿವೃದ್ಧಿಪಡಿಸುವುದೆ ಕೂಡಲಸಂಗಮ ಪೀಠದ ಉದ್ದೇಶ. ತಾವು ಯಾವ ಬಗೆಯ ಹಮ್ಮು, ಬಿಮ್ಮು ಇಲ್ಲದೆ ಹರಿಹರದ ಸ್ವಾಮೀಜಿಗಳೊಂದಿಗೆ ಕೂಡಿ ಕೆಲಸ ಮಾಡಲು ಈಗಲೂ ಸಿದ್ಧ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಭಯ ಪೀಠಗಳ ನಡುವೆ ಕಂದಕಗಳು ಖಂಡಿತಾ ಇಲ್ಲ. ಆದರೆ ಕೆಲವರು ಪ್ರತಿಷ್ಠೆಗಾಗಿ ಇದನ್ನೇ ಮುಂದು ಮಾಡಿಕೊಂಡು ಒಗ್ಗೂಡುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಇದಕ್ಕಂತೂ ತಾವು ಕಾರಣರಲ್ಲ ಎಂದರು.
ವರ್ತಕ ಪಂಪಾಪತಿ ಅಂಗಡಿ, ಸಿ. ಬಸವರಾಜ್, ಖಾನಾವಳಿ ಶಿವಕುಮಾರ್, ವೆಂಕಟೇಶ್ ನಾಯ್ಕ, ಪಿ. ನಾಗೇಶ್, ಸಣ್ಣಕೊಟ್ರಯ್ಯ, ರೆಡ್ಡಿ ಭರಮನಗೌಡ, ಮುಖೇಶ್, ದೇವರಮನಿ ಶಶಿಮೌಳಿ, ತಿರುಕಪ್ಪ, ಮುರುಳಸಿದ್ದೇಶ, ಪ್ರಕಾಶ, ಶಿವರಾಜ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.