ಬಳ್ಳಾರಿ

ಎಪಿಎಂಸಿ ಅಧ್ಯಕ್ಷರಾಗಿ ಕೆ. ರಾಮಕೃಷ್ಣ ಆಯ್ಕೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 13
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ರೂಪನಗುಡಿ ಕೃಷಿಕರ ಕ್ಷೇತ್ರದ ಕೆ. ರಾಮಕೃಷ್ಣ ಒಟ್ಟು 17 ಮತಗಳ ಪೈಕಿ 11 ಮತಗಳನ್ನು ಪಡೆದು ಚುನಾಯಿತರಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ವೀರೇಶ್‌ಗೌಡ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇದೀಗ 2ನೇ ಅವಧಿಯ ಮಧ್ಯಂತರ ಚುನಾವಣೆ ನಡೆದಿದ್ದು, ಪ್ರತಿಸ್ಪರ್ಧಿಯಾಗಿದ್ದ ಮೋಕಾ ಕೃಷಿಕರ ಕ್ಷೇತ್ರದ ಮಾರೆಪ್ಪ 6 ಮತಗಳನ್ನು ಪಡೆದರೆ, ಕೆ. ರಾಮಕೃಷ್ಣ  11 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾಗಿದ್ದಾರೆ.
ಒಟ್ಟು 17 ಸದಸ್ಯರನ್ನು ಹೊಂದಿರುವ ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೃಷಿಕ ಕ್ಷೇತ್ರದಿಂದ 11, ವರ್ತಕ ಕ್ಷೇತ್ರ 1, ಸಹಕಾರಿ ಸಂಘಗಳ ಕ್ಷೇತ್ರ 1, ಕೃಷಿ ಸಂಸ್ಕರಣ ಘಟಕದಿಂದ 4 ನಾಮನಿರ್ದೇಶನ ಸದಸ್ಯರು ಮತಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಒಟ್ಟು 5 ವರ್ಷದ ಎಪಿಎಂಸಿ ಸದಸ್ಯರ ಅವಧಿಯ ಪೈಕಿ 20 ತಿಂಗಳ ಅಧಿಕಾರಾವಧಿ ಅಧ್ಯಕ್ಷರದ್ದಾಗಿದೆ ಎಂದು ಚುನಾವಣಾಧಿಕಾರಿ ಶರಣಪ್ಪ ತಿಳಿಸಿದರು.
ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಶರಣಪ್ಪಗೆ ಶುಕ್ರವಾರ ಬೆಳಗ್ಗೆ ರೂಪನಗುಡಿ ಕೃಷಿಕರ ಕ್ಷೇತ್ರದ ಕೆ. ರಾಮಕೃಷ್ಣ ಒಂದು, ಮಾರೆಪ್ಪ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದರು.ದಾಖಲೆಗಳೆಲ್ಲವೂ ಸರಿಯಿದ್ದು, ಯಾರೊಬ್ಬರೂ ಹಿಂಪಡೆಯದ ಹಿನ್ನೆಲೆಯಲ್ಲಿ ಮಧ್ಯಾಹ್ನ 2ರಿಂದ 2.30ರ ವರೆಗೆ ಮತದಾನ ಜರುಗಿತು. 2.30ರಿಂದ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಒಟ್ಟು 17 ಮತಗಳ ಪೈಕಿ 11 ಕೆ. ರಾಮಕೃಷ್ಣ, ಪ್ರತಿಸ್ಪರ್ಧಿ ಮಾರೆಪ್ಪ 5 ಮತಗಳನ್ನು ಪಡೆದ್ದಿದ್ದು, ಒಂದು ಕುಲಗೆಟ್ಟ ಮತವೆಂದು ತಿರಸ್ಕೃತಗೊಂಡಿದೆ. ಆರು ಮತಗಳ ಅಂತರದಿಂದ ಕೆ. ರಾಮಕೃಷ್ಣ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಶರಣಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರವೀಂದ್ರರೆಡ್ಡಿ, ವೀರೇಶ್ ಸೇರಿದಂತೆ ಇತರರು ಇದ್ದರು. ಮತದಾನ ಕೇಂದ್ರಕ್ಕೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದರು. ಚುನಾವಣೆ ಶಾಂತಿಯುತವಾಗಿ ನಡೆಯಿತು. ಚುನಾವಣೆಯಲ್ಲಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಸಹಾಯಕ ಆಯುಕ್ತ ಅನಿರುದ್ ಶ್ರವಣ್, ಹೆಚ್ಚುವರಿ ಎಸ್‌ಪಿ ಸಿ.ಕೆ. ಬಾಬಾ, ಡಿವೈಎಸ್‌ಪಿ ಮುರುಗಣ್ಣವರ್, ರುದ್ರಮುನಿ, 3 ಸಿಪಿಐ, 6 ಪಿಎಸ್‌ಐ, ಎಎಸ್‌ಐ ಸೇರಿದಂತೆ ಪೊಲೀಸ್ ಪೇದೆಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.