ವಿರೂಪಾಕ್ಷೇಶ್ವರ ತೆಪ್ಪೋತ್ಸವ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿಯ ತೆಪ್ಪೋತ್ಸವ ದೇವಸ್ಥಾನದ ಬಲ ಭಾಗದಲ್ಲಿರುವ ಮನ್ಮಥ ಪುಷ್ಕರಣಿಯಲ್ಲಿ ಮಂಗಳವಾರ ರಾತ್ರಿ ಶ್ರದ್ದಾಭಕ್ತಿಯಿಂದ ನಡೆಯಿತು.
ವಿರೂಪಾಕ್ಷೇಶ್ವರ ಸ್ವಾಮಿಯ ಪೂಜಾಫಲ ಅಂಗವಾಗಿ ಕಾರ್ತಿಕೋತ್ಸವ ಸಮಯದಲ್ಲಿ ನಡೆಯುವ ಈ ತೆಪ್ಪೋತ್ಸವ ಮಂಗಳವಾರ ರಾತ್ರಿ 9 ಗಂಟೆಗೆ ಆರಂಭವಾಯಿತು. ವಿರೂಪಾಕ್ಷೇಶ್ವರನನ್ನು ಹೊತ್ತ ತೆಪ್ಪ ಪುಷ್ಕರಣಿಯಲ್ಲಿ ಐದು ಸುತ್ತು ಪ್ರದಕ್ಷಿಣೆ ಹಾಕಿತು. ಇದಕ್ಕೂ ಮೊದಲು ಸಂಕಲ್ಪ ಕಾರ್ಯಕ್ರಮ ನಡೆಯಿತು.
ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ವಿರೂಪಾಕ್ಷೇಶ್ವರ ದೇವರಿಗೆ ಅರ್ಪಿಸಿದ ನವರತ್ನ ಖಚಿತ ಸುವರ್ಣಮುಖ ಕಮಲದೊಂದಿಗೆ ವಿರೂಪಾಕ್ಷೇಶ್ವರ ದೇವರನ್ನು ಅಲಂಕರಿಸಲಾಗಿತ್ತು.
ತೆಪ್ಪೋತ್ಸವ ಸಂದರ್ಭದಲ್ಲಿ ಪಂಡಿತ ಪುರೋಹಿತರು ಮಂತ್ರ ಘೋಷಗಳನ್ನು ಹೇಳಿದರೆ, ಪಾಲ್ಗೊಂಡಿದ್ದ ಸಾವಿರಾರು ಭಕ್ತರು ಪುರದೊಡೆಯನಿಗೆ ಭಕ್ತಿಯಿಂದ ನಮಿಸಿ ಜೈಕಾರ ಹಾಕಿದರು. ಅಲ್ಲದೆ ದೇವರಿಗೆ ಫಲಪುಷ್ಪ ಅರ್ಪಿಸಿದರು.
ಗುರುವಾರ ವಿರೂಪಾಕ್ಷೇಶ್ವರನಿಗೆ ನಿಶ್ಚಿತಾರ್ಥದ ಫಲಪೂಜಾ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷ ವಿರೂಪಾಕ್ಷೇಶ್ವರ ದೇವರ ತೆಪ್ಪೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪೂಜಾಫಲ ನಿಮಿತ್ತ ಆಚರಿಸಲಾಗುವ ಈ ತೆಪ್ಪೋತ್ಸವದ ಸಂದರ್ಭದಲ್ಲಿ ದೇವರಿಗೆ ಸಂಕಲ್ಪ ಮಾಡಿಕೊಳ್ಳಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

