ಸುದ್ದಿ ಸಂಕ್ಷೇಪ
ಇಂದು ಉದ್ಘಾಟನೆ
ಹೊಸಪೇಟೆ: ವಡಕರಾಯ ಸೌಹಾರ್ದ ವಿವಿಧೋದ್ದೇಶ ಸಹಕಾರಿ ನಿಯಮಿತದ ಉದ್ಘಾಟನಾ ಸಮಾರಂಭ ನಗರದ ವಡಕರಾಯ ವೃತ್ತದ ಬಳಿ ಡಿ. 22ರಂದು ಭಾನುವಾರ ಮಧ್ಯಾಹ್ನ 12.30ಕ್ಕೆ ನಡೆಯಲಿದೆ. ಹಂಪಿಯ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಕಾರ್ಯಕ್ರಮ ಉದ್ಘಾಟಿಸುವರು. ವಡಕರಾಯ ಸೌಹಾರ್ದ ವಿವಿಧೋದ್ದೇಶ ಸಹಕಾರಿ ನಿಯಮಿತದ ಅಧ್ಯಕ್ಷ ಕೆ. ನರಸಿಂಹಮೂರ್ತಿ ಅಪ್ಪಣ್ಣ ಅಧ್ಯಕ್ಷತೆ ವಹಿಸುವರು. ಸಹಕಾರಿ ಸಂಘಗಳ ಉಪ ವಿಭಾಗದ ಸಹಾಯಕ ನಿಬಂಧಕ ಡಾ.ಜಿ. ಉಮೇಶ್, ಡಿವೈಎಸ್ಪಿ ಡಿ.ಡಿ. ಮಾಳಗಿ, ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ನಿರ್ದೇಶಕ ಎಸ್.ಎಲ್. ಆನಂದ್, ಬಾಬಾಲಾಲ್ ಜೈನ್, ಕಾಕುಬಾಳು ಸೀತಾರಾಮ ಶೆಟ್ಟಿ, ವಿವೇಕಾನಂದ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಕಟ್ಟಾ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಡಕರಾಯ ಸೌಹಾರ್ದ ವಿವಿಧೋದ್ದೇಶ ಸಹಕಾರಿ ನಿಯಮಿತ ಉಪಾಧ್ಯಕ್ಷೆ ಶಾರದಾ ಕುಲಕರ್ಣಿ, ನಿರ್ದೇಶಕ ಗುದ್ಲಿ ಪರಶುರಾಮ, ಅಪ್ಪರಾವ್ ಸಾನಬಾಳ, ಎನ್.ಟಿ. ರಾಜು, ಚಂದ್ರಕಾಂತ್ ಕಾಮತ್, ಬಿ. ಕಿಶೋರ, ಎಂ. ಲಕ್ಷ್ಮೀ ವೆಂಕಪ್ಪ, ನಿರ್ಮಲ್ಕುಮಾರ್ ಜೈನ್, ಜಿ. ಸಂಜೀವ ಶೆಟ್ಟಿ, ಈ. ಪ್ರಸಾದ್ ಭಾಗವಹಿಸುವರು.
ಕಾಂಗ್ರೆಸ್ಗೆ ನೇಮಕ
ಬಳ್ಳಾರಿ: ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿಯ ಸ್ಥಳೀಯ ಕಂಟೋನ್ಮೆಂಟ್ ಬ್ಲಾಕ್ ಉಪಾಧ್ಯಕ್ಷರಾಗಿ ಬಿ. ದ್ರಾಕ್ಷಾಯಿಣಿ ಅವರು ನೇಮಕವಾಗಿದ್ದಾರೆ. ಪಕ್ಷದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ ನಾಯ್ಡು ಸೂಚನೆ ಮೇರೆಗೆ ಜಿಲ್ಲಾಧ್ಯಕ್ಷೆ ಸೌಭಾಗ್ಯಲಕ್ಷ್ಮಿ ದ್ರಾಕ್ಷಾಯಿಣಿ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಎಸ್ಡಿಎಂಸಿಗೆ ಆಯ್ಕೆ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯ 6ನೇ ವಾರ್ಡ್ನ ಎ.ಕೆ. ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎಸ್ಡಿಎಂಸಿ ಅಧ್ಯಕ್ಷರಾಗಿ ಎಲ್. ಕೃಷ್ಣ, ಉಪಾಧ್ಯಕ್ಷರಾಗಿ ಎಂ. ಸರೀತಾ ಸ್ವಾಮಿ, ಸದಸ್ಯರಾಗಿ ವಿ. ಆನಂದ, ಎಲ್. ಚಿಮ್ಮನಹಳ್ಳಿ, ಎಲ್. ಚಂದ್ರಶೇಖರ್, ಕೆ. ಪರಶುರಾಮ, ಎಂ. ಸಾರೇಪ್ಪ, ಕೆ. ರೇಣುಕಮ್ಮ, ಎಲ್. ಶಿವಮ್ಮ, ಎಲ್. ಮಂಜುಳಾ, ಎಲ್. ಶಾರದಾ, ಬಿ. ಸಾವಿತ್ರಮ್ಮ, ವಿ. ಪರಶುರಾಮ ಆಯ್ಕೆಗೊಂಡಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ವೇದಿಕೆಗೆ ನೇಮಕ
ಕುರುಗೋಡು: ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತ ವೇದಿಕೆ ಸಭೆಯಲ್ಲಿ ಎನ್. ರಾಜ ಅವರನ್ನು ಕುರುಗೋಡು ತಾಲೂಕಿನ ನೂತನ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಘಟಕದ ಅದ್ಯಕ್ಷ ಗುಜ್ಜಲ ನಾಗರಾಜ, ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಪಿ. ಜಗನ್ನಾಥ, ಅಧ್ಯಕ್ಷ ವಿಜಯಕುಮಾರ ಹಾಗೂ ತಾಲೂಕಾಧ್ಯಕ್ಷ ಮಿಂಚೇರಿ ರಾಮಾಂಜನಿ ಇದ್ದರು.
ಡಾ.ಟಿ. ಶಶಿಧರ್ಗೆ ಪ್ರಶಸ್ತಿ ಪ್ರದಾನ
ಬಳ್ಳಾರಿ: ನಗರದ ಪಶು ವೈದ್ಯಕೀಯ ಪರೀಕ್ಷರ ತರಬೇತಿ ಕೇಂದ್ರದ ಪಶು ವೈದ್ಯಾಧಿಕಾರಿ ಡಾ.ಟಿ. ಶಶಿಧರ್ಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ಶ್ರೇಷ್ಠ ಪಶು ವೈದ್ಯ ಪ್ರಶಸ್ತಿ ಲಭಿಸಿದೆ.
ಗುಲ್ಬರ್ಗಾದಲ್ಲಿ ಈಚಗೆ ನಡೆದ ರಾಜ್ಯ ಮಟ್ಟದ ಪಶು ವೈದ್ಯಕೀಯ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಪಶು ಸಂಗೋಪನಾ ಇಲಾಖೆ ಮಾಜಿ ಸಚಿವ ರೇವು ನಾಯಕ ಬೆಳಮಗಿ ಅವರು ಡಾ. ಶಶಿಧರ್ಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಕರ್ನಾಟಕ ಪಶು ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ಟಿ. ಶ್ರೀನಿವಾಸ ರೆಡ್ಡಿ, ಗುಲ್ಬರ್ಗ ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ದರಾಮಪ್ಪ ಪಾಟೀಲ್ ದಂಗಾಪುರ ಮತ್ತಿತರರು ಉಪಸ್ಥಿತರಿದ್ದರು.
ಅಭಿನಂದನೆ: ಡಾ. ಶಶಿಧರ್ ಅವರಿಗೆ ಪ್ರಶಸ್ತಿ ಲಭಿಸಿರುವುದನ್ನು ಬಳ್ಳಾರಿ ಜಿಲ್ಲಾ ಪಶು ವೈದ್ಯಕೀಯ ಸಂಘ ಮತ್ತು ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಸ್ವಾಗತಿಸಿ ಅಭಿನಂದಿಸಿವೆ.
ಡಾ. ಶಶಿಧರ್ ಅವರು ಪಶು ವೈದ್ಯರಾಗಿ ಸಲ್ಲಿಸಿರುವ ನಿಸ್ವಾರ್ಥ, ಪ್ರಾಮಾಣಿಕ ಹಾಗೂ ಅನುಪಮ ಸೇವೆಗೆ ಈ ಹಿಂದೆಯೇ ಪ್ರಶಸ್ತಿ ಲಭಿಸಬೇಕಾಗಿತ್ತು. ಸಂಘದ ಕೇಂದ್ರ ಸಮಿತಿ ತಡವಾಗಿಯಾದರೂ ಅರ್ಹರಿಗೆ ಪ್ರಶಸ್ತಿ ನೀಡಿರುವುದು ತಮಗೆ ಸಂತಸವನ್ನುಂಟು ಮಾಡಿದೆ ಎಂದು ಜಿಲ್ಲಾ ಪಶುವೈದ್ಯಕೀಯ ಸಂಘದ ಪದಾಧಿಕಾರಿಗಳು, ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

