ಮಾನವೀಯತೆ, ಅಂತಃಕರಣದ ಕವಿ ಜಿಎಸ್ಸೆಸ್
ಹೂವಿನಹಡಗಲಿ: ಡಾ. ಜಿ.ಎಸ್. ಶಿವರುದ್ರಪ್ಪ ಮಾನವೀಯತೆಯ ಅಂತಃಕರಣದ ಕವಿಯಾಗಿದ್ದರು, ಸಾಮಾಜಿಕ ಜವಾಬ್ದಾರಿ ಅರಿತು, ಕಾವ್ಯ ರಚನೆ ಜನಪರವಾಗಿರಬೇಕೆಂದು ಅವರ ಆಶಯವಾಗಿತ್ತು ಎಂದು ಸಾಹಿತಿ ಕೆ. ವಿರೂಪಾಕ್ಷಗೌಡ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ನೌಕರರ ಸಂಘ, ಕಸಾಪ, ಕರ್ನಾಟಕ ಜನಪದ ಪರಿಷತ್ತು, ಚುಸಾಪ, ರಂಗಭಾರತಿ ಆಶ್ರಯದಲ್ಲಿ ಡಾ. ಜಿ.ಎಸ್. ಶಿವರುದ್ರಪ್ಪಗೆ ಭಾವಸ್ಪಂದನೆ ನುಡಿನಮನದಲ್ಲಿ ಮಾತನಾಡಿದರು.
ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ರವರ ಸೌಂದರ್ಯ ಮೀಮಾಂಸೆ, ಭಾರತೀಯ ಕಾವ್ಯ ಮೀಮಾಂಸೆ ಬಗ್ಗೆ ಉತ್ಕೃಷ್ಟ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೂಡುಗೆ ನೀಡಿ ಶ್ರೀಮಂತಗೊಳಿಸಿದ್ದಾರೆ ಎಂದು ಬಣ್ಣಿಸಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಸಾಹಿತಿ ಮೇಟಿ ಕೊಟ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ, ಬೀಚಿ ಬಳಗದ ಅಧ್ಯಕ್ಷ ಎಂ. ತವನಪ್ಪ, ಕಸಾಪ ಅಧ್ಯಕ್ಷ ಸುರೇಶ ಅಂಗಡಿ, ಉದಯಕುಮಾರ, ಎಲ್. ಖಾದರ ಬಾಷಾ, ಆನಂದರಾವ್, ಸಿದ್ದೇಶ, ಕೆ. ಮಲ್ಲಪ್ಪ, ಕೆ.ಎ.ಕೆ. ಜಿಲಾನ್, ಶಂಕರ ಬೆಟಗೇರಿ, ಟಿ.ಪಿ. ವೀರೇಂದ್ರ ಮಾತನಾಡಿದರು. ಕಸಾಪದ ದಯಾನಂದ, ಎ. ಚಂದ್ರಪ್ಪ, ಎಂ. ಚಿದಾನಂದ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

