ಬಳ್ಳಾರಿ

ಗಾಯಕ ಮಹ್ಮದ್ ರಫಿ 90ನೇ ಜನ್ಮದಿನಾಚರಣೆ

Published On :

ಬಳ್ಳಾರಿ: ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಹಾಗೂ ಟಿಪ್ಪು ಸುಲ್ತಾನ್ ಎಜ್ಯುಕೇಷನಲ್ ಮತ್ತು ಸೋಸಿಯಲ್ ಸರ್ವಿಸ್ ಸೊಸೈಟಿ ಆಶ್ರಯದಲ್ಲಿ ಮಂಗಳವಾರ ದೇಶ ಕಂಡ ಅದ್ಭುತ ಗಾಯಕ ಡಾ. ಮಹ್ಮದ್ ರಫಿ ಅವರ 90ನೇ ಜನ್ಮದಿನವನ್ನು ನಗರದ ಕಚೇರಿಯಲ್ಲಿ ಆಚರಿಸಲಾಯಿತು.
ಪ್ರಾರಂಭದಲ್ಲಿ ಮಹ್ಮದ್ ರಫಿ ಅವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗಾಯಕ ಅಬ್ದುಲ್ ಮಾಜೀದ್ ಮಾತನಾಡಿ, ಕನ್ನಡ, ತೆಲುಗು, ಮರಾಠಿ, ಗುಜರಾತಿ, ಭಾಷೆಗಳಲ್ಲಿ ಹಾಡಿ ಡಾ. ರಫಿ ಅವರು ಪ್ರಸಿದ್ಧಿ ಪಡೆದವರಾಗಿದ್ದರು. ಚಿತ್ರರಂಗದ ಶಾಸ್ತ್ರೀಯ ಸಂಗೀತದ ಮಾಧುರ್ಯವನ್ನು ತಂದವರಲ್ಲಿ ಅಗ್ರಸ್ಥಾನ ಅವರದು. ಗಜಲ್, ಖವ್ವಾಲಿ, ಭಕ್ತಿಗೀತೆಗಳು, ಶಾಸ್ತ್ರೀಯ ರಾಗದ ಸಿನಿಮಾ ಹಾಡುಗಳು, ಅವರ ಕಂಠಸಿರಿಯಿಂದ ಸುಮಧುರವಾಗಿ ಹಾಡುತ್ತಿದ್ದರು ಎಂದು ರಫಿ ಅವರನ್ನು ವರ್ಣಿಸಿದರು.
ಈ ಸಂದರ್ಭ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಜೆ. ಹುಸೇನ್ ಬಾಷಾ, ಸದಸ್ಯರಾದ ಮುನಾವರ್ ಹುಸೇನ್, ದಿಲ್ಲಿ ದರಬಾರ್ ಸಾಹೇಬ್, ರಿಜ್ವಾನ್ ಖಾನ್, ಗನಿ, ಕೆ. ರಫಿಕ್, ಮಾಸ್ಟರ್ ಅಹ್ಮದ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.