ಹಂಪಿ ಸ್ಮಾರಕಗಳ ತ್ರೀಡಿ ಸ್ಕ್ಯಾನಿಂಗ್
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಡಿ. 26
ವಿಶ್ವವಿಖ್ಯಾತ ಹಂಪಿಯ ವಿಜಯವಿಠ್ಠಲ ದೇವಸ್ಥಾನ ಸೇರಿದಂತೆ ಕೆಲ ಸ್ಮಾರಕಗಳನ್ನು ತ್ರೀಡಿ ಸ್ಕಾನಿಂಗ್ ಮಾಡುವ ಕಾರ್ಯ ಕಳೆದ 3-4 ದಿನಗಳಿಂದ ಭರದಿಂದ ಹಂಪಿಯಲ್ಲಿ ನಡೆಯುತ್ತಿದೆ.
ಹಂಪಿಯ ಸ್ಮಾರಕಗಳು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆಯೋ ಅಥವಾ ಮಳೆ-ಗಾಳಿಗೆ-ಬಿಸಿಲಿಗೆ ಸ್ಮಾರಕಗಳು ಹಾಳಾಗುತ್ತಿವೆಯೋ ಅಥವಾ ಹಂಪಿ ವ್ಯಾಪ್ತಿಯ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಥವಾ ಕಲ್ಲು ಗಣಿಗಾರಿಕೆಯಿಂದ ಸ್ಮಾರಕಗಳು ಹಾಳಾಗುತ್ತಿವೆಯೋ ಎನ್ನುವುದನ್ನು ಸೂಕ್ಷ್ಮವಾಗಿ ಪತ್ತೆ ಹಚ್ಚಲು ಕೆರಳದಿಂದ ಆಗಮಿಸಿದ ಟೆಕ್-7 ತಂಡದಿಂದ ತ್ರೀಡಿ ಸ್ಕ್ಯಾನಿಂಗ್ ಮಾಡುವ ಕಾರ್ಯ ಭರದಿಂದ ನಡೆಯುತ್ತಿದೆ.
ಹಂಪಿಯ ಸ್ಮಾರಕಗಳ ಈಗಿನ ಸ್ಥಿತಿ ಯಾವ ರೀತಿಯಲ್ಲಿದೆ. ಸ್ಮಾರಕಗಳ ವಸ್ತುಸ್ಥಿತಿ ಯಾವ ರೀತಿಯಲ್ಲಿದೆ. ಸ್ಮಾರಕದ ಮೇಲಿನ ಗೋಪುರ ಎಷ್ಟು ದಪ್ಪದಲ್ಲಿದೆ. ಎಷ್ಟು ಎತ್ತರದಲ್ಲಿದೆ. ಗೋಪುರಗಳ ಯಾವ ಪ್ರದೇಶದಲ್ಲಿ ಬಿರುಕುಗಳು ಬಿಟ್ಟಿವೆ. ಬಿರುಕುಗಳು ಯಾವ ಪ್ರಮಾಣದಲ್ಲಿವೆ. ಗೋಪುರ ಯಾವ ಕಡೆ ಹೆಚ್ಚು ವಾಲುತ್ತಿದೆ. ಸ್ಮಾರಕಗಳ ಕಟ್ಟಡಗಳು ಯಾವ ಹಂತದಲ್ಲಿ ಕುಸಿಯುತ್ತಿವೆ. ಯಾವ ಕಡೆ ವಾಲುತ್ತಿವೆ ಎನ್ನುವುದನ್ನು ನಿಖರವಾಗಿ ದಾಖಲಿಸುವ ಮತ್ತು ತ್ರೀಡಿ ಸ್ಕಾನಿಂಗ್‌ನಲ್ಲಿ ಕಂಫ್ಟೂಟರ್ ಮೂಲಕ ಸ್ಮಾರಕಗಳ ಬಗ್ಗೆ ಸಮಗ್ರವಾಗಿ ತಿಳಿಯಲು ತ್ರಿಡಿ ಸ್ಕ್ಯಾನಿಂಗ್ ಸಹಕಾರಿಯಾಗಲಿದೆ. ಈ ರೀತಿಯಲ್ಲಿ ಸ್ಮಾರಕಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಮತ್ತು ಸ್ಮಾರಕಗಳನ್ನು ನೈಜ ಸ್ವರೂಪ ದಾಖಲಿಸಲು ತ್ರೀಡಿ ಸ್ಕ್ಯಾನಿಂಗ್ ಕಾರ್ಯ ನಡೆಯುತ್ತಿದೆ.
ಕೇಂದ್ರ ಮತ್ತು ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ತ್ರೀಡಿ ಸ್ಕ್ಯಾನಿಂಗ್ ಕಾರ್ಯ ನಡೆಯುತ್ತಿದ್ದು, ಹಂಪಿಯ ವಿಜಯವಿಠ್ಠಲ ದೇವಸ್ಥಾನದ ಗೋಪುರ, ಹಜಾರ ರಾಮ ದೇವಸ್ಥಾನ, ಅಚ್ಚುತರಾಯ ದೇವಸ್ಥಾನ, ವರಾಹ ದೇವಸ್ಥಾನ, ಕುದುರೆ ಗೊಂಬೆ ಮಂಟಪ ಸೇರಿದಂತೆ ಹಂಪಿಯ ಕೆಲ ಮಹತ್ವ ಸ್ಮಾರಕಗಳನ್ನು ತ್ರೀಡಿ ಸ್ಕ್ಯಾನಿಂಗ್ ಮೂಲಕ ಸ್ಮಾರಕಗಳಲ್ಲಿರುವ ಬಿರುಕುಗಳನ್ನು ಪತ್ತೆ ಹಚ್ಚುವ ಕಾರ್ಯ ತ್ರೀಡಿ ಸ್ಕ್ಯಾನಿಂಗ್ ತಂಡ ನಿರತವಾಗಿದೆ. ಈಗಾಗಲೇ ಹಂಪಿಯ ಕೃಷ್ಣ ದೇವಸ್ಥಾನ ಸೇರಿದಂತೆ ಕೆಲ ಸ್ಮಾರಕಗಳನ್ನು ಈಗಾಗಲೇ ತ್ರೀಡಿ ಸ್ಕ್ಯಾನಿಂಗ್ ಮಾಡಲಾಗಿದೆ. ಈಗ ಉಳಿದ ಕೆಲ ಸ್ಮಾರಕಗಳ ತ್ರೀಡಿ ಸ್ಕ್ಯಾನಿಂಗ್ ಕಾರ್ಯ ಹಂಪಿಯಲ್ಲಿ ನಡೆಯುತ್ತಿದೆ.
ಬೆಂಗಳೂರಿನ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ ತ್ರೀಡಿ ಸ್ಕ್ಯಾನಿಂಗ್ ತಂಡ ಭೇಟಿ ಮಾಡಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯನ್ನು ತ್ರೀಡಿ ಸ್ಕ್ಯಾನಿಂಗ್ ಕಾರ್ಯ ಮುಗಿಸಿಕೊಂಡು ಬೆಂಗಳೂರಿನಿಂದ ನೇರವಾಗಿ ಹಂಪಿಗೆ ಆಗಮಿಸಿ ತ್ರೀಡಿ ಲೇಜರ್ ಕಿರಣಗಳಿಂದ ಸ್ಮಾರಕಗಳನ್ನು ಸ್ಕ್ಯಾನಿಂಗ್ ಮಾಡುವ ಕಾರ್ಯ ನಡೆಯುತ್ತಿದೆ.
ತ್ರೀಡಿ ಸ್ಕಾನಿಂಗ್ ಮೂಲಕ ಸ್ಮಾರಕಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಕಂಫ್ಟೂಟರ್‌ನಲ್ಲಿ ವೀಕ್ಷಿಸಿ ಸ್ಮಾರಕಗಳನ್ನು ಯಾವ ರೀತಿಯಲ್ಲಿ ಸಂರಕ್ಷಿಸಬಹುದು ಎಂಬ ಮಾಹಿತಿಯನ್ನು ತ್ರೀಡಿ ಸ್ಕ್ಯಾನಿಂಗ್ ಉಪಯೋಗಿಕಾರಿಯಾಗಿದೆ ಎಂದು ಹಂಪಿಗೆ ಆಗಮಿಸಿದ ಅಧಿಕಾರಿಗಳ ತಂಡ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

